ಭಾರತ್ ಜೋಡೋ ಯಾತ್ರೆಯ ಪಾದಯಾತ್ರೆಯಲ್ಲಿ ಹೆಜ್ಜೆಯ ಛಾಪು ಮೂಡಿಸಿದ ಜಿಲ್ಲೆಯ ಕಲ್ಲೇಶ್ ರಾಜ್ ಪಟೇಲ್

ದಾವಣಗೆರೆ: ಬಾವೈಕ್ಯತೆ, ದೇಶದ ಸಮಗ್ರತೆ, ಸಂವಿಧಾನ ರಕ್ಷಣೆಯನ್ನು ಸಾರುತ್ತ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೆಪ್ಟೆಂಬರ್ 7 ರಂದು ಕಾಂಗ್ರೆಸ್ ಪಕ್ಷ ಆರಂಭಿಸಿದ್ದ 3970 ಕಿಮಿ ಗಳ ಉದ್ದದ ಭಾರತ್ ಜೋಡೋ ಪಾದಯಾತ್ರೆಯು ಈಗ ಅಂತಿಮ ಘಟ್ಟ ತಲುಪಿದ್ದು, ನಾಳೆ ಜನವರಿ 30 ರಂದು ಸಮಾರೋಪ ಸಮಾರಂಭ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಜರುಗಲಿದೆ, ಈ ಯಾತ್ರೆಯು ದೇಶದ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ್, ಹರ್ಯಾಣ, ದೆಹಲಿ, ಉತ್ತರಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ ಮಾರ್ಗವಾಗಿ ಜಮ್ಮು ಕಾಶ್ಮೀರ ಪ್ರವೇಶಿಸಿದೆ.
ಈ ಪಾದಯಾತ್ರೆಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಕ್ರಿಯವಾಗಿ ಭಾಗವಹಿಸಿರುವ ನಮ್ಮ ಜಿಲ್ಲೆಯವರು ಹಾಗೂ ಜಗಳೂರು ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸಂಯೋಜಕ ಉಸ್ತುವಾರಿಗಳಾದ ಕಲ್ಲೇಶ್ ರಾಜ್ ಪಟೇಲ್ ರವರಿಗೆ ದಾವಣಗೆರೆ ಜಿಲ್ಲಾ ಸಾಮಾಜಿಕ ಜಾಲತಾಣದ ವತಿಯಿಂದ ಕೆ.ಎಲ್. ಹರೀಶ್ ಬಸಾಪುರ ಅಭಿನಂದನೆ ಸಲ್ಲಿಸಿದ್ದಾರೆ.