ಶ್ರೀನಗರದಲ್ಲಿ ಭಾರತ್ ಜೋಡೋ ಸಮಾರೋಪ ಸಮಾರಂಭ: ಹೊನ್ನಾಳಿಯಲ್ಲಿ ಸಂಭ್ರಮೋತ್ಸವ

ಹೊನ್ನಾಳಿ : ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾಜಿ ಶಾಸಕ ಶಾಂತನಗೌಡ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಶ್ಮೀರ ತಲುಪಿದ ಕೊನೆ ದಿನ ಕಾರಣ ಝಂಡಾ ಹಾರಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಶಾಂತನಗೌಡ ಮಾತನಾಡಿ, 3500 ಕಿಲೋಮೀಟರ್‌ಗಳು ಪ್ರಯಾಣವನ್ನು ರಾಹುಲ್ ಗಾಂಧಿ ಬೆಳೆಸಿದ್ದಾರೆ. ಇಂದು ಯಾತ್ರೆ ಕೊನೆಗೊಳ್ಳುವ ಕಾರಣ ಶಾಸಕ ಶಾಂತನಗೌಡ ಅದ್ದೂರಿ ಸಂಭ್ರಮಾಚಾರಣೆ ಮಾಡಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಜೋಡೋ ಯಾತ್ರೆಯಲ್ಲಿ ಕನ್ಯಾಕುಮಾರಿ, ತಿರುವನಂತಪುರ, ಕೊಚ್ಚಿ, ಮೈಸೂರು, ಬಳ್ಳಾರಿ, ರಾಯಚೂರಿನಿಂದ ಪ್ರಾರಂಭಿಸಿ ಶ್ರೀನಗರಕ್ಕೆ ತಲುಪುವ ಯೋಜನೆ ಹಾಕಿಕೊಂಡಿತ್ತು.
ಈ ಯಾತ್ರೆಯನ್ನು ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು, ಸಾಮಾಜಿಕ ಧ್ರುವೀಕರಣದಿಂದ ಮುಕ್ತಿ ಪಡೆಯಲು ರಾಜಕೀಯ ಹೋಗಲಾಡಿಸಿ, ಆರೋಗ್ಯಕರ ರಾಜಕಾರಣದ ಆರಂಭಕ್ಕಾಗಿ ಕೈಗೊಳ್ಳುತ್ತಿರುವುದಾಗಿ ಕಾಂಗ್ರೆಸ್ ಹೇಳಿದ್ದು, ಎಲ್ಲರೂ ಒಂದಾಗಿ ಭಾರತವನ್ನು ಒಗ್ಗೂಡಿಸೋಣ ಎಂದು ಕಾಂಗ್ರೆಸ್ ಕರೆ ನೀಡಿತ್ತು.
ಶ್ರೀನಗರದಲ್ಲಿ ಭಾರತ್ ಜೋಡೋ ಸಮಾರೋಪ ಸಮಾರಂಭ ನಡೆಯಲಿದ್ದು, ಅನೇಕ ನಾಯಕರು ಭಾಗವಹಿಸಿದ್ದರು. ಸೆಪ್ಟಂಬರ್ 7 ರಿಂದ ಚುನಾವಣಾ ದೃಷ್ಟಿಯಲ್ಲಿ ಈ ಯಾತ್ರೆ ಆರಂಭಗೊಳ್ಳಲಿದ್ದು, ಕರ್ನಾಟಕದಲ್ಲಿ 21 ದಿನಗಳ ಕಾಲ ಪಾದಯಾತ್ರೆ ನಡೆಯಿತು.
ಭಾರತ್ ಜೋಡೋ ಯಾತ್ರೆ ಕರ್ನಾಟಕ ಮಾತ್ರವಲ್ಲದೆ, ತೆಲಂಗಾಣ, ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ ಸೇರಿದಂತೆ ಚುನಾವಣೆಗಳಿರುವ ರಾಜ್ಯಗಳಲ್ಲಿ 15 – 20 ದಿನಗಳ ಕಾಲ ಪಾದಯಾತ್ರೆ ನಡೆದಿತ್ತು. ದೇಶಾದ್ಯಂತ ಒಟ್ಟು 3,571 ಕಿಲೋ ಮೀಟರ್‌ನಷ್ಟು ದೂರ ಕಾಂಗ್ರೆಸ್ ನಾಯಕರು ಹೆಜ್ಜೆ ಹಾಕಿದ್ದರು. 148 ದಿನಗಳ ಕಾಲ ಭಾರತ್ ಜೋಡೋ ಯಾತ್ರೆಯಲ್ಲಿ ಒಟ್ಟು 68 ಲೋಕಸಭಾ ಕ್ಷೇತ್ರಗಳು, 203 ವಿಧಾನಸಭಾ ಕ್ಷೇತ್ರಗಳಲ್ಲಿ ಕೈ ಮುಖಂಡರು ಹೆಜ್ಜೆ ಹಾಕಿದ್ದರು