ಕೊಟ್ಟೂರಿನ ಬಾರ್‌ಗಳಲ್ಲಿ ವ್ಯಾಪಾರ ಕಡಿಮೆಯಾದರೆ ಹುಣ್ಣಿಮೆ ಸಾರ್ಥಕ

ಕೊಟ್ಟೂರು: ಕೊಟ್ಟೂರು ಹಾಗೂ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಒಂಭತ್ತು ದಿನಗಳ ಕಾಲ ಆದ ವ್ಯಾಪಾರದ ಲೆಕ್ಕ ಕೇಳಬೇಕು ಎಂದುಕೊಂಡಿದ್ದೇವೆ. ವ್ಯಾಪಾರ ಕಡಿಮೆಯಾದರೆ ಹುಣ್ಣಿಮೆ ಸಾರ್ಥಕವಾದಂತಾಗುತ್ತದೆ. ವ್ಯಾಪಾರ ಹೆಚ್ಚಾದರೆ ಹುಣ್ಣಿಮೆ ವ್ಯರ್ಥವಾದಂತೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಇಲ್ಲಿನ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸರ್ಕಾರ ಮದ್ಯ ಮಾರಾಟಕ್ಕೆ ಪರವಾನಗಿ ಕೊಟ್ಟಿದೆ. ಆದರೆ, ಜನರು ಮದ್ಯ ಕುಡಿಯಲೇಬೇಕು ಎಂದೇನೂ ಇಲ್ಲ. ನೀವು ಕುಡಿಯದಿದ್ದರೆ ಬಾರ್ ಅಂಡ್ ರೆಸ್ಟೋರೆಂಟ್ ತಾನಾಗಿಯೇ ಮುಚ್ಚತ್ತವೆ ಎಂದು ಹೇಳಿದರು.
ತರಳಬಾಳು ಹುಣ್ಣಿಮೆ ಮಹೋತ್ಸವದ ಮಾತುಗಳನ್ನು ಇಲ್ಲಿ ಕೇಳಿ, ನಂತರ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಹೋದರೆ ಹುಣ್ಣಿಮೆ ವ್ಯರ್ಥವಾದಂತೆ ಎಂದು ಹೇಳುವ ಮೂಲಕ ಕುಡಿತದ ಚಟದಿಂದ ದೂರವಿರಿ ಎಂದು ಭಕ್ತರಿಗೆ ಮಾರ್ಮಿಕವಾಗಿ ಹೇಳಿದರು.

 
                         
                       
                       
                       
                       
                       
                       
                      