ದಾವಣಗೆರೆ ಜಿಲ್ಲೆಯಲ್ಲಿ 3 ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು: ಅಮಾನುಲ್ಲಾ ಖಾನ್ ವಿಶ್ವಾಸ

ದಾವಣಗೆರೆ: ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ಕ್ಷದ ಜಿಲ್ಲಾ ವಕ್ತಾರ ಜೆ.ಅಮಾನುಲ್ಲಾ ಖಾನ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಬಲಗೊಳಿಸಲು ರಾಜ್ಯ ಮುಖಂಡರು ಪಂಚರತ್ನ ಯಾತ್ರೆ ಆರಂಭಿಸಲಿದ್ದು, ನಾಳೆ ದಿ. 31ರಿಂದ 2 ದಿನ ಯಾತ್ರೆಯು ಹರಿಹರ ಕ್ಷೇತ್ರದಲ್ಲಿ ಸಂಚರಿಸಲಿದೆ ಎಂದು ಹೇಳಿದರು.
31ರ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಕೊಂಡಜ್ಜಿಗೆ ಯಾತ್ರೆ ಆಗಮಿಸಸಿದೆ. ನಂತರ ಕರ್ಲಹಳ್‌ಳಿ, ಗುತ್ತೂರು, ಬೆಳ್ಳೂಡಿ, ಎಕ್ಕೇಗುಂದಿ, ಭಾನುವಳ್ಳಿ ಮೂಲಕ ಸಂಜೆ 6ಕ್ಕೆ ಬನ್ನಿಕೋಡು ಗ್ರಾಮಕ್ಕೆ ತೆರಳಲಿದ್ದು, ಸಂಜೆ 6 ಗಂಟೆಗೆ ಬೃಹತ್ ಸಭೆ ನಡೆಯಲಿದೆ.
ಫೆ.1ರಂದು 9 ಗಂಟೆಯಿಂದ ಕೆ.ಬೇವಿನಹಳ್ಳಿ ಮೂಲಕ ಮಿಟ್ಲಕಟ್ಟೆ, ದೇವರಬೆಳಕೆರೆ, ಕುಣೆಬೆಳಕೆರೆ, ನಿಟ್ಟೂರು ಮೂಲ 11.30ಕ್ಕೆ ಮಲೇಬೆನ್ನೂರು ಆಗಮಿಲಿದ್ದು, ಬೃಹತ್ ಬಹಿರಂಗ ಸಭೆ ನಡೆಯಲಿದೆ. ನಂತರ ಜಿಗಳಿ, ಜಿ.ಬೇವಿನಹಳ್ಳಿ ಕೊಕ್ಕನೂರು, ಹಿಂಡಸಘಟ್ಟ, ಗೋವಿನಹಾಳ್, ವಾಸನ, ಕಡರನಾಯಕನಹಳ್ಳಿ, ಹೊಳೆಸಿರಿಗೆರೆ, ಕಮಲಾಪುರ ಮೂಲಕ ಸಂಜೆ 5.30ಕ್ಕೆ ಹೊಸಳ್ಳಿ, ನಂತರ 6 ಗಂಟೆಗೆ ಹರಿಹರ ನಗರಕ್ಕೆ ಆಗಮಿಸಲಿದ್ದು, ಫಕ್ಕೀರ ಸ್ವಾಮಿ ಮಠದಿಂದ ಭವ್ಯ ಮೆರವಣಿಗೆ ಹಾಗೂ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಹೇಳಿದರು.
ಯಾತ್ರೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ, ಸಿ.ಎಂ. ಇಬ್ರಾಹಿಂ, ಎನ್.ಎಂ. ರವಿಸ, ಎಲ್.ಎಸ್. ಭೋಜೇಶ್, ನಿಂಗಯ್ಯ, ನಿಖಿಲ್ ಕುಮಾರ ಸ್ವಾಮಿ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟಿ.ಅಸ್ಗರ್, ಬಾತಿ ಶಂಕರ್, ನರಸಿಂಹಮೂರ್ತಿ, ಜಮೀರ್ ಅಹ್ಮದ್, ಸಯ್ಯದ್ ಇಮ್ತಿಯಾಜ್, ಎಸ್.ಹೆಚ್. ದುಗ್ಗೇಶ್, ಇಮ್ತಿಯಾಜ್ ಖಾನ್, ಇಬ್ರಾಹಿಂ ಉಪಸ್ಥಿತರಿದ್ದರು.