ಹೊರಗುತ್ತಿಗೆ ನೌಕರರ ಖಾಯಂಗೆ ಅರ್ನಿದಿಷ್ಟಾವಧಿ ಮುಷ್ಕರ ನಾಳೆ

ದಾವಣಗೆರೆ: ನಗರದ ಸ್ಥಳೀಯ ಸಂಸ್ಥೆಗಳ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು ಸೇರಿದಂತೆ ಹೊರಗುತ್ತಿಗೆ ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೆ ತಂದು ಹಂತಹಂತವಾಗಿ ಖಾಯಂಗೊಳಿಸುವಂತೆ ಆಗ್ರಹಿಸಿ ಫೆ.೧ರಿಂದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಪಾಲಿಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಹೊರಗುತ್ತಿಗೆ ನೌಕರರ ಸಂಘ ಹಾಗೂ ದಾವಣಗೆರೆ ಮಹಾನಗರ ಪಾಲಿಕೆಯ ಹೊರಗುತ್ತಿಗೆ ಘನತ್ಯಾಜ್ಯ ವಿಲೇವಾರಿ ವಾಹನ ಚಾಲಕರ ಸಂಘದ ಸಂಯುಕ್ತಾಶ್ರಯದಲ್ಲಿ ಈ ಮುಷ್ಕರ ಹಮ್ಮಿಕೊಂಡಿದ್ದು, ನಮ್ಮ ಹೋರಾಟಕ್ಕೆ ಪೌರ ಕಾರ್ಮಿಕರ ಸಂಘ, ಮಹಾನಗರ ಪಾಲಿಕೆ, ಡಿ.ಗ್ರೂಪ್ ಪೌರ ಕಾರ್ಮಿಕ ಹಾಗೂ ನೇರ ಪಾವತಿ ಕಾರ್ಮಿಕರ ಸಂಘ ಬೆಂಬಲ ಸೂಚಿಸಿವೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಂ.ಆರ್. ದುಗ್ಗೇಶ್ ತಿಳಿಸಿದ್ದಾರೆ.

 
                         
                       
                       
                       
                       
                       
                       
                      