ತರಳಬಾಳು ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ರದ್ದು ಪಡಿಸುವಂತೆ ಕಟ್ಟಿಮನಿ ದೈವಸ್ಥರ ಮನವಿ

ಕೊಟ್ಟೂರು: ಫೆ. 5 ರಂದು ಕೊಟ್ಟೂರಿನಲ್ಲಿ ನಡೆಯಲಿರುವ ತರಳಬಾಳು ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ರದ್ದು ಪಡಿಸುವಂತೆ ಕಟ್ಟಿಮನಿ ದೈವಸ್ಥರು ಮತ್ತು ಇಲ್ಲಿನ ಸರ್ವ ಸಮುದಾಯದ ಮುಖಂಡರು ಮಂಗಳವಾರ ಉಪತಹಶೀಲ್ದಾರ ನಾಗರಾಜ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅಸಂಖ್ಯಾತ ಭಕ್ತರ ಆರಾಧ್ಯ ದೇವರು ಪವಾಡ ಪುರುಷ ಶರಣ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ತೇರುಗಾಲಿ ಹೊರ ಹಾಕಿದ ನಂತರ ಶ್ರೀ ಕ್ಷೇತ್ರದಲ್ಲಿ ಬೇರೆ ಯಾವುದೇ ಮನೆಯ ಸಮಾರಂಭಗಳು ಮತ್ತು ಧಾರ್ಮಿಕ ಉತ್ಸವಗಳನ್ನು ಹಿಂದಿನಿಂದಲೂ ನಡೆಸಿಲ್ಲ ಇದು ಇಲ್ಲಿನ ಸಂಪ್ರದಾಯ.
ಒಂದು ವೇಳೆ ನಡೆಸಿದ್ದೇ ಆದರೆ ಕೇಡಾಗುತ್ತೆ ಎಂಬುದು ಭಕ್ತರ ನಂಬಿಕೆ ಮತ್ತು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಸಮೀಪ ಫೆ-16ಕ್ಕೆ ಇರುವ ಕಾರಣ ಇಲ್ಲಿಯೂ 144 ಸೆಕ್ಷನ್ ಜಾರಿಯಾಗಿ ಈಗಾಗಲೆ ವಿವಿಧ ರಾಜ್ಯಗಳಿಂದ ಪಾದಯಾತ್ರೆ ಹಮ್ಮಿಕೊಂಡ ಭಕ್ತರ ಆಶಯಕ್ಕೆ ನಿರಾಶೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಕುಂದಾಗದಿರಲೆಂದು ತಮ್ಮಲ್ಲಿ ಮನವಿ ಮಾಡಿಕೊಂಡರು.
ಈ ಹಿನ್ನೆಲೆಯೊಂದಿಗೆ ತರಳಬಾಳು ಶ್ರೀಗಳಿಗೆ ಮತ್ತು ಕೊಟ್ಟೂರಿನ ಜನತೆಗೆ ಹಾಗೂ ಸರ್ವ ಭಕ್ತ ವೃಂದದವರಿಗೆ ಒಳಿತಾಗಬೇಕು ಎಂಬ ಕಾರಣಕ್ಕೆ ಪಟ್ಟಣದ ಒಳಗೆ ಫಲಕ್ಕಿ ಉತ್ಸವ ನಡೆಸುವ ಚಿಂತನೆ ಕೈ ಬಿಟ್ಟು, ಊರ ಹೊರಭಾಗದಲ್ಲಿ ಮಂಟಪದ ಬಳಿ ತಮ್ಮ ಪಲ್ಲಕ್ಕಿ ಉತ್ಸವವನ್ನು ಹಮ್ಮಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕು ಎಂದು ಶ್ರೀಗಳಲ್ಲಿ ಕಟ್ಟಿಮನಿ ದೈವಸ್ಥರು ಮನವಿ ಮಾಡಿಕೊಂಡರು.
ಹಾಗೆ ಒಂದು ವೇಳೆ ತಾವು ಅಡ್ಡ ಫಲ್ಲಕಿ ಉತ್ಸವ ಊರೊಳಗೆ ಮಾಡುವೆವು ಎನ್ನುವುದಾದರೆ, ಶರಣರ ಪ್ರತಿಪಾದಕರು ಮತ್ತು ಶಿವನ ಆರಾಧಕರು ಆದ ನೀವು, ಶರಣ ಪವಾಡ ಪುರುಷ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ನಡೆಗೆ ವಿರುದ್ಧ ನಡೆದಂತಾಗುತ್ತೆ ಇದು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಇಚ್ಚೆಗೆ ಬಿಟ್ಟಿದ್ದು ಎಂದು ಕೊಟ್ಟೂರಿನ ಕಟ್ಟಿಮನಿ ದೈವಸ್ಥರು ಸಭೆಯಲ್ಲಿ ಹೇಳಿದರು.
ಈ ವೇಳೆ ಶಿವಪ್ರಕಾಶ್ ಕೊಟ್ಟೂರು ದೇವರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕ್ರಿಯಾ ಮೂರ್ತಿಗಳು, ಮಹಲ್ ಮಠ, ಎಂ.ಎಂ.ಜೆ ಸತ್ಯಪ್ರಕಾಶ್, ಆರ್.ಎಂ ಗುರುಸ್ವಾಮಿ, ಕಂದಾಯ ಇಲಾಖೆ ಆರ್.ಐ ಹಾಲಸ್ವಾಮಿ, ಮತ್ತು ಕಟ್ಟೆಮನಿ ದೈವಸ್ಥರಾದ ಕನ್ನಳ್ಳಿ ಮಂಜುನಾಥ ಗೌಡ, ಕೆಂಪಳ್ಳಿ ಸಿದ್ದನಗೌಡ, ಕೆ.ಶಿವಕುಮಾರ್ ಗೌಡ , ಕೆ.ಎಸ್.ನಾಗರಾಜ್ ಗೌಡ, ಮುಖಂಡರು ಹನುಮಂತಪ್ಪ ವಕೀಲರು, ಗೋಣೆಪ್ಪ, ಐ.ದ್ವಾರುಕೇಶ್, ಆಚೆಮನಿ ಮಲ್ಲಿಕಾರ್ಜುನ, ವಾಲ್ಮೀಕಿ ಮುಖಂಡ ಫಕೀರಪ್ಪ ಮುಂತಾದವರು ಇದ್ದರು.