ಅಮೃತ ಕಾಲದ ಮೊದಲ ಬಜೆಟ್ ಸೂಪರ್: ಶಿವನಗೌಡ ಟಿ. ಪಾಟೀಲ್ ಬಣ್ಣನೆ
ದಾವಣಗೆರೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಅಮೃತ ಕಾಲದ ಅಭಿವೃದ್ಧಿ ಆಯವ್ಯಯ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಯುವ ಮುಖಂಡ ಶಿವನಗೌಡ ಪಾಟೀಲ್ ಬಣ್ಣಿಸಿದ್ದಾರೆ.
ಕರ್ನಾಟಕಕ್ಕೆ ಭರ್ಜರಿ ಕೊಡುಗೆ ನೀಡಿರುವ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಘೋಷಿಸುವ ಮೂಲಕ ಕುಡಿಯುವ ನೀರಿಗೆ ಆದ್ಯತೆ ನೀಡಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಂಡಿರುವ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ರಾಜ್ಯದಿಂದ ರಾಜ್ಯಸಭೆಗೆ ಅವರನ್ನು ಕಳುಹಿಸಿದ್ದು ಸಾರ್ಥಕ ಎಂದು ಹೇಳಿದ್ದಾರೆ.
ಇದೊಂದು ಜನಸ್ನೇಹಿ, ರೈತರ ಪರ, ಬಡವರ, ದೀನದಲಿತರ, ಯುವಕರ, ಎಸ್ಸಿ ಎಸ್ಟಿ, ಹಿಂದೂಳಿದವರು ಸೇರಿದಂತೆ ಎಲ್ಲಾ ವರ್ಗದವರಿಗೂ ಆದ್ಯತೆ ನೀಡುವ ಎಲ್ಲರ ಮೆಚ್ಚುಗೆಗೆ ಬಜೆಟ್ ಪಾತ್ರವಾಗಿದೆ. ದೋಖೋ ಅಪ್ಪಾ ದೇಶ್ ಯೋಜನೆಯಡಿ 50 ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಖುಷಿಯ ವಿಚಾರ ಎಂದಿದ್ದಾರೆ.
ಕರ್ನಾಟಕಕ್ಕೆ ಬಿಗ್ ಗಿಫ್ಟ್ ನೀಡಿದೆ ಇದು ಸರ್ವರನ್ನು ಗಮನದಲ್ಲಿಟ್ಟುಕೊಂಡು ಮಂಡನೆ ಮಾಡಿರುವ ಬಜೆಟ್ ಎಂದು ತಿಳಿಸಿದ್ದಾರೆ.