ನಿರಾಶೆಯ ಬಜೆಟ್ : ಬಾತಿ ಶಂಕರ್

ಬಾತಿ ಶಂಕರ್
ದಾವಣಗೆರೆ : ಕೇಂದ್ರ ಸರ್ಕಾರದ ಇಂದಿನ ಬಜೆಟ್ ನಿರಾಶಾದಾಯಕವಾಗಿದೆ ಎಂದು ಜೆಡಿಎಸ್ ಉತ್ತರ ಕ್ಷೇತ್ರದ ಅಧ್ಯಕ್ಷ ಬಾತಿ ಶಂಕರ್ ಹೇಳಿದ್ದಾರೆ.
ಇದು ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಬಜೆಟ್ ಆಗಿದೆ. ಎಂಟು ವರ್ಷಗಳಿಂದ ಇಲ್ಲದೆ ಇರುವ ನೀರಾವರಿಯೋಜನೆಗಳನ್ನು ಈಗ ನೀಡುತ್ತಿರುವುದನ್ನು ನೋಡಿದರೆ ಜನರಿಗೆ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ.
ಔದ್ಯೋಗಿಕ, ಕೈಗಾರಿಕೆ, ತೆರಿಗೆ ಗಳಲ್ಲಿ ನೀಡಿರುವ ಕೊಡುಗೆಗಳು ಮಧ್ಯಮ ವರ್ಗದ ಜನಗಳಿಗೆ ಅದ್ಭುತ ಕೊಡುಗೆಗಳಾಗಿ ಕಂಡರೂ ಇವುಗಳು ಜಾರಿಗೆ ಬರುವುದು ಅನುಮಾನ. ಒಟ್ಟಾಗಿ ಜನರ ಕಣ್ಣೊರೆಸುವ ತಂತ್ರವಾಗಿದೆ ಎಂದವರು ಹೇಳಿದ್ದಾರೆ.

 
                         
                       
                       
                       
                       
                       
                       
                      