ದಾವಣಗೆರೆಯಲ್ಲಿ ಫೆಬ್ರವರಿ 5ರಂದು ರಾಜ್ಯಮಟ್ಟದ ಶ್ವಾನ ಪ್ರದರ್ಶನ, ಸ್ಪರ್ಧೆ

ಶ್ವಾನ ಪ್ರದರ್ಶನ
ದಾವಣಗೆರೆ: ರಾಜ್ಯಮಟ್ಟದ 6ನೇ ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆ ಫೆಬ್ರವೆರಿ 5ರಂದು ನಗರದ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ದಾವಣಗೆರೆ ಪೆಟ್ಸ್ ಲವರ್ಸ್ ಅಸೋಸಿಯೇಷನ್ನ ಸಿರಿಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದು ಐದು ವರ್ಷದಿಂದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ ನಡೆಸಲಾಗುತ್ತಿದೆ. ಅಂದು ಬೆಳಗ್ಗೆ 9ರಿಂದ ಪ್ರದರ್ಶನ ಪ್ರಾರಂಭವಾಗಲಿದೆ. ಬೆಳಿಗ್ಗೆ 11.30ರವರೆಗೆ ಸ್ಥಳದಲ್ಲೇ ನೋಂದಣಿಗೆ ಅವಕಾಶ ಇದೆ. ಫೆ.4ರವರೆಗೆ ನೋಂದಣಿಗೆ 400 ರೂಪಾಯಿ, ನಂತರ ಮಾಡಿದವರಿಗೆ 600 ರೂಪಾಯಿ ನಿಗದಿಪಡಿಸಲಾಗಿದೆ. ಬೆಸ್ಟ್ ಆಲ್ ಬ್ರೀಡ್ ಹ್ಯಾಂಡ್ಲರ್ ದಿಲೀಪ್ ಗೌಡ ಭಾಗವಹಿಸುವರು ಎಂದು ತಿಳಿಸಿದರು.
ರಾಜ್ಯ ಮಟ್ಟದ ಪ್ರದರ್ಶನದಲ್ಲಿ ಜರ್ಮನ್ ಶೆಫರ್ಡ್, ಡಾಬರ್ ಮನ್, ರ್ಯಾಟ್ ವ್ಹೀಲರ್,ಗ್ರೇಟ್ ಡೆನ್, ಬೆಲ್ಜಿಯಂ ಮಲೋನಿಸ್, ಹಸ್ಕಿ, ಭಾರತೀಯ ತಳಿಯ ಮುಧೋಳ್ ಮಾತ್ರವಲ್ಲ ಬೀದಿನಾಯಿ ಗಳಿಗೂ ಅವಕಾಶ ಇದೆ. ಭಾರತೀಯ ತಳಿಗೆ ನೋಂದಣಿ ಶುಲ್ಕ ಇಲ್ಲ.
ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಇತರೆಡೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ 350ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.
ಪ್ರಥಮ ಬಹುಮಾನವಾಗಿ 25, ದ್ವಿತೀಯ ಬಹುಮಾನವಾಗಿ 15, ತೃತೀಯ ಬಹುಮಾನವಾಗಿ 10 ಸಾವಿರ ನಗದು ಬಹುಮಾನ ನೀಡಲಾಗುವುದು. ಬೆಸ್ಟ್ ಇನ್ ಪಪ್ಪಿ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 5, ದ್ವಿತೀಯ ಬಹುಮಾನವಾಗಿ 3, ತೃತೀಯ ಬಹುಮಾನವಾಗಿ 2, ಭಾರತೀಯ ತಳಿ ವಿಭಾಗದಲ್ಲಿ ಬೆಸ್ಟ್ ಅಡಲ್ಟ್ ವಿಭಾಗದಲ್ಲಿ 3, ಬೆಸ್ಟ್ ಪಪ್ಪಿ ವಿಭಾಗದಲ್ಲಿ 2 ಸಾವಿರ ನೀಡಲಾಗುವುದು. ಬೆಸ್ಟ್ ಹ್ಯಾಂಡಲ್ ವಿಭಾಗದಲ್ಲಿ ಒಂದು ಸಾವಿರ ರೂಪಾಯಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 74110-45604, 94498-85044ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.