ಉಜ್ಜಿನಿ ಯಲ್ಲಿ ಭರತ ಹುಣ್ಣಿಮೆ ಮಹೋತ್ಸವ.! ಬಿಗಿ ಪೊಲೀಸ್

ಭರತ ಹುಣ್ಣಿಮೆ ಮಹೋತ್ಸವ
ಕೊಟ್ಟೂರು: ಕೊಟ್ಟೂರು ತಾಲೂಕಿನ ಉಜ್ಜಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ, ಭರತ ಹುಣ್ಣಿಮೆ ಪ್ರಯುಕ್ತ ಪೂಜಾ ಕೈಂರ್ಯ ಕೈಗೊಳ್ಳಲೆಂದು 9 ಪಾದಗಟ್ಟೆಗಳಿಗೆ ತೆರಳಲಿದೆ. ಕೊಟ್ಟೂರಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಭಾನುವಾರ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಲಿದ್ದಾರೆ.
ಇತ್ತೀಚೆಗೆ ಸಿರಿಗೆರೆ ಶ್ರೀಗಳು ಸಿರಿಗೇರಿಯಿಂದ ಕೊಟ್ಟೂರಿಗೆ ಆಯೋಜಿಸಿದ್ದ ಬೃಹತ್ ರ್ಯಾಲಿ ವೇಳೆಯಲ್ಲಿ ಕಾಳಾಪುರ ಗ್ರಾಮದಲ್ಲಿ ನಡೆದಂತಹ ದುರ್ಘಟನೆ ಮತ್ತೆ ಮರುಕಳಿಸದಿರಲೆಂದು ಮುಂಜಾಗ್ರತೆಯಾಗಿ ಹಲವು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಕೊಟ್ಟೂರು ಮತ್ತು 9 ಪಾದಗಟ್ಟಿ ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲೆಂದು ಗುರುವಾರ ಪೊಲೀಸ್ ಪಡೆಯೊಂದಿಗೆ ಜಾಥಾ ನಡೆಸಿದರು. ನಂತರ ಉಜ್ಜಿನಿ ಮರುಳಸಿದ್ದೇಶ್ವರ ಸ್ವಾಮಿ 9 ಪಾದಗಟ್ಟೆಯ ಹಳ್ಳಿಗಳಲ್ಲಿ ಪೊಲೀಸ್ ಇಲಾಖೆ ಶಾಂತಿ ಸಭೆ ನಡೆಸಿದರು.

ಶುಕ್ರವಾರ ಸಂಜೆ ಉಜ್ಜಿನಿ ಮರುಳಸಿದ್ದೇಶ್ವರ ಸ್ವಾಮಿ ಪೂಜೆಗೆಂದು ಕಾಳಾಮರ ಗ್ರಾಮದ ಪಾದಗಟ್ಟೆಗೆ ಆಗಮಿಸುತ್ತಿರುವ ಕಾರಣ, ಕಾಳಾಪುರ ಗ್ರಾಮಸ್ಥರು ಜಾತ್ಯಾತೀತವಾಗಿ ಸಂಭ್ರಮದೊಂದಿಗೆ ಮೆರವಣಿಗೆಯೊಂದಿಗೆ ಇಡೀ ರಾತ್ರಿ ಅದ್ದೂರಿಯಾಗಿ ಉಜ್ಜಿನಿ ಮರುಳಸಿದ್ದೇಶ್ವರ ಸ್ವಾಮಿಯನ್ನು ಸ್ವಾಗತಿಸಲಿದ್ದಾರೆ.

ಶನಿವಾರ ಶ್ರೀಸ್ವಾಮಿಗೆ ಪ್ರಸಾದ ಮತ್ತು ಹಣ್ಣು ಕಾಯಿ ನೈವೇದ್ಯ ಅರ್ಪಿಸಿ, ಭಕ್ತಿ ಸಮರ್ಪಿಸುವರು. ನಂತರ ಉಜ್ಜಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಗ್ರಾಮಸ್ಥರು ಆಶೀರ್ವಚನ ಪಡೆಯಲಿದ್ದಾರೆ. ಈ ವೇಳೆ ಯಾವುದೇ ದುರ್ಘಟನೆ ಜರುಗಬಾರದೆಂದು ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಿಸಲಾಗಿದೆ.

 
                         
                       
                       
                       
                       
                      