ಶಾಮನೂರು ಹೆದ್ದಾರಿ ಬಳಿ ಹಗಲಲ್ಲೇ ಇಸ್ಪೀಟ್ ಜೂಜಾಟ.! ಕಣ್ಮುಚ್ಚಿ ಕುಳಿತ ವಿದ್ಯಾನಗರ ಪೊಲೀಸ್

ಮನೂರು ಹೆದ್ದಾರಿ ಬಳಿ ಹಗಲಲ್ಲೇ ಇಸ್ಪೀಟ್ ಜೂಜಾಟ.! ಕಣ್ಮುಚ್ಚಿ ಕುಳಿತ ವಿದ್ಯಾನಗರ ಪೊಲೀಸ್
ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಹಗಲಲ್ಲಿ ಜೂಜಾಟ ಹೆಚ್ಚುತ್ತಿದ್ದರೂ ಕೆಲ ಪೊಲೀಸರು ಮಾತ್ರ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದ್ದಾರೆ.
ದಾವಣಗೆರೆಯ ಶಾಮನೂರು ಬಳಿಯ ರಾಸ್ತಾ ಹೋಟೆಲ್ ಹಿಂಭಾಗದಲ್ಲಿರುವ ಅಂಬೇಡ್ಕರ್ ಭವನದ ಆವರಣ ಇದೀಗ ಜೂಜಾಟದ ಅಡ್ಡೆಯಾಗಿ ಮಾರ್ಪಟ್ಟಿದೆ.
ಶಾಮನೂರು ಆಂಜನೇಯ ಸ್ವಾಮಿಯ ಜಾತ್ರೆ ನಿಮಿತ್ತವಾಗಿ ಇಲ್ಲಿ ಜೂಜಾಟ ನಡೆಯುತ್ತಿದೆ. ಇಲ್ಲಿಗೆ ಬಂದವರೇ ಹೇಳುವ ಪ್ರಕಾರ ಹಗಲು ರಾತ್ರಿ ಕೊಟ್ಯಾಂತರ ರೂಪಾಯಿ ವಹಿವಾಟು ಇಲ್ಲಿನ ಪ್ರದೇಶದ ಸ್ಥಳದಲ್ಲಿ ಜೂಜಾಟ ನಡೆಯುತ್ತದೆಯಂತೆ.
ಅಂದ ಹಾಗೆ ಈ ಮಾಹಿತಿ ವಿದ್ಯಾನಗರ ಪೊಲೀಸರಿಗೆ ಗೊತ್ತಿಲ್ಲವಂತೇನೂ ಇಲ್ಲ. ಆದರೂ ಜಾಣ ಕುರುಡು ಪ್ರದರ್ಶನ ಏಕೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಕೇವಲ ಜೂಜಷ್ಟೇ ಅಲ್ಲ, ಇಲ್ಲಿ ಮದ್ಯಪಾನ ಮಾಡುವರ ಸಂಖ್ಯೆಯೂ ಹೆಚ್ಚಾಗಿದೆ. ಆದಷ್ಟು ಬೇಗ ಸಂಬಂಧಿಸಿದವರು ನಿಯಂತ್ರಿಸುವಂತೆ ಸ್ಥಳೀಯರು ಕೋರಿದ್ದಾರೆ.
ಈ ಬಗ್ಗೆ ಎಸ್ ಪಿ ರಿಷ್ಯಂತ್ ಪ್ರತಿಕ್ರಿಯೆ ನೀಡಿದ್ದು ಸ್ಥಳಕ್ಕೆ ಅಧಿಕಾರಿಗಳನ್ನು ಕಳಿಸುತ್ತೆನೆ ಎಂದಿದ್ದಾರೆ.

 
                         
                       
                       
                       
                       
                       
                       
                      