ನಿವೃತ್ತ ಯೋಧನಿಗೆ ದಾವಣಗೆರೆಯಲ್ಲಿ ಸಂಭ್ರಮದಿಂದ ಸ್ವಾಗತ

ನಿವೃತ್ತ ಯೋಧನಿಗೆ ದಾವಣಗೆರೆಯಲ್ಲಿ ಸಂಭ್ರಮದಿಂದ ಸ್ವಾಗತ
ದಾವಣಗೆರೆ: ಭಾರತೀಯ ಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಬುಧವಾರ ದಾವಣಗೆರೆಗೆ ಆಗಮಿಸಿದ ಯೋಧ ಚನ್ನಬಸು ತುಕ್ಕನ್ನವರ್ ಅವರನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮ ಮೂಲದ ಲಕ್ಷ್ಮಣ ತುಕ್ಕನ್ನವರ್- ಗಂಗವ್ವ ದಂಪತಿ ಪುತ್ರರಾದ ಚನ್ನಬಸು ತುಕ್ಕನ್ನವರ್ ಹಾಳಿ ದಾವಣಗೆರೆಯಲ್ಲಿ ವಾಸಿಸುತ್ತಿದ್ದಾರೆ.
ಇವರು ಬೆಂಗಳೂರು, ಕಾರ್ಗಿಲ್, ರಾಜಸ್ಥಾನ, ಮಣಿಪುರ, ನಾಗಾಲ್ಯಾಂಡ್, ಸಿಕಂದರಾಬಾದ್, ಜಮ್ಮು- ಕಾಶ್ಮೀರ, ಉತ್ತರಪ್ರದೇಶ, ನವದೆಹಲಿ, ಚಂಡೀಗಢ, ಉತ್ತರಾಖಂಡ ಸೇರಿ ವಿವಿಧೆಡೆ ಭಾರತೀಯ ಸೇನೆ (9 ಇಂಜಿನಿಯರ್ ರೆಜಿಮೆಂಟ್)ಯಲ್ಲಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಹೊಂದಿದ್ದಾರೆ.
ದಾವಣಗೆರೆ ರೈಲು ನಿಲ್ದಾಣದಲ್ಲಿ ಬಂದಳಿದ ಅವರನ್ನು ನಾಗರಿಕರು, ಬಿಜೆಪಿ ಮುಖಂಡರು, ಕುಟುಂಬ ಸದಸ್ಯರು ಅವರನ್ನು ಶಾಲು ಹೊದಿಸಿ, ಹೂಗುಚ್ಛ ನೀಡಿ, ಸಿಹಿ ತಿನ್ನಿಸಿ ಬರಮಾಡಿಕೊಂಡರು. ನಿಲ್ದಾಣ ಆವರಣದಿಂದ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಲಾಯಿತು. ಭಾರತ್ ಮಾತ ಕೀ ಜೈ ಹಾಗೂ ವೀರಯೋಧರಿಗೆ ಜಯವಾಗಲಿ ಎಂಬ ಘೋಷಣೆಗಳು ಮೊಳಗಿದವು.
ಪತ್ನಿ ಪುಷ್ಪಾ, ಆಶಾ, ಮುರುಗೇಶ್, ರೂಪಾ, ಧನಂಜಯ್, ರಾಜಶೇಖರಪ್ಪ, ರತ್ನಮ್ಮ, ದಾಕ್ಷಾಯಿಣಿ, ಲಕ್ಕವ್ವ, ಗೌರಮ್ಮ ಮಂಜುನಾಥ, ಎಚ್.ಕೆ. ವೀರೇಶ್, ಕೆ.ಬಿ.ನಾಗರಾಜು, ಮಾಜಿ ಮೇಯರ್ ಎಸ್.ಟಿ.ವೀರೇಶ್, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷರಾದ ಯಶವಂತರಾವ್ ಜಾಧವ್, ಎ.ಎಸ್.ಮೃತ್ಯುಂಜಯ, ಟಿಂಕರ್ ಮಂಜಣ್ಣ,ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್,ಗುರು ಸೋಗಿ ಎಚ್.ಎನ್.ಜಗದೀಶ್, ಬಾಲರಾಜಶ್ರೇಷ್ಠಿ, ರೇಣುಕಮೂರ್ತಿ, ಮಂಜುಳಾ ಮಹೇಶ್, ಎ.ಸಿ.ರಾಘವೇಂದ್ರ, ಬಿ.ಎಸ್.ರಾಘವೇಂದ್ರಶೆಟ್ಟಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸತ್ಯಪ್ರಕಾಶ್, ಅಂದಪ್ಪ, ವಾಗೀಶ್, ಮಂಜುನಾಥ್ ಇತರರಿದ್ದರು.