ಜಿಎಂಐಟಿಯ ಹಲವು ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆ ಜಿಎಂಐಟಿ ವಿದ್ಯಾರ್ಥಿಗಳಿಗೆ ಹಲವು ಪ್ರತಿಷ್ಠಿತ ಕಂಪನಿಗಳಿಂದ ಸಂದರ್ಶನ ಪ್ರಕ್ರಿಯೆ
ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಇಂಜಿನಿಯರಿಂಗ್ ಮತ್ತು ಎಂಬಿಎ ವಿಭಾಗದ ಹಲವು ವಿದ್ಯಾರ್ಥಿಗಳು ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಪ್ರತಿಷ್ಠಿತ ಕಂಪನಿಗಳಾದ ಮರ್ಸಿ ಡೇಸ್ ಬೆಂಜ್, ಬೈಜೂಸ್, ಇಂಟೆಲಿಪಾತ್ ಟೆಕ್ನಾಲಜಿ ಸರ್ವಿಸಸ್, ಡಿ ಮಾರ್ಟ್, ಐಸಿಐಸಿಐ ಬ್ಯಾಂಕ್, ಹೆಚ್ ಡಿ ಎಫ್ ಸಿ ಬ್ಯಾಂಕ್, ಸ್ಟ್ರಾಟೊಜೇಂಟ್ ಟೆಕ್ನಾಲಜಿ ಪ್ರವೇಟ್ ಲಿಮಿಟೆಡ್ ಸಂದರ್ಶನ ಪ್ರಕ್ರಿಯೆ ನಡೆಸಿ ಹಲವು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಒಟ್ಟಾರೆ 367 ಜಾಬ್ ಆಫರ್ಸ್ ಇದುವರೆಗೂ ಸ್ವೀಕರಿಸಿದ್ದು, ಇದೆ ಮಾರ್ಚ್ ತಿಂಗಳಿನಲ್ಲಿ ಒಂಬತ್ತು ಕಂಪನಿಗಳು ಸಂದರ್ಶನ ಪ್ರಕ್ರಿಯೆ ನಡೆಸಲು ಅನುಮತಿಯನ್ನು ಪಡೆದುಕೊಂಡಿವೆ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ಟಿ ಆರ್ ತೇಜಸ್ವಿ ಕಟ್ಟಿಮನಿ ತಿಳಿಸಿದರು. ಐಬಿಎಮ್, ಅಕಾರ್ಡ ಸಾಫ್ಟ್ವೇರ್, ಟೊಯೋಟಾ ಕಿರ್ಲೋಸ್ಕರ್, ಮಿಡಲ್ಬೇ, ಕಿರ್ಲೋಸ್ಕರ್ ಫೆರಸ್, ಜೆ ಎಸ್ ಡಬ್ಲ್ಯೂ, ಹೊಸಪೇಟೆ ಸ್ಟೀಲ್, ಸ್ಮೈಡರ್ ಎಲೆಕ್ಟ್ರಿಕ್, ಶಿಲ್ಪ ಮೆಡಿಕೇರ್, ಎಪಿಸೋರ್ಸ್, ಓ ಜಿ ಹೆಲ್ತ್ ಕೇರ್, ಸೋನಾಟಾ ಸಾಫ್ಟ್ವೇರ್, ಎಂಪಸಿಸ್ ಮತ್ತು ಸಿವಿಲ್ ವಿಭಾಗಕ್ಕೆ ಮೂರು ಕಂಪನಿ ಸಂದರ್ಶನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಏಪ್ರಿಲ್ ತಿಂಗಳಿನಲ್ಲಿ ಒಟ್ಟು 13 ಕಂಪನಿಗಳು ಬರಲಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಸಂದರ್ಶನ ಪ್ರಕ್ರಿಯೆಗೆ ಅವಕಾಶವನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಸಂದರ್ಶನ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಆದ ಶ್ರೀ ಜಿಎಂ ಲಿಂಗರಾಜು, ಆಡಳಿತಾಧಿಕಾರಿ ಶ್ರೀ ವೈಯೂ ಸುಭಾಷ್ ಚಂದ್ರ, ವಿಭಾಗದ ಮುಖ್ಯಸ್ಥರುಗಳು ಮತ್ತು ಅಧ್ಯಾಪಕ ವರ್ಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.