ನಗರದ ವಿವಿಧೆಡೆಬೈಕ್ ಕಳವು ಮಾಡುತ್ತಿದ್ದ ಕಳ್ಳರ ಬಂಧನ; ೧೦ ಬೈಕ್ ಗಳ ವಶ

IMG-20210705-WA0006

 

ದಾವಣಗೆರೆ.ಜು.೫; ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ 10 ಬೈಕ್‌ಗಳು ವಶ ಪಡಿಸಿಕೊಂಡಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಚಿದಾನಂದಪ್ಪ ಎಸ್.ಬಿ  ದಾವಣಗೆರೆ ಸರ್ ಮಿರ್ಜಾ ಇಸ್ಮಯಿಲ್ ರಸ್ತೆ ಬಳಿ ಗಸ್ತಿನಲ್ಲಿದ್ದಾಗ  , ನವೀದ್, ಸೈಯದ್ ಅಷ್ಟಕ್ ಅವರುಗಳು ನಂಬರ್ ಇಲ್ಲದ ಸ್ಪೆಲಂಡರ್ ಬೈಕ್ ನಲ್ಲಿ ಬಂದಿದ್ದು , ಅವರನ್ನು ತಡೆದು ಬೈಕ್ ಬಗ್ಗೆ ವಿಚಾರಿಸಿದಾಗ ಸರಿಯಾದ ದಾಖಲಾತಿಗಳನ್ನು ನೀಡಿಲ್ಲ ಈ ಬಗ್ಗೆ , ಅನುಮಾನಗೊಂಡು ವಿಚಾರಣೆ ಮಾಡಿದಾಗ  ಬೈಕ್ ಸವಾರರು , ದೊಡ್ಡಪೇಟೆ ರಸ್ತೆಯ ಜಾಮೀಯ ಮಸೀದಿ ಬಳಿ ಕಳ್ಳತನ ಮಾಡಿರುವುದಾಗಿ  ಒಪ್ಪಿಕೊಂಡಿದ್ದಾರೆ.

ಬೈಕ್ ನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರನ್ನು ಠಾಣೆಗೆ ಕರೆದುಕೊಂಡು ಬಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ  ಕೆಲವು ತಿಂಗಳಿನಿಂದ ದಾವಣಗೆರೆ ನಗರದ ಪಿ.ಬಿ ರಸ್ತೆ , ರೆಮೆಂಡ್ ಶೋ ರೂಂ , ಕಾನಿಷ್ಕ ಬಾರ್ ದೇವರಬೆಳಕೆರೆ ಕೆರೆ ಬಳಿ ಹಾಗೂ ರಾಣೆಬೆನ್ನೂರಿನಲ್ಲಿ ಒಟ್ಟು 10 ಬೈಕ್ ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.  ಬೈಕ್ ಗಳ ಪತ್ತೆ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ನಾಗೇಶ್ ಐತಾಳ್ ಎನ್ ,  ಬಡಾವಣೆ ಠಾಣೆಯ ಸುರೇಶ ಸಗರಿ ,   ಪಿ.ಎಸ್.ಐ -1 ಅರವಿಂದ ಬಿ.ಎಸ್ . ,  ಚಿದಾನಂದಪ್ಪ ಎಸ್.ಬಿ ಸಿಬ್ಬಂದಿಗಳಾದ ಹರೀಶ್ ರೆಡ್ಡಿ ಹೆದ್ , ಸಿದ್ದೇಶ್ , ಅರುಣ ಕುಮಾರ , ಹರೀಶ್ ಕೆ.ಬಿ , ಸೈಯದ್ ಅಲಿ , ವಿಶಾಲಾಕ್ಷಿ ಬಿ ವಾಹನ ಚಾಲಕರಾದ ಅರ್ಜುನ ರಾಯಲ್ , ಕುಬೇಂದ್ರಪ್ಪ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!