ಚಿತ್ರದುರ್ಗದಲ್ಲಿ ಶೋಷಿತ ಸಮುದಾಯ ಮುಖಂಡರ ಸಭೆ

ಚಿತ್ರದುರ್ಗ: ಬರುವ ಏಪ್ರಿಲ್ 2ನೇ ತಾರೀಖು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸೋಷಿತರ ಸಂಕಲ್ಪ ಸಮಾವೇಶದ ತಯಾರಿ ಕುರಿತು ಚಿತ್ರದುರ್ಗ ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು, ಅಲೆಮಾರಿ, ಅಲ್ಪಸಂಖ್ಯಾತರು ಮತ್ತಿತರ ಶೋಷಿತ ಸಮುದಾಯಗಳ ಮುಖಂಡರುಗಳ ಸಭೆ ನಡೆಯಿತು.
ಮಾ.20ರ ಸೋಮವಾರ ಸಂಜೆ ಚಿತ್ರದುರ್ಗದ ಐಶ್ವರ್ಯ ಪೊರ್ಟ್ ಹೋಟೆಲ್ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ರಾಜ್ಯ ನಾಯಕರುಗಳಾದ ಕೆ.ಎಂ. ರಾಮಚಂದ್ರಪ್ಪ, ಮಾವಳ್ಳಿ ಶಂಕರ್, ಎನ್.ಅನಂತನಾಯಕ, ಆದರ್ಶ ಯಲ್ಲಪ್ಪ ಮತ್ತಿತರರು ಭಾಗವಹಿಸಿದ್ದರು ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಕಾಶ್ ರಾಮನಾಯ್ಕ ತಿಳಿಸಿದ್ದಾರೆ.