ಕೆಆರ್ ಎಸ್ ನ ಏನೋ ಇವ್ರೆ ರಕ್ಷಣೆ ಮಾಡ್ತಾರಂತಲ್ಲ, ಬಹುಶಃ ಇವರನ್ನೇ ಕೆಆರ್ ಎಸ್ ಡ್ಯಾಮ್ ಬಾಗಿಲಿಗೆ ಮಲಗಿಸಿಬಿಟ್ರೆ ಬಿಗಿಯಾಗಿಬಿಡುತ್ತೆ’ – ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ‘ಕೆಆರ್ ಎಸ್ ನ ಏನೋ ಇವ್ರೆ ರಕ್ಷಣೆ ಮಾಡ್ತಾರಂತಲ್ಲ, ಬಹುಶಃ ಇವರನ್ನೇ ಕೆಆರ್ ಎಸ್ ಡ್ಯಾಮ್ ಬಾಗಿಲಿಗೆ ಮಲಗಿಸಿಬಿಟ್ರೆ ಬಿಗಿಯಾಗಿಬಿಡುತ್ತೆ’ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕುರಿತು ಮಾತನಾಡಿ ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ಕುರಿತು ಸುಮಲತಾ ವಿರುದ್ಧ ಗುಡಿಗಿರುವ ಹೆಚ್ಡಿಕೆ, ಯಾರ ಒತ್ತಡದಿಂದ ಖಾಸಗಿ ಯವರಿಗೆ ಕೊಡಲಾಗುತ್ತಿದೆ ಗೊತ್ತಿಲ್ಲ. ಡ್ಯಾಂ ಬಾಗಿಲಿಗೆ ನೀರು ಹೋಗದ ರೀತಿ ಇವರನ್ನೇ ಮಲಗಿಸಿಬಿಟ್ರೆ ಕಾರ್ಖಾನೆ ಬಿಗಿಯಾಗಿಬಿಡುತ್ತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಗೆ ಅಂತಹ ಸಂಸದರು ಹಿಂದೆಯೂ ಬಂದಿಲ್ಲ, ಮುಂದೆಯೂ ಬರೋದಿಲ್ಲ. ಯಾವುದೋ ಅನುಕಂಪದ ಮೇಲೆ ಬಂದಿದ್ದಾರೆ. ಅದರಂತೆ ಜನರ ಋಣ ತೀರಿಸುವ ಕೆಲಸ ಮಾಡಬೇಕು. ಕೆಲಸ ಮಾಡೋಕೆ ಮಾಹಿತಿ ಇಟ್ಟುಕೊಳ್ಳದೇ, ಕೇವಲ ಯಾರದ್ದೋ ವೈಯಕ್ತಿಕ ದ್ವೇಷಕ್ಕೆ ಹೇಳಿಕೆ ಕೊಡೋದು ಬಹಳ ದಿನ ನಡೆಯುವುದಿಲ್ಲ ಎಂದು ಸುಮಲತಾ ವಿರುದ್ದ ಕಿಡಿಕಾರಿದ್ದಾರೆ.
ಯಾವುದೋ ಅನುಕಂಪದ ಮೇಲೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅದರಂತೆ ಜನರ ಋಣ ತೀರಿಸುವ ಕೆಲಸ ಮಾಡಬೇಕು. ಪದೇ ಪದೇ ಇಂತಹ ಅವಕಾಶಗಳು ಸಿಗೋದಿಲ್ಲ.ಇವಾಗ ಅವಕಾಶ ಸಿಕ್ಕಿದೆ, ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಕೆಲಸ ಮಾಡಲಿ ಎಂದು ಸುಮಲತಾಗೆ ಸಲಹೆ ನೀಡಿದ್ದಾರೆ.