ರಾಷ್ಟ್ರೀಯ ಪಕ್ಷಗಳ ಇಚ್ಛಾಶಕ್ತಿಯ ಕೊರತೆ; ಕೆ.ಬಿ ಕಲ್ಲೇರುದ್ರೇಶ್ ಬೇಸರ

IMG-20210705-WA0012

 

ದಾವಣಗೆರೆ.ಜು.೫; ರಾಜಕೀಯ ಪಕ್ಷಗಳ ನಾಯಕರು ತಮ್ಮ ನಾಯಕರನ್ನು ಮೆಚ್ಚಿಸಿ ಕೊಳ್ಳಲು ವಿನಾಕರಣ ದಾವಣಗೆರೆ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ವಿಶ್ವೇಶ್ವರಯ್ಯ ಜಲನಿಗಮದ ಭದ್ರಾ ಮೇಲ್ದಂಡೆ ಯೋಜನಾ ಸಮಿತಿಯ ತಜ್ಞರ ಸಮಿತಿ ಸದಸ್ಯ ಕೆ ಬಿ ಕಲ್ಲೇರುದ್ರೇಶ್ ಹೇಳಿದರು .

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷವೇ ನಾವು ರಾಜ್ಯದಲ್ಲಿ ಹದಿನೈದು ಮೆಡಿಕಲ್ ಕಾಲೇಜುಗಳನ್ನು ಮಂಜೂರು ಮಾಡಬೇಕೆಂದು ವಿವಿಧ ಜಿಲ್ಲೆಗಳಿಂದ ವಿವಿಧ ಸದಸ್ಯರಿಂದ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು ಅದರಂತೆ ಕಳೆದ ವರ್ಷ ಚಿತ್ರದುರ್ಗ ಜಿಲ್ಲೆಗೆ ಮಾತ್ರ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿದೆ ವಿನಃ ದಾವಣಗೆರೆ ಜಿಲ್ಲೆಗೆ ಮಂಜೂರು ಮಾಡಲಾಗಿಲ್ಲ ಎಂದು ಹೇಳಿದರು .

ರಾಷ್ಟ್ರೀಯ ಪಕ್ಷದ ಎರಡೂ ಕಡೆಯ ನಾಯಕರಿಗೆ ಇಚ್ಛಾಶಕ್ತಿಯ ಕೊರತೆಯಿದ್ದು ದಾಖಲೆ ಇಲ್ಲದೇ ವಿನಾಕರಣ ಮೆಡಿಕಲ್ ಕಾಲೇಜು ಮಂಜೂರಾಗಿದೆ ಎಂದು ಹೇಳುತ್ತಿದ್ದಾರೆ ಕಾರಣ ಅವರು ದಾಖಲೆಗಳನ್ನು ಪರಾಮರ್ಶಿಸಿ ಸರ್ಕಾರಿ ಮೆಡಿಕಲ್ ಕಾಲೇಜು ಕುರಿತು ಮುಂದಿನ ಹೇಳಿಕೆಯನ್ನು ನೀಡಬೇಕು ವಿನಾಕಾರಣ ಜಿಲ್ಲೆಯ ಜನರನ್ನು ದಾರಿ ತಪ್ಪಿಸಬಾರದು ಎಂದರು .

ನಗರಕ್ಕೆ ರಾಜ್ಯದಿಂದ ನೀಡಲಾಗುವ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಜನಪ್ರತಿನಿಧಿಗಳು ಸಂಘ ಸಂಸ್ಥೆಯವರು ಆಸಕ್ತರನ್ನು ಒಳಗೊಂಡಂತೆ ಸರ್ವಪಕ್ಷಗಳ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದು ಒಳಿತು .

ಅದರಂತೆ ಕೇಂದ್ರದಿಂದ ನೀಡಲಾಗುವ ರಾಜ್ಯ  ಮೆಡಿಕಲ್ ಕಾಲೇಜಿಗೆ ಸಂಸದ ಸಿದ್ದೇಶ್ವರರನ್ನು ಒಳಗೊಂಡಂತೆ ಎಲ್ಲಾ ಶಾಸಕರು, ಎಂಎಲ್ ಸಿ ಸೇರಿದಂತೆ ಆಸಕ್ತರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಬಹುದು ಇಲ್ಲವೇ ಕೇಂದ್ರದ ಕಾರ್ಮಿಕ ಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದರೆ ಮುಂದಿನ ಬಜೆಟ್ ಗಳಲ್ಲಿ  ಕಾಲೇಜುಗಳು ಮಂಜೂರಾಗಲಿದೆ. ಈ ಕುರಿತಂತೆ ಸ್ಥಳ ಪರಿಶೀಲನೆ ಪ್ರಸ್ತಾವನೆ ಮತ್ತು ಕ್ರಿಯಾಯೋಜನೆ ಎಲ್ಲವೂ ಸಿದ್ಧವಾಗಬೇಕಾಗಿದೆ ಎಂದು ಹೇಳಿದರು.

ವೈದ್ಯಕೀಯ ತುರ್ತು ಪರಿಸ್ಥಿತಿ ಇರುವ ಇಂದಿನ ಕಾಲಮಾನದಲ್ಲಿ ಎರಡೂ ಪಕ್ಷಗಳ ರಾಜಕೀಯ ಕಾರ್ಯಕರ್ತರು ರಾಜಕೀಯ ಜಂಜಾಟ ಮಾಡದೆ ಸೂಕ್ತ ದಾಖಲೆಗಳನ್ನು ಪಡೆದು ಇಚ್ಛಾಶಕ್ತಿಯಿಂದ ಆಸ್ಪತ್ರೆ ತರುವಲ್ಲಿ ಶ್ರಮಿಸಬೇಕೆಂದರು.

ಒಂದು ವೇಳೆ ದಾವಣಗೆರೆಗೆಯನ್ನು ಸರ್ಕಾರದಿಂದ ನೀಡಲಾಗುವ ವಿಮಾ ಕಾರ್ಮಿಕರ ಮೆಡಿಕಲ್ ಕಾಲೇಜನ್ನು ಯಾರೇ ಮುಂಜೂರು ಮಾಡಿಸಲು ಅವರನ್ನು ದಾವಣಗೆರೆ ನಗರದ ಮಹಾತ್ಮಗಾಂಧಿ ವೃತ್ತದಿಂದ ಇಎಸ್ ಐ ಆಸ್ಪತ್ರೆ ಮೆಡಿಕಲ್ ಕಾಲೇಜು ಮಂಜೂರಾದ ಸ್ಥಳದವರೆಗೂ  ನನ್ನ ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುವೆ ಎಂದರು

ಈಗಾಗಲೇ ಗುಲ್ಬರ್ಗ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇದ್ದು ಅಲ್ಲಿನ ಕಾರ್ಮಿಕರಿಗೆ ಅನುಕೂಲವಾಗಲಿದೆ ಅದರಂತೆ ಹೆಚ್ಚಿನ ಸಂಖ್ಯೆಯಲ್ಲಿ ಗುಲ್ಬರ್ಗಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ದಾವಣಗೆರೆಯಲ್ಲಿ ಕಾರ್ಮಿಕರಿದ್ದು ದಾವಣಗೆರೆಯಲ್ಲೂ ಕಾರ್ಮಿಕ ಇಲಾಖೆಯ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿಸಬೇಕು .ಸುಖಾಸುಮ್ಮನೆ ರಾಜಕೀಯ ಪಕ್ಷಗಳ ಮುಖಂಡರು ತಿಪ್ಪೆಗಳನ್ನು ಕೆದರಿ ಕೊಳಕು ಮಾಡುವ ಬದಲು ಅದರ ಮೇಲೆ ಮಣ್ಣು ಹಾಕಿ ಉತ್ತಮ ಸ್ಥಿತಿಯನ್ನು ನಿರ್ಮಾಣ ಮಾಡಬೇಕೆಂದು ಕಿವಿಮಾತು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಬೀವುಲ್ಲಾ ಇದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!