ದಾವಣಗೆರೆ ಜಿಲ್ಲೆಯಲ್ಲಿ 11 ವಿದ್ಯಾರ್ಥಿಗಳು ಸೇರಿ 29 ಜನರಿಗೆ ಕೊರೋನ ಸೋಂಕು ಪತ್ತೆ.

ದಾವಣಗೆರೆ ಕೊವಿಡ್ ಸುದ್ದಿ:ನಿನ್ನೆ 21 ಜನರಲ್ಲಿ ಕಾಣಿಸಿಕೊಂಡ ಕೊರೋನ ಸೊಂಕು ಇಂದು ದಾವಣಗೆರೆ ಜಿಲ್ಲೆಯಲ್ಲಿ 29 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. 7173 ಜನರ ಗಂಟಲು ಮಾದರಿ ಪರೀಕ್ಷೆಯ ವರದಿ ಬಾಕಿ ಇದ್ದು, ಇಂದು 2057 ಜನರ ವರದಿ ನೆಗೆಟಿವ್ ಬಂದಿದೆ.
5 ಜನ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 105 ಜನ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ 32 ಜನ ಸೋಂಕಿನಿಂದ ದಾಖಲಾಗಿದ್ದಾರೆ. ಉಳಿದವರು ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ. ಒಟ್ಟು 105 ಜನರಿಗೆ ಜಿಲ್ಲೆಯಲ್ಲಿ ಸೋಂಕು ಸಕ್ರಿಯವಾಗಿದೆ.
ಕಾಲೇಜಿನ ವಿದ್ಯಾರ್ಥಿ/ನಿಯರು ಮತ್ತು ಸಿಬ್ಬಂದಿಗಳನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ವಿದ್ಯಾರ್ಥಿ/ನಿಯರನ್ನ ಕೊರೋನ ಟೆಸ್ಟ್ ಗೆ ಒಳಪಡಿಸಲಾಗಿದೆ, ನಿನ್ನೆ ಹಾಗೂ ಇಂದು ಒಟ್ಟು 11 ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕೊರೋನ ಪಾಸಿಟಿವ್ ಬಂದಿದೆ. ಮಕ್ಕಳು ಓದುತ್ತಿದ್ದ ತರಗತಿಗಳ 132 ವಿದ್ಯಾರ್ಥಿಗಳು, 36 ಬೋಧಕ, 24 ಬೋಧಕೇತರ ಸಿಬ್ಬಂದಿ ಸೇರಿದಂತೆ ಅವರ ಮನೆಗಳ 32 ಪ್ರಾಥಮಿಕ ಸಂಪರ್ಕಿತರ ಗಂಟಲು ಮಾದರಿ ದ್ರವ ತೆಗೆದುಕೊಳ್ಳಲಾಗಿದೆ. ದ್ವಿತೀಯ ಸಂಪರ್ಕಿತರ ಪತ್ತೆ ಹಚ್ಚಲಾಗುತ್ತಿದೆ. ಮಾರ್ಗಸೂಚಿಗಳ ಅನುಸಾರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ವೇಕ್ಷಣೆ ಇಲಾಖೆಯ ಡಾ.ರಾಘವನ್ ತಿಳಿಸಿದ್ದಾರೆ.
ತಾಲೂಕುವಾರು ಹೀಗಿದೆ
ದಾವಣಗೆರೆ ತಾಲೂಕು ಮತ್ತು ನಗರದಲ್ಲಿ 20
ಹರಿಹರ 04, ಜಗಳೂರು 01, ಚನ್ನಗಿರಿ-02, ಹೊನ್ಮಾಳಿ-02
ಹೊರ ಜಿಲ್ಲೆಯಿಂದ ಬಂದವರಲ್ಲಿ 00
ಪಾಸಿಟಿವ್ ಬಂದಿರುವ ಶಾಲಾ ಮಕ್ಕಳ ವಿವರ.
ದಿನಾಂಕ 2/4/2021 ರಂದು 7 ಮಕ್ಕಳು.
ಹರಿಹರ = 4
ಹೊನ್ನಾಳಿ = 1
ಚನ್ನಗಿರಿ = 1
ಜಗಳೂರು =1.ದಿನಾಂಕ 3/4/2021 ರಂದು 4 ಮಕ್ಕಳು.
ಚನ್ನಗಿರಿ = 1 ದಾವಣಗೆರೆ = 3 ಹೊನ್ನಾಳಿ = 1
ಹಾಲಿ 7173 ಜನರ ಗಂಟಲು ಮಾದರಿಯ ಪಲಿತಾಂಶ ಇನ್ನೆರೆಡು ದಿನದಲ್ಲಿ ಬರಲಿದೆ ಎಂದು ವೈಧ್ಯಕೀಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 
                         
                       
                       
                       
                       
                       
                       
                      