ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಮಾರ್ಚ್ 27 ರಿಂದ ಎಪ್ರಿಲ್ 26 ರೊಳಗೆ ಅರ್ಜಿ ಸ್ವೀಕಾರ

ದಾವಣಗೆರೆ : ದಾವಣಗೆರೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ 2 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 33 ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಆಫ್‍ಲೈನ್(ಭೌತಿಕ) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಮಿಸಲಾತಿಗೆ ಅನುಗುಣವಾಗಿ ಸ್ಥಳೀಯ ಮಹಿಳಾ ಹಾಗೂ ಅಲ್ಪ ಸಂಖ್ಯಾತ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಮಾ.27 ರಿಂದ ಶಿಶು ಅಭಿವೃದ್ಧಿ ಯೋಜನಾ ಕಛೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಏಪ್ರಿಲ್.26 ರ ಒಳಗಾಗಿ ಅಗತ್ಯ ದಾಖಲಾತಿಗಳನ್ನೊಳಗೊಂಡ ಅರ್ಜಿಯನ್ನು ಕಛೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಂದಗೋಕುಲ ಬಿಲ್ಡಿಂಗ್, ದುರ್ಗಾಂಬಿಕ ಶಾಲೆ ಎದುರು ನಿಟ್ಟುವಳ್ಳಿ ರೋಡ್, ಸರಸ್ವತಿ ಬಡಾವಣೆ ಹಾಗೂ ದೂ.ಸಂ.08192-263219 ಗೆ ಸಂಪರ್ಕಿಸಬಹುದೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ವಾಟ್ಸ್ ಅಪ್ ಗ್ರೂಪ್ ಗೆ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯ್ನ್ ಆಗಿ
https://chat.whatsapp.com/LVumgkyBt1V4xTg3eEYSBA