ಮೋದಿಯವರ ದಾವಣಗೆರೆ ಟೈಮ್ ಟೇಬಲ್ ಏನಿದೆ ಗೊತ್ತಾ.?

ದಾವಣಗೆರೆ : ನಗರದ ಜಿಎಂಐಟಿ ಕಾಲೇಜಿನಲ್ಲಿ ವಿಜಯಸಂಕಲ್ಪ ಯಾತ್ರೆ ಕೈಗೊಂಡಿದ್ದು, ದಾವಣಗೆರೆಗೆ ಬರುವಷ್ಟರಲ್ಲಿ ಸಂಜೆ ನಾಲ್ಕರಿಂದ ಐದು ಗಂಟೆ ಆಗಲಿದೆ. ಚುನಾವಣೆ ಸಮೀಪವಿರುವ ಕಾರಣ ರಾಜ್ಯಕ್ಕೆ ಬರುವ ಮೋದಿ ಭೇಟಿ ಏಳನೇದ್ದಾಗಿದೆ.
ಮಾ.25ರ ಬೆಳಗ್ಗೆ ನವದೆಹಲಿ ವಿಮಾನ ನಿಲ್ದಾಣದಿಂದ ವಾಯುಪಡೆ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ 10.10ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ತೆರಳಲಿರುವ ಮೋದಿ 10.45 ರಿಂದ 12 ಗಂಟೆವರೆಗೂ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನಗಳ ಸಂಶೋಧನಾ ಸಂಸ್ಥೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ನಂತರ ರಾಜಾಧಾನಿ ಬೆಂಗಳೂರಿಗೆ ಆಗಮಿಸುವರು. ಅಲ್ಲಿ ಮಧ್ಯಾಹ್ನ 1 ಗಂಟೆಗೆ ಕೃಷ್ಣರಾಜಪುರ ವೈಟ್ ಫೀಲ್ಡ್ ನಡುವಿನ ನೂತನ ಮೆಟ್ರೋ ಮಾರ್ಗ ಉದ್ಘಾಟಿಸಲಿದ್ದು, ಇದರೊಳಗೆ ಪ್ರಧಾನಿ ಮೋದಿ ಪ್ರಯಾಣ ಬೆಳೆಸುವರು.
ನಂತರ ಹೆಲಿಕ್ಯಾಪ್ಟರ್ ಮೂಲಕ ದಾವಣಗೆರೆಗೆ ಪ್ರಯಾಣಿಸಲಿರುವ ಮೋದಿ ಮಧ್ಯಾಹ್ನ 3.30ಕ್ಕೆ ಬಿಜೆಪಿ ನಾಲ್ಕು ರಥಯಾತ್ರೆಯ ಮಹಾಸಂಗಮದ ಬೃಹತ್ ಸಮಾವೇಶದಲ್ಲಿ ಪಾಲ್ಗೊಳುವ ಸಂಭವ ಇದ್ದರೂ ಇಲ್ಲಿಗೆ ಬರುವಷ್ಟರಲ್ಲಿ ಸಂಜೆ 4ಗಂಟೆ ಆಗಬಹುದು. ನಂತರ ನೂತನ ವಿಮಾನ ನಿಲ್ದಾಣದ ಶಿವಮೊಗ್ಗಕ್ಕೆ ತೆರಳಲಿರುವ ಮೋದಿ ಕುವೆಂಪು ವಿಮಾನ ನಿಲ್ದಾಣದಿಂದ ನವದೆಹಲಿಗೆ ತೆರಳಲಿದ್ದಾರೆ.
ಈ ಸಮಾವೇಶಕ್ಕೆ ನಾಲ್ಕು ಜಿಲ್ಲೆಯಿಂದ ಬಿಜೆಪಿಕಾರ್ಯಕರ್ತರು ಹಾಗೂ ಜನರು ಆಗಮಿಸುತ್ತಾರೆ ಎಂಬ ಮಾಹಿತಿ ಇದ್ದು, ಈಗ ಏಳು ಜಿಲ್ಲೆಯ ವ್ಯಾಪ್ತಿಗೆ ಪ್ರಧಾನಿ ನರೇಂದ್ರ ಮೋದಿ ಮಹಾ ಸಂಗಮ ಸಮಾವೇಶ ವಿಸ್ತಾರವಾಗಿದೆ. ಈ ಹಿಂದೆ ನಾಲ್ಕು ಜಿಲ್ಲೆಯ ವ್ಯಾಪ್ತಿಗೆ ಮಾತ್ರ ಮಹಾ ಸಂಗಮಕ್ಕೆ ಆಹ್ವಾನಿಸಲಾಗಿತ್ತು. ಇದೀಗ ಗದಗ, ಶಿವಮೊಗ್ಗ ವಿಜಯ ನಗರ, ದಾವಣಗೆರೆ, ಚಿತ್ರದುರ್ಗ ಹಾವೇರಿ ಹಾಗೂ ಬಳ್ಳಾರಿಯಿಂದ ಸುಮಾರು ಹತ್ತು ಸಾವಿರ ಬಸ್ಸುಗಳಲ್ಲಿ ಆರು ಲಕ್ಷ ಜನರ ಆಗಮನದ ನಿರೀಕ್ಷೆ ಇದೆ.
ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಹಾ ಸಂಗಮದ ಪ್ರಧಾನ ವೇದಿಕೆ ಸಿದ್ಧವಾಗಿದೆ. ಆ ವೇದಿಕೆಯಲ್ಲಿ ಒಂದು ನೂರು ಜನರು ಕೂರುವ ವ್ಯವಸ್ಥೆ ಮಾಡಲಾಗಿದ್ದು, ಈಗ ಆಸಂಖ್ಯೆ 30ಕ್ಕೆ ಕುಸಿದಿದೆ. ಒಟ್ಟು ಮೂರು ವೇದಿಕೆ ನಿರ್ಮಾಣ ಮಾಡಲಾಗಿದೆ. ಒಂದು ವೇದಿಕೆಯಲ್ಲಿ ಹಾಲಿ ಶಾಸಕರು ಹಾಗೂ ಮತ್ತೊಂದು ವೇದಿಕೆಯಲ್ಲಿ ಮಾಜಿ ಶಾಸಕರು ಸಂಸದರು ಹಾಗೂ ರಾಜ್ಯದ ಎಲ್ಲ ಜಿಲ್ಲಾ ಬಿಜೆಪಿ ಜಿಲ್ಲಾ ಅಧ್ಯಕ್ಷರುಗಳಿಗೆ ಕೂರಲು ವ್ಯವಸ್ಥೆ ಮಾಡಲಾಗಿದೆ.
ಇನ್ನು ಸಮಾವೇಶಕ್ಕೆ ಆಗಮಿಸುವ ಜನರಿಗೆ ಬೆಳಗ್ಗೆ ಉಪಾಹಾರಕ್ಕೆ ಉಪ್ಪಿಟ್ಟು ಕೇಸರಿ ಬಾತ್ ಹಾಗೂ ಮಧ್ಯಾಹ್ನದ ಊಟಕ್ಕೆ ಗೋಧಿ ಪಾಯಸ, ಮೊಸರನ್ನ, ಪಲಾವ್ ಸಿದ್ಧ ಪಡಿಸಲಾಗುತ್ತದೆ.
ನಾಲ್ಕು ನೂರು ಊಟದ ಕೌಂಟರ್ ತೆರೆಯಲು ನಿರ್ಧಾರ ಮಾಡಲಾಗಿದ್ದು. ಒಂದು ಸಾವಿರ ಅಡುಗೆ ಭಟ್ಟರಿಂದ ಊಟ ತಿಂಡಿ ತಯಾರಿ ಕಾರ್ಯ ನಡೆಯುತ್ತದೆ. ಹಾಗೂ ವೇದಿಕೆಯ ಮುಂಭಾಗಕ್ಕೆ ಎರಡು ಲಕ್ಷ ಮಾತ್ರ ಆಸನದ ವ್ಯವಸ್ಥೆ ಮಾಡಲಾಗಿದೆ.