ಪರಿಸರ ಸಂರಕ್ಷಣೆಗಾಗಿ ೧೦ ಸಾವಿರ ಬೀಜದುಂಡೆಗಳ ತಯಾರಿಸಿದ ಬಿಜೆಪಿ ರೈತ ಮೊರ್ಚಾ

IMG-20210705-WA0013

 

ದಾವಣಗೆರೆ,ಜು.೫: ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನದ ದಿನದ ಅಂಗವಾಗಿ ಪರಿಸರ ಸಂರಕ್ಷಣೆಗಾಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಬೀಜದುಂಡೆ ತಯಾರಿಸಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಇತ್ತೀಚಿನ ದಿನಗಳಲ್ಲಿ ಪರಿಸರ ನಾಶ ಹೆಚ್ಚಾಗುತ್ತಿದೆ. ಹೀಗಾಗಿ, ಅತಿ ಹೆಚ್ಚಾಗಿ ಗಿಡ-ಮರ ಬೆಳೆಸಬೇಕಾಗಿದೆ. ಆದ್ದರಿಂದ ರೈತ ಮೋರ್ಚಾದಿಂದ ಹತ್ತು ಸಾವಿರ ಬೀಜದುಂಡೆ ತಯಾರಿಸಿ ಜಿಲ್ಲೆಯ ಉದ್ಯಾನವನ ಸೇರಿದಂತೆ ಇತರೆಡೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ  ಜಿಲ್ಲಾ ಭಾಜಪ ರೈತ ಮೋರ್ಚಾ ಉಪಾಧ್ಯಕ್ಷರಾದ ಚಂದ್ರಶೇಖರ್, ,ಪ್ರಧಾನ ಕಾರ್ಯದರ್ಶಿ ಅಜ್ಜಪ್ಪ,ಕಾರ್ಯದರ್ಶಿ

ಶಿವಕುಮಾರ್ ಬಿ.ಕೆ.  ಶಿವಪ್ರಕಾಶ್ ಎ.ಎಮ್.ಹರಿಹರ ರೈತ ಮೋರ್ಚಾ ಅಧ್ಯಕ್ಷರಾದ ಕೊಂಡಜ್ಜಿ ವಿರೇಶ್, ಕಾರ್ಯದರ್ಶಿ ಕಿರಣ್ , ಮಾಯಕೊಂಡ ರೈತ ಮೋರ್ಚಾ ಉಪಾಧ್ಯಕ್ಷರಾದ ನಿತಿನ್,  ಓ ಬಿ ಸಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಜಯಶೀಲಾ ಕೆ. ಆರ್ ಉತ್ತರ ವಿಧಾನಸಭಾ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾ ಪ್ರದಾನ ಕಾರ್ಯದರ್ಶಿ ಶ್ರೀನಿವಾಸ ಎಸ್. ಪಿ.ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ , ಮಹಿಳಾ ಮೋರ್ಚಾದ ಜ್ಯೋತಿ ಬಸಪ್ಪ, ರೂಪ , ಚಂದ್ರಕಲಾ, ಮಂಜುಳಮ್ಮ, ರೇಖಾ ವಾಲಿ, ಮತ್ತು  ಲೋಕಿಕೆರೆ ಅಭಿಮಾನಿ ಬಳಗದ ಅಧ್ಯಕ್ಷ ನೀಲಕಂಠಪ್ಪ .ಎಲ್. ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ .ಎನ್ ಅಭಿಮಾನಿ ಬಳಗದ ಪದಾಧಿಕಾರಿಗಳು, ಸದಸ್ಯರು, ಜಿಲ್ಲಾ ಹಾಗೂ ಮಂಡಲದ ಎಲ್ಲಾ ಮೋರ್ಚಾ ಪದಾಧಿಕಾರಿಗಳು,ಹಾಗೂ ಬಿಜೆಪಿ ಕಾರ್ಯಕರ್ತರುಗಳು,ವಿದ್ಯಾನಗರದ ನಾಗರೀಕರು ಇದ್ದರು.

Leave a Reply

Your email address will not be published. Required fields are marked *

error: Content is protected !!