ದಾವಣಗೆರೆ ಜಿಲ್ಲೆಯ 2018 ರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಹೇಗಿತ್ತು ಎಂಬುದರ ಪರಿಚಯ..!

ದಾವಣಗೆರೆ :ಮಧ್ಯಕರ್ನಾಟಕದ ಕೇಂದ್ರ ಬಿಂದು, ವಿದ್ಯಾಕಾಶಿ, ಬೆಣ್ಣೆದೋಸೆ ನಗರಿ ಎಂಬ ಖ್ಯಾತಿ ಹೊಂದಿರುವ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಿಂದ ಪ್ರತ್ಯೇಕಗೊಂಡು 1997ರಲ್ಲಿ ನೂತನ ಜಿಲ್ಲೆಯಾಗಿ ಘೋಷಣೆಯಾಯಿತು. ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ದಾವಣಗೆರೆಯನ್ನ ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಿದ್ದು. ದಾವಣಗೆರೆ ಜಿಲ್ಲೆಯ ಆರು ತಾಲೂಕು 8 ವಿಧಾನಸಭಾ ಕ್ಷೇತ್ರವಾಗಿ ವಿಂಗಡಣೆಯಾಯಿತು. ಇಡೀ ಜಿಲ್ಲೆಯಲ್ಲಿ ಕಾಂಗ್ರೇಸ್ ಹಾಗು ಬಿಜೆಪಿ ನೇರ ಹಣಾಹಣಿ ನಡೆಯುತ್ತಿತ್ತ, 2008 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಳು ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡರೆ ಕಾಂಗ್ರೇಸ್ ಪಕ್ಷ ಕೇವಲ ಒಂದು ಸ್ಥಾನವನ್ನು ಮಾತ್ರ ತನ್ನ ಖಾತೆಗೆ ಹಾಕಿಕೊಂಡಿತು.
2013 ರ ವಿಧಾನಸಭಾ ಚುನಾವಣೆಯಲ್ಲಿ ಏಳು ಕಾಂಗ್ರೇಸ್ ಒಂದು ಜೆಡಿಎಸ್ ಸ್ಥಾನ ಗೆದ್ದು ಬಿಜೆಪಿ ಒಂದೂ ಕ್ಷೇತ್ರದಲ್ಲಿ ಗೆಲವು ಸಾಧಿಸದೆ ಹೀನಾಯ ಸೋಲು ಅನುಭವಿಸುವಂತಾಯಿತು.. ಕೆಜೆಪಿ ,ಬಿಜೆಪಿ ಹಾಗೂ ಬಿಎಸ್ಆರ್ ಕಾಂಗ್ರೇಸ್ ಎಂದು ಇಬ್ಬಾಗವಾದಗ ಕಾಂಗ್ರೇಸ್ ಗೆ ಗೆಲುವು ಸಾಧಿಸಲು ಸುಲಭದ ಮಾತಾಯಿತು.. 2018 ರಲ್ಲಿ ತನ್ನ ಹಳೆ ವರ್ಚಸ್ಸ್ ನ್ನು ಮರಳಿ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದ್ರೆ ಇತ್ತ ಕಾಂಗ್ರೇಸ್ ಪಕ್ಷ ತನ್ನ ಪ್ರಾಭಲ್ಯವನ್ನು ಕಾಪಾಡಿಕೊಂಡು ಹೋಗಲು ಪ್ರಯತ್ನ ಪಟ್ಟಿತ್ತು.
1.ದಾವಣಗೆರೆ ದಕ್ಷಿಣ.
ರಾಜ್ಯ ರಾಜಕಾರಣದಲ್ಲಿ ತನ್ನದೇ ಆದಂತಹ ಚಾಪು ಮೂಡಿಸಿದ ಕ್ಷೇತ್ರವೆಂದರೆ ದಾವಣಗೆರೆಯ ದಕ್ಷಿಣ ಕ್ಷೇತ್ರ ಕಳೆದ ಹಲವು ವರ್ಷಗಳಿಂದ ಕಾಂಗ್ರೇಸ್ ನ ಭದ್ರ ಕೋಟೆಯಾದ ದಕ್ಷಿಣ ಕ್ಷೇತ್ರ ಮಾಜಿ ಸಚಿವ ಕಾಂಗ್ರೇಸ್ ಪಕ್ಷದ ಖಾಯಂ ಖಜಾಂಚಿ, ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುವ ಕ್ಷೇತ್ರವಾಗಿದ್ದು, ಕಾಂಗ್ರೇಸ್ ಅಲೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಜೋರಾಗಿಯೇ ಇತ್ತು.
ಕಳೇದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ಮುಸ್ಲಿಂ ಸಮುದಾಯದವರು ಜಾಸ್ತಿ ಇರೋದ್ರಿಂದ ಕಾಂಗ್ರೇಸ್ ಕಡೆ ಒಲವು ಬಹಳ ಇರುತ್ತೆ.. ಇತ್ತ ಬಿಜೆಪಿಯಿಂದಲೂ ಸಹಅಂದಿನ ಜಿಲ್ಲಾ ಬಿಜೆಪಿಯ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್ ತನ್ನದೆ ಅಂದತಹ ವರ್ಚಸ್ ಬೆಳಸಿಕೊಂಡು ಸಂಘಟನೆ ಮಾಡುತ್ತಿದ್ದರು.. ಕಳೆದ ಎರಡು ಬಾರಿ ಸೋಲು ಅನುಭವಿಸಿದ್ದು ಈ ಬಾರಿ ಶತಾಯ ಗತಾಯ ಗೆಲ್ಲಲೇ ಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದರು.. ಇನ್ನು ಜೆಡಿಎಸ್ ಪಕ್ಷದಿಂದ ಅಮಾನುಲ್ಲಾಖಾನ್ ತನ್ನದೆ ಆದ ವರ್ಚಸ್ ಬೆಳಸಿಕೊಂಡಿದ್ದರು, ಅದರಲ್ಲೂ ಮುಸ್ಲಿಂ ಮುಖಂಡರಾಗಿದ್ದು ಮುಸ್ಲಿಂಮರ ಮತಗಳು ಜೆಡಿಎಸ್ ಪಕ್ಷಕ್ಕೆ ಬಂದೆ ಬರುತ್ತವೆ ಎನ್ನುವ ಲೆಕ್ಕಾಚಾರಲ್ಲಿ ಇದ್ದಾರು. ಮೂರು ಪಕ್ಷಗಳು ತಮ್ಮದೇ ಅದ ಲೆಕ್ಕಾಚಾರದಲ್ಲಿ ಚುನಾವಣ ರಣರಂಗಕ್ಕೆ ರೆಡಿಯಾಗಿದ್ದವು.
2.ದಾವಣಗೆರೆ ಉತ್ತರ.
ಹಲವು ವರ್ಷಗಳಿಂದ ರಾಜ್ಯ ರಾಜಕಾರಣವನ್ನೇ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡ ಪ್ರಭಾವಿ ನಾಯಕರು ಇರುವ ದಾವಣಗೆರೆಯ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷ ಚುನಾವಣ ಜಿದ್ದಾಜಿದ್ದಿ ನಡೆಸುತ್ತಿದ್ದವು.. ಕಾಂಗ್ರೇಸ್ ನ ಹಾಲಿ ಶಾಸಕರು ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸ್ಪರ್ದಿಸುವ ಕ್ಷೇತ್ರವಾಗಿದ್ದು ಕಾಂಗ್ರೇಸ್ ನ ಭದ್ರ ಕೋಟೆಯಾಗಿತ್ತು.. ಇತ್ತ ಬಿಜೆಪಿಯಿಂದ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ತನ್ನದೆ ಆದ ವರ್ಚಸ್ ಗಳಿಸಿಕೊಂಡಿದ್ದಾರೆ ಪ್ರಮುಖವಾಗಿ ಎರಡು ಪಕ್ಷಗಳಲ್ಲಿ ಪೈಪೋಟಿ ಶುರುವಾಗಿತ್ತು.
3. ಜಗಳೂರು.
ಬರದ ನಾಡು ಜಗಳೂರು ಕ್ಷೇತ್ರದ ಚುನಾವಣೆ ಒಂದು ಕಾಲದಲ್ಲಿ ಕಾಂಗ್ರೇಸ್ ಸರ್ಕಾರವನ್ನೇ ಅಲ್ಲೋಲ ಕಲ್ಲೋಲ ಮಾಡಿತ್ತು.ಜಗಳೂರು ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಚುನಾವಣ ಜಿದ್ದಾಜಿದ್ದಿ ಜೋರಾಗಿಯೇ ಇತ್ತು, ಬಿಜೆಪಿಯ ಪ್ರಭಲ ಅಭ್ಯರ್ಥಿ ಎಸ್ ವಿ ರಾಮಚಂದ್ರಪ್ಪ ಕ್ಷೇತ್ರದಲ್ಲಿ ತನ್ನದೇ ಅದ ವರ್ಚಸ್ಸು ಬೆಳಸಿಕೊಂಡಿದ್ದರು. ಮೊದಲು ಕಾಂಗ್ರೇಸ್ ನಿಂದ ಸ್ಪರ್ಧಿಸಿದ ಎಸ್ ವಿ ರಾಮಚಂದ್ರಪ್ಪ 2011 ರಲ್ಲಿ ಅಪರೇಷನ್ ಕಮಲ ದಿಂದ ಬಿಜೆಪಿಗೆ ಸೇರ್ಪಡೆಯಾದ್ರು ಬೈ ಎಲೆಕ್ಷನಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿ ಸಮೀಪದ ಅಭ್ಯರ್ಥಿ ಕಾಂಗ್ರೇಸ್ ನ ಹೆಚ್ ಪಿ ರಾಜೇಶ್ ರನ್ನು ಸೋಲಿಸುವುದರ ಮೂಲಕ ಮತ್ತೆ ತಮ್ಮ ಪ್ರಭಲ್ಯ ಹೆಚ್ಚಿಸಿಕೊಂಡರು ಕಳೆದ 2013 ರ ಚುನಾವಣೆಯಲ್ಲಿ ಕೆಜೆಪಿಗೆ ಸೇರ್ಪಡೆಯಾದಾಗ ಬಿಜೆಪಿಯ ಮತಗಳು ಇಭ್ಬಾಗವಾಗಿ ಸೋಲು ಅನುಭವಿಸುವಂತಾಯಿತು..
2018 ರ ಚುನಾವಣೆಗೆ ಪ್ರಭಲ ಅಭ್ಯರ್ಥಿಯಾಗಿದ್ದು ಕ್ಷೇತ್ರದಲ್ಲಿ ಮತದಾರನ್ನು ತನ್ನತ್ತ ಸೆಳೆಯುತ್ತಿದ್ದಾರೆ ಇತ್ತಾ ಕಾಂಗ್ರೇಸ್ ನ ಹಾಲಿ ಶಾಸಕ ಹೆಚ್ ಪಿ ರಾಜೇಶ್ ಕಳೆದ ಚುನಾವಣೆಯಲ್ಲಿ ಬಹು ಅಂತರಲ್ಲಿ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಜನಪ್ರೀಯತೆ ಬೆಳಸಿಕೊಂಡಿದ್ದಾರೆ..
ಮೊದಲು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದ ಹೆಚ್ ಪಿ ರಾಜೇಶ್ 2011 ರಲ್ಲಿ ಕಾಂಗ್ರೇಸ್ ಸೇರ್ಪಡೆಯಾದ್ರು.. ಆದರೆ ಈ ಭಾರಿ ಕಾಂಗ್ರೇಸ್ ಪಕ್ಷದಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಪಷ್ಪ ಲಕ್ಷ್ಮಣಸ್ವಾಮಿ ಸ್ಫರ್ಧೇಗೆ ಈ ಬಾರಿಯ ಚುನಾವಣೆಗೆ ತಯಾರಿ ನಡೆಸುತ್ತಿದ್ದು ಕ್ಷೇತ್ರದ ಜನರ ಜೊತೆ ಬೆರೆತು ಅಭಿವೃದ್ದಿ ಕೆಲಸ ಮಾಡುವ ಕಡೆ ಗಮನ ಹರಿಸುತ್ತಿದ್ದರು.
4.ಹರಪನಹಳ್ಳಿ
ರಾಜ್ಯ ರಾಜಕಾರಣವನ್ನೇ ತಲೆ ಕೆಡಿಸುವಂತೆ ಮಾಡಿದ ಹರಪ್ಪನಹಳ್ಳಿ ಕ್ಷೇತ್ರದಲ್ಲಿ 2018 ರ ಚುನಾವಣೆಗೆ ಜಿದ್ದಾ ಜಿದ್ದಿ ನಡೆಯುತ್ತಿತ್ತು. ಹರಪ್ಪನಹಳ್ಳಿಯಲ್ಲಿ ಪ್ರಮುಖ ಮೂರು ಪಕ್ಷಗಳು ಚುನಾವಣ ರಣರಂಗಕ್ಕೆ ಸಜ್ಜಾಗಿದ್ದವು.. ಬಳ್ಳಾರಿ ಜಿಲ್ಲೆಗೆ ಸೇರಿದ್ದ ಹರಪ್ಪನಹಳ್ಳಿ 1997 ರಲ್ಲಿ ದಾವಣಗೆರೆ ಪ್ರತ್ಯೇಕ ಜಿಲ್ಲೆಯಾದಾಗ ಬಳ್ಳಾರಿಯಿಂದ ದಾವಣಗೆರೆಗೆ ಸೇರಿಕೊಂಡಿತು.. ಸಾಮಾನ್ಯ ಕ್ಷೇತ್ರವಾಗಿದ್ದು ಘಟಾನುಘಟಿ ನಾಯಕರು ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.. ಮೂರು ಪಕ್ಷಗಳಲ್ಲಿ ಪ್ರಭಲ ನಾಯಕರಿದ್ದು ಕಾಂಗ್ರೇಸ್ ನಿಂದ ದವಂಗತ ಎಂಪಿ ಪ್ರಕಾಶ್ ರವರ ಪುತ್ರ ಹಾಲಿ ಶಾಸಕರಾಗಿದ್ದ ಎಂಪಿ ರವೀಂದ್ರ ಅಭ್ಯರ್ಥಿಯಾಗಿದ್ದರು. ಬಿಜೆಪಿಯಿಂದ ಗಣಿಧಣಿ ಕರುಣಾಕರ್ ರೆಡ್ಡಿ ಹಾಗೂ ಸ್ಥಳೀಯ ಪ್ರಭಲ ಮುಖಂಡ ಬಿಜೆಪಿ ಯಿಂದ ಬಂಡಾಯವೆದ್ದು ಜೆ ಡಿ ಎಸ್ ನಿಂದ ಅರಸೀಕೆರೆ ಕೊಟ್ರೇಶ್ ಪ್ರಭಲ ಅಭ್ಯರ್ಥೀಯಾಗಿದ್ದರು.ಈ ಮೂರು ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದಲ್ಲಿ ತಮ್ಮದೆ ಆದ ವರ್ಚಸ್ ಬೆಳಸಿಕೊಂಡಿದ್ದು ಚುನಾವಣಾ ಅಖಾಡಕ್ಕೆ ಇಳಿದಿದ್ದರು.
5.ಮಾಯಕೊಂಡ.
ಬಿಜೆಪಿಯ ಭದ್ರ ಕೋಟೆಯಾದ ಮಾಯಕೊಂಡ ವಿಧಾನಸಭಾ ಕ್ಷೇತ್ರ 2008 ರಿಂದ ಎಸ್ ಸಿ ಮೀಸಲು ಕ್ಷೇತ್ರವಾಗಿದ್ದು.. ಕಾಂಗ್ರೇಸ್ ಹಾಗೂ ಬಿಜೆಪಿ ಚುನಾವಣ ಜಿದ್ದಾಜಿದ್ದಿ ನಡೆಸುತ್ತಿದ್ದರು.. ಬಿಜೆಪಿ ಯಿಂದ ಅಂತಿಮವಾಗಿ ಫ್ರೋ ನಿಂಗಣ್ಣ ರಿ ಗೆ ಟಿಕೇಟ್ ಘೋಷಣೆ ಮಾಡಿದ್ದರಿಂದ ಬಿಜೆಪಿ ಅಕಾಂಕ್ಷಿಯಾಗಿದ್ದ ಹೆಚ್ ಆನಂದಪ್ಪ ಪಕ್ಷೇತರನಾಗಿ ಮಾಜಿ ಶಾಸಕ ಬಸವರಾಜ್ ನಾಯ್ಕ್ ಜೆಡಿಯು ನಿಂದ ಕಣದಲ್ಲಿದ್ದರು, ಇನ್ನು ಜೆಡಿಎಸ್ ನಿಂದ ಶೀಲಾ ನಾಯ್ಕ್ ಅಭ್ಯರ್ಥೀಯಾಗಿದ್ದರು,.ಇನ್ನು ಕಾಂಗ್ರೇಸ್ ನಿಂದ ಹಾಲಿ ಶಾಸಕರಾಗಿದ್ದ ಶಿವಮೂರ್ತಿ ನಾಯ್ಕ್ ಗೆ ಈ ಭಾರಿ ಟಿಕೇಟ್ ನೀಡಲಿಲ್ಲ ಅವರ ಬದಲು ಮಾಜಿ ಸಚಿವ ಹೆಚ್ ಆಂಜನೇಯ ಅಳಿಯ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ್ (ಬಸವಂತಪ್ಪ) ಕಣದಲ್ಲಿದ್ದರು. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಪಕ್ಷ ಪೈಪೋಟಿ ನೀಡುತ್ತಿತ್ತು.
6.ಚನ್ನಗಿರಿ.
ಚನ್ನಗಿರಿ ಕ್ಷೇತ್ರದ ಮತದಾರರ ಮನಸ್ಥಿತಿ ಹೇಗಿದೆ ಅಂದ್ರೆ ಒಂದು ಸಾರಿ ಗೆಲ್ಲಿಸಿದ ಅಭ್ಯರ್ಥಿಯನ್ನು ಮತ್ತೊಮ್ಮೆ ಗೆಲ್ಲಿಸುವುದಿಲ್ಲ. ಹೊಸಬರಿಗೆ ಅವಕಾಶ ಮಾಡಿಕೊಡೋಣ ಅನ್ನೋ ಮನಸ್ಥಿತಿ. ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ಅದೇ ನಡೆದುಕೊಂಡು ಬಂದಿದೆ. ಕಳೆದ ಬಾರಿ ಬಿಜೆಪಿ ಇಬ್ಬಾಗವಾಗಿ ಕೆಜೆಪಿ ಸ್ಥಾಪನೆಯಾದ ಕಾರಣ ಬಿಜೆಪಿ ಪ್ರಭಾವಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪನವರ ಪರಮಾಪ್ತ ಮಾಡಾಳು ವಿರುಪಾಕ್ಷಪ್ಪ ಕೆಜೆಪಿಯನ್ನು ಸೇರಿ ಕೆಜೆಪಿಯಿಂದ ಸ್ಪರ್ಧೆ ಮಾಡಿದ್ರು.. ಆದ್ರೆ ಬಿಜೆಪಿ ಮತಗಳು ಚದುರಿದ ಕಾರಣ ಕಡಿಮೆ ಅಂತರದಲ್ಲಿ ಸೋಲಿಗೆ ಕಾರಣವಾಯಿತು. ಆದ್ರೆ 2018 ರ ಚುನಾವಣೆಯಲ್ಲಿ ಬಿಜೆಪಿ ಯಿಂದ ಸಕಲ ಸಿದ್ದತೆಗಳನ್ನು ಮಾಡಿಕೊಂಡು ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗೆ ರೆಡಿಯಾಗಿದ್ದರು.. ಅಲ್ಲದೆ ಪರಿವರ್ತಾನ ಯಾತ್ರೆಯಲ್ಲಿ ಮಾಡಾಳು ವಿರುಪಾಕ್ಷಪ್ಪನನ್ನು ಅಭ್ಯರ್ಥಿಯಾಗಿ ಬಿಜೆಪಿಯ ರಾಜ್ಯಧ್ಯಕ್ಷ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ರು..
ಇತ್ತ ಕಾಂಗ್ರೇಸ್ ನ ಅಭ್ಯರ್ಥಿ ಹಾಗೂ ಹಾಲಿ ಶಾಸಕ ವಡ್ನಾಳ್ ರಾಜಣ್ಣ ಇದೇ ನನ್ನ ಕೊನೆ ಚುನಾವಣೆ ಇನ್ನು ಐದು ವರ್ಷ ಅಧಿಕಾರ ಕೊಟ್ಟರೆ ಇನ್ನುಳಿದ ಅಭಿವೃದ್ದಿ ಕೆಲಸಗಳನ್ನು ಮಾಡಿ ಮುಗಿಸುತ್ತೇನೆ ಎಂದು ಪ್ರಚಾರ ಮಾಡುತ್ತಿದ್ದರು.. ಇವರ ನಡುವೆ ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳು ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಜೆಡಿಎಸ್ ನಿಂದ ಹೊದಿಗೆರೆ ರಮೇಶ್ ಕಳೆದ 10 ವರ್ಷದಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ಜೆಡಿಎಸ್ ಮುಖಂಡರಾಗಿರುವ ಹೊದಿಗೆರೆ ರಮೇಶ್ ಕಳೆದ ಬಾರಿಯಷ್ಟೇ ವಿಧಾನಸಭೆಗೆ ಕಣಕ್ಕಿಳಿದಿದ್ದು ಸೋಲು ಕಂಡಿದ್ದರು. ನಂತರ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ ಜೆಡಿಎಸ್ನ್ನ ಬಲಪಡಿಸಿದ್ದರು. 2018 ರಲ್ಲಿ ಜೆಡಿಎಸ್ ನಿಂದ ಮತ್ತೆ ಕಣಕ್ಕಿಳಿದಿದ್ದ ಹೊದಿಗೆರೆ ರಮೇಶ್ ಗೆಲ್ಲುವ ಕುದುರೆಯಾಗಿದ್ದರು. ಅಲ್ಲದೆ ಜೆಡಿಯು ನಿಂದ ಮಹೀಮಾ ಜೆ ಪಾಟೀಲ್ ಸ್ಪರ್ದೆಗೆ ಇಳಿದಿದ್ದು.. ಮಾಜಿ ಮುಖ್ಯಮಂತ್ರಿ ದಿವಾಂಗತ ಜೆ ಹೆಚ್ ಪಾಟೀಲ್ ರ ಮಗನಾಗಿದ್ದು 2004 ರಲ್ಲಿ 10,683 ಮತಗಳ ಅಂತರದಿಂದ ಪ್ರತಿಸ್ಪರ್ಧಿ ಕಾಂಗ್ರೇಸ್ ಅಭ್ಯರ್ಥಿ ವಡ್ನಾಳ್ ರಾಜಣ್ಣ ರನ್ನು ಸೋಲಿಸಿದ್ರು.. ಜೆಡಿಯೂ ಪಕ್ಷವನ್ನು ಸಂಘಟನೆ ಮಾಡಿ ಚುನಾವಣೆ ಗೆಲ್ಲುವ ನಿರೀಕ್ಷೆಯನ್ನು ಹೊಂದಿದ್ದರು.
7.ಹರಿಹರ.
ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಮೂರೂ ಪಕ್ಷಗಳು ತಮ್ಮದೇ ಅದಂತಹ ವರ್ಚಸ್ಸು ಬೆಳಸಿಕೊಂಡಿದ್ದವು.. ಒಮ್ಮ ಕಾಂಗ್ರೇಸ್ ಅಭ್ಯರ್ಥಿ ಗೆಲುವು ಸಾಧಿಸಿದ್ರೆ ಮತ್ತೊಂದು ಸಲ ಬಿಜೆಪಿ ತದ ನಂತರ ಜೆಡಿಎಸ್ ಹೀಗೆ ಒಂದೇ ಪಕ್ಷ ಅಧಿಕಾರಕ್ಕೆ ಬಾರದೆ ಎಲ್ಲಾ ಪಕ್ಷಗಳನ್ನು ಗೆಲ್ಲಿಸುತ್ತಾ ಈ ಕ್ಷೇತ್ರ ಬಂದಿದೆ.. ಜೆಡಿಎಸ್ ನಿಂದ ಅಂದಿನ ಶಾಸಕರಾಗಿದ್ದ ಹೆಚ್ ಎಸ್ ಶಿವಶಂಕರ್ ಅಭ್ಯರ್ಥಿಯಾದ್ರೆ ಬೆಜೆಪಿಯಿಂದ ಮಾಜಿ ಶಾಸಕ ಬಿ.ಪಿ.ಹರೀಶ್, ಇತ್ತ ಕಾಂಗ್ರೇಸ್ ನಿಂದ ಎಸ್.ರಾಮಪ್ಪ ಅಭ್ಯರ್ಥಿಗಳಾಗಿದ್ದರು.
8.ಹೊನ್ನಾಳಿ.
ಹೊನ್ನಾಳಿ ಕ್ಷೇತ್ರದ ರಾಜಕೀಯವನ್ನು ಸುಲಭವಾಗಿ ಲೆಕ್ಕಚಾರ ಹಾಕುವುದು ಕಷ್ಟದಾಯಕವಾಗಿದೆ.. ಯಾಕಂದ್ರೆ ಇಲ್ಲಿನ ಮತದಾರರು ಯಾರ ಕಡೆ ತಮ್ಮ ಒಲವನ್ನು ತೋರಿಸುತ್ತಾರೆ ಎನ್ನುವುದೇ ತಿಳಿಯುವುದು ಕಷ್ಟವಾಗಿದೆ..
2008 ರ ಚುನಾವಣೆಯಲ್ಲಿ ಬಿಜೆಪಿಗೆ ಒಲವು ತೋರಿಸಿದ್ರೆ 2013 ರಲ್ಲಿ ಕಾಂಗ್ರೇಸ್ ಗೆ ಮತ ನೀಡಿದ್ದಾರೆ.. ಬಿಜೆಪಿಯಿಂದ ಎಂ ಪಿ ರೇಣುಕಾಚಾರ್ಯ ಪ್ರಭಲ ಅಭ್ಯರ್ಥಿಯಾಗಿದ್ದು ಸಕ್ರೀಯ ರಾಜಕಾರಣದಲ್ಲಿ ತೊಡಗಿದ್ದಾರು, 2013 ರಲ್ಲಿ ಬಿಜೆಪಿಯಿಂದ ಕೆಜೆಪಿ ಗೆ ಸೇರ್ಪಡೆಯಾಗಿ ಟಿಕೇಟ್ ಹಂಚಿಕೆಯಾಗಿ ಸೋಲನ್ನು ಅನುಭವಿಸಿದ್ರು.ಇತ್ತ ಕಾಂಗ್ರೇಸ್ ನ ಪ್ರಭಲ ಅಭ್ಯರ್ಥಿ ಅಂದಿನ ಹಾಲಿ ಶಾಸಕ ಶಾಂತನಗೌಡ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದರು.. ಪ್ರಮುಖವಾಗಿ ಹೊನ್ನಳ್ಲಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ.. ಹಿಂದಿನಿಂದಲೂ ರಾಜಕೀಯ ಹಿನ್ನಲೆಯಿರುವ ಕುಟುಂಭದಲ್ಲಿ ಬೆಳೆದುಬಂದಿದ್ದ ಶಾಂತನಗೌಡ ಎರಡು ಬಾರಿ ಬಿಜೆಪಿ ಅಭ್ಯರ್ಥಿಯ ಮುಂದೆ ಪರಾಭವಗೊಂಡಿದ್ರು.. ಬಿಜೆಪಿ ಹಾಗೂ ಕೆಜೆಪಿ ಬೇರ್ಪಾಟ್ಟಾಗ ಶಾಂತನಗೌಡರಿಗೆ ಗೆಲ್ಲುವ ಅವಕಾಶ ಸಿಕ್ಕಿತು. ಇನ್ನು ಹೊನ್ನಾಳಿಯಲ್ಲಿ ಜೆ ಡಿ ಎಸ್ ಪಕ್ಷ ಬಿ ಎಸ್ ಪಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು ಸತ್ಯನಾರಯಣರಾವ್ ಕಠಾರಿ ಅಭ್ಯರ್ಥಿಯಾಗಿದ್ದರು.
ಒಟ್ಟಾರಿ ಇದು 2018 ರ ವಿಧಾನಸಭಾ ಚುನಾವಣೆ ಪೂರ್ವದ ಮಾಹಿತಿಯಾಗಿದ್ದು.. ಮುಂದಿನ ಸಂಚಿಕೆಯಲ್ಲಿ 2018 ರಲ್ಲಿ ಯಾರೆಲ್ಲ ಅಭ್ಯರ್ಥಿಗಳು ಜಯ ಸಾಧಿಸಿದ್ರು, ಯಾರೆಲ್ಲಾ ಸೋತರು.. ಅವರುಗಳು ಪಡೆದ ಮತಗಳೇಷ್ಟು ಎಂಬಂತಹ ಕೂತಹಲಕಾರಿಯಾದ ಮಾಹಿತಯನ್ನ ಗರುಡಚರಿತೆ ಹಾಗೂ ಗರುಡವಾಯ್ಸ್.ಕಾಂ ನಲ್ಲಿ ತಪ್ಪದೇ ವೀಕ್ಷೀಸಿ..
ಇಂತಿ ನಿಮ್ಮ
ಹೆಚ್ ಎಂ ಪಿ ಕುಮಾರ್
ಸಂಪಾದಕರು.