ಪಂಚಮಸಾಲಿಗೆ ಮೀಸಲಾತಿ ಸಿಗುವುದರಲ್ಲಿ ನನ್ನ ದೊಡ್ಡ ಕೊಡುಗೆ ಇದೆ; ಯತ್ನಾಳ್
ವಿಜಯಪುರ: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗುವುದರಲ್ಲಿ ನನ್ನ ದೊಡ್ಡ ಕೊಡುಗೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ರಾಜ್ಯ ಸರ್ಕಾರ ಪ್ರಕಟಿಸಿರುವ ಮೀಸಲಾತಿ ಕುರಿತಂತೆ ಪ್ರತಿಕ್ರಿಯಿಸಿದರು. ನಾನು ಎಲ್ಲ ಅಧಿಕಾರ ತ್ಯಾಗ ಮಾಡಿದ ಕಾರಣ ಹೈಕಮಾಂಡ್ ನನ್ನ ಜೊತೆ ಚರ್ಚಿಸಿ ನಮ್ಮ ಸಮಾಜ ಮೀಸಲಾತಿ ನೀಡಿದೆ ಎಂದು ಯತ್ನಾಳ್ ತಿಳಿಸಿದರು.
ಬಿಜೆಪಿ ಹೈಕಮಾಂಡಿಗೆ ಬಸನಗೌಡ ಪಾಟೀಲ್ ಯತ್ನಾಳ್‌ರ ಜನಪ್ರೀಯತೆ ಗೊತ್ತಾಗಿದೆ. ಅದಕ್ಕೆ ಮೀಸಲಾತಿ ಸಿಕ್ಕಿದೆ ಎಂದ ಅವರು, ನಮಗೆಲ್ಲ ಮೀಸಲಾತಿ ನೀಡಬೇಕಾದರೆ, ಅದಕ್ಕೂ ಮೊದಲು ಎಸ್.ಸಿ.ಎಸ್.ಟಿ. ಜನಾಂಗಕ್ಕೆ ನ್ಯಾಯ ಸಿಗುವಂತಾಗಲು ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದರು. ತಳವಾರ ಸಮಾಜಕ್ಕೆ ಎಸ್. ಟಿ. ಸ್ಥಾನ ಮಾಡಿದರು. ಈ ಮೂಲಕ ಎಲ್ಲ ಸಮಾಜಗಳಿಗೆ ಸಾಮಾಜಿಕ ನ್ಯಾಯ ನೀಡಲಾಯಿತು ಎಂದು ತಿಳಿಸಿದರು.