ಗೊಲ್ಲರಹಳ್ಳಿಯಲ್ಲಿ ಇಂದು ವೆಂಕಟೇಶ್ವರಸ್ವಾಮಿ ರಥೋತ್ಸವ

ದಾವಣಗೆರೆ: ಸಮೀಪದ ಗೊಲ್ಲರಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ನಾಳೆ ಗುರುವಾರ ಸಂಜೆ 4.30ಕ್ಕೆ ನಡೆಯಲಿದೆ.
ರಥೋತ್ಸವದ ಪ್ರಯುಕ್ತ ಇಂದು ಸಂಜೆ 6ಕ್ಕೆ ಸರ್ಪೋತ್ಸವ ಪೂಜೆ, ರಾತ್ರಿ 7.15ಕ್ಕೆ ಗಂಗಾ ವರುಣಾ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಏರ್ಪಾಡಾಗಿವೆ. ಗುರುವಾರ ಮುಂಜಾನೆ 5.30ಕ್ಕೆ ಶ್ರೀ ಸ್ವಾಮಿಯ ಪಂಚಾಮೃತಾಭಿಷೇಕ, ಕಲ್ಯಾಣೋತ್ಸವ, ಬೆಳಿಗ್ಗೆ 11.45ಕ್ಕೆ ಸರ್ವ ಭಕ್ತರಿಗೆ ಅನ್ನ ಸಂತರ್ಪಣೆ, ಬೆಳಿಗ್ಗೆ 11.45ರಿಂದ ರಥದ ಪೂಜಾ ಕಾರ್ಯಕ್ರಮಗಳು, ಸಂಜೆ 4.30ಕ್ಕೆ ರಥೋತ್ಸವ ಜರುಗಲಿದೆ. ದಿನಾಂಕ 31ರ ಶುಕ್ರವಾರ ಬೆಳಿಗ್ಗೆ ಓಕುಳಿ ಕಾರ್ಯಕ್ರಮ, ಬನ್ನಿ ಪೂಜೆ ನಡೆಯಲಿದೆ ಎಂದು ಗೊಲ್ಲರಹಳ್ಳಿ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಧರ್ಮದರ್ಶಿ ಬಿ.ಟಿ. ಸಿದ್ದಪ್ಪ ತಿಳಿಸಿದರು.