ಸಾರಿಗೆ ದರ ಹೆಚ್ಚಳಕ್ಕೆ ಎಸ್ ಯುಸಿಐ ಖಂಡನೆ; ಕೆಎಸ್ ಆರ್ ಟಿಸಿ ಬಳಿ ಪ್ರತಿಭಟನೆ

ದಾವಣಗೆರೆ. ಜು.೬; ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ದಾವಣಗೆರೆ ವಿಭಾಗ ಹೆಚ್ಚಿಸಿರುವ ಪ್ರಯಾಣದರವನ್ನು ಪಡೆಯುವಂತೆ ಒತ್ತಾಯಿಸಿ ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಸದಸ್ಯರು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯರಾದ ಡಾ. ಟಿ ಎಸ್ ಸುನಿತ್ ಕುಮಾರ್ ” ಕೋವಿಡ್-19 ನಂತಹ ಸಾಂಕ್ರಾಮಿಕ ರೋಗ ಕಳೆದ ಎರಡು ವರ್ಷಗಳಿಂದ ದೇಶವನ್ನು ತಲ್ಲಣಗೊಳಿಸಿದ್ದು, ಜನಜೀವನ ದುಸ್ತರ ಆಗಿರುವಂತಹ ಸಂದರ್ಭದಲ್ಲಿ ಆಡಳಿತ ಪಕ್ಷಗಳು ಶ್ರೀಸಾಮಾನ್ಯರ ಕಷ್ಟಕ್ಕೆ ಸ್ಪಂದಿಸದೇ ಬದಲಿಗೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಬೆಳೆಯುತ್ತಿದೆ, ಇಷ್ಟು ಸಾಲದೆಂಬಂತೆ ಸಾರಿಗೆಯ ದಾವಣಗೆರೆ ವಿಭಾಗಾಧಿಕಾರಿಗಳು ಜಿಲ್ಲೆಯ ಹಾಗೂ ನಗರ ಸಾರಿಗೆ ಪ್ರಯಾಣ ದರ ಹೆಚ್ಚಿಸುವ ಮೂಲಕ ಪದೇ ಪದೇ ಜನರ ಕೆಂಗಣ್ಣಿಗೆ ಗುರಿಯಾಗುತ್ತಿವೆ, ಅಲ್ಲದೆ ಈರೀತಿಯ ದರ ಹೆಚ್ಚಿಸುವ ಕ್ರಮ ಅಕ್ಷಮ್ಯ” ಎಂದು ಹೇಳಿದರು,
ಕಳೆದ ಎರಡು ವರ್ಷಗಳಿಂದ ಇಡೀ ದೇಶದ ಜನ ಕರೋನಾ ಸಾಂಕ್ರಾಮಿಕ ಕಾಯಿಲೆಯಿಂದ ತತ್ತರಿಸಿಹೋಗಿದ್ದಾರೆ, ದಿನನಿತ್ಯ ಜೀವನ ಸಾಗಿಸುವುದು ಕೂಡ ದುಸ್ತರವಾಗಿದೆ ಲಕ್ಷಗಟ್ಟಲೆ ಜೀವ ಹಾನಿಯು ಆಗಿದೆ ಇಂತಹ ಭೀಕರ ಪರಿಸ್ಥಿತಿಯಲ್ಲಿ ಕೋಟ್ಯಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಹಲವಾರು ಅರೆಬರೆ ಉದ್ಯೋಗ ಹಾಗೂ ಅರೆಬರೆ ವೇತನದಲ್ಲಿ ಜೀವನ ಮಾಡಬೇಕಾಗಿದೆ, ಇನ್ನೂ ಹಲವಾರು ಜನ ಒಪ್ಪತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಸರ್ಕಾರಗಳು ಜನರ ಬೆನ್ನೆಲುಬಾಗಿ ನಿಲ್ಲಬೇಕಾಗಿತ್ತು, ಅಗತ್ಯವಸ್ತುಗಳನ್ನು ಪೂರೈಸ ಬೇಕಾಗಿತ್ತು, ಆರೋಗ್ಯ ವ್ಯವಸ್ಥೆಯನ್ನು ಉತ್ತಮಗೊಳಿಸಿ ಎಲ್ಲರಿಗೂ ಉಚಿತವಾಗಿ ನೀಡಬೇಕಾಗಿತ್ತು ಆದರೆ ಪರಿಸ್ಥಿತಿ ಇದೆಲ್ಲದಕ್ಕೂ ತದ್ವಿರುದ್ಧವಾಗಿದೆ, ಬದುಕು ಕಳೆದುಕೊಂಡು, ಉದ್ಯೋಗ ಕಳೆದುಕೊಂಡು, ಆದಾಯವನ್ನು ಕಳೆದುಕೊಂಡು ಜೀವನದಲ್ಲಿ ನೆಲಕಚ್ಚಿರುವ ಶ್ರೀಸಾಮಾನ್ಯನ ಮೇಲೆ ಬೆಲೆ ಏರಿಕೆ ಅದರಲ್ಲೂ ಸಾರಿಗೆ ಸಂಸ್ಥೆಯ ಪ್ರಯಾಣದರ ಹೆಚ್ಚಳದ ಕಲ್ಲನ್ನು ಹೇರಿದಂತಾಗಿದೆ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ
ರಸ್ತೆ ಸಾರಿಗೆ ಸಂಸ್ಥೆ ದಾವಣಗೆರೆ ವಿಭಾಗದಲ್ಲಿ ಹೆಚ್ಚಿಸಿರುವ ಪ್ರಯಾಣದರವನ್ನು ಹಿಂಪಡೆಯಬೇಕು.ಎಲ್ಲಾ ತಾಲೂಕು ಕೇಂದ್ರಗಳಿಗೆ,ಗ್ರಾಮೀಣಭಾಗದಲ್ಲಿ ಬಸ್ ಸೌಕರ್ಯಗಳನ್ನು ಕಲ್ಪಿಸಬೇಕು
ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಂಜುನಾಥ್ ಕೈದಾಳೆ, ಮಂಜುನಾಥ್ ಕುಕ್ಕುವಾಡ, .ತಿಪ್ಪೇಸ್ವಾಮಿ, ಮಧು ತೊಗಲೇರಿ, .ಟಿವಿಎಸ್ ರಾಜು, ಭಾರತಿ ಪರಶುರಾಮ್ ಶಿವಾಜಿರಾವ್, ನಾಗಜ್ಯೋತಿ, ಪೂಜಾ ಕಾವ್ಯ ನಾಗಸ್ಮಿತ ಪುಷ್ಪ ಇತರರು ಇದ್ದರು.