ಎಸ್ಸೆಸ್ಸೆಲ್ಸಿ: ರಾಜ್ಯಾದ್ಯಂತ 3,305 ಕೇಂದ್ರಗಳಲ್ಲಿ ಪರೀಕ್ಷೆ

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ 2023ರ ಸಾಲಿನ ಎಸೆಸೆಲ್ಸಿ ಅಂತಿಮ ಪರೀಕ್ಷೆ ನಡೆಯಲಿದೆ. ಏಪ್ರಿಲ್ 15ರ ವರೆಗೆ ಪರೀಕ್ಷೆ ನಡೆಯಲಿದ್ದು ಸಕಲ ಸಿದ್ದತೆಗಳನ್ನು ನಡೆಸಲಾಗಿದೆ. ಯಾವುದೇ ಅಕ್ರಮಗಳಿಗೆ ಅವಕಾಶ ಸಿಗದಂತೆ ಹಾಗೂ ಯಾವುದೇ ಅಡ್ಡಿ ಆತಂಕಗಳಿಲ್ಲದಂತೆ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಒಟ್ಟು 15,498 ಶಾಲೆಗಳ 8,42,811 ವಿದ್ಯಾರ್ಥಿಗಳಿಂದ ಪರೀಕ್ಷೆಗೆ ನೋಂದಣಿ
5,833 ಸರ್ಕಾರಿ ಶಾಲೆಗಳ 3.60 ಲಕ್ಷ ವಿದ್ಯಾರ್ಥಿಗಳಿಂದ ಪರೀಕ್ಷೆ
3,605 ಅನುದಾನಿತ ಶಾಲೆಗಳ 2.20 ಲಕ್ಷ, 6,060 ಅನುದಾನ ರಹಿತ ಶಾಲೆಗಳ 2.61 ಲಕ್ಷ ವಿದ್ಯಾರ್ಥಿಗಳಿಂದ ನೋಂದಣಿ
ರಾಜ್ಯಾದ್ಯಂತ ಒಟ್ಟು 3,305 ಕೇಂದ್ರಗಳಲ್ಲಿ ಪರೀಕ್ಷೆ.