ಮೋದಿ ಸಂಪುಟದಲ್ಲಿ ಕೋಟೆ ನಾಡಿನ ಸಂಸದರಿಗೆ ಹರಸಿಬಂದ ಕೇಂದ್ರ ಸಚಿವ ಸ್ಥಾನ,

ಚಿತ್ರದುರ್ಗ: 30 ವರ್ಷ ಭಾರತೀಯ ಜನತಾ ಪಕ್ಷದಲ್ಲಿ ಕೆಲಸ . ನಾಲ್ಕು ಬಾರಿ ಶಾಸಕನಾಗಿ, ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ .ಮೊಟ್ಟಮೊದಲ ಬಾರಿಗೆ ನಮ್ಮ ಕರ್ನಾಟಕದಿಂದ 25 ಜನ ಸಂಸದರು ಗೆದ್ದು ಬಂದಿರುವ ಅನೇಕ ಹಿರಿಯ ಸಂಸದರು ಇದ್ದಾರೆ. ಅವೆರೆಲ್ಲರ ನಡುವೆ ಮೊಟ್ಟಮೊದಲ ಬಾರಿಗೆ ಗೆದ್ದ ಕೇಂದ್ರ ಸಂಪುಟದಲ್ಲಿ ಅವಕಾಶ ಮಾಡಿಕೊಟ್ಟಿರುವ ಕೇಂದ್ರ ಸರ್ಕಾರ ಚಿತ್ರದುರ್ಗ ಸಂಸದರನ್ನು ಆಯ್ಕೆ ಮಾಡಿ ಮಂತ್ರಿಗಿರಿಯನ್ನು ನೀಡಿರುವುದು ಶ್ಲಾಘನೀಯ ವಿಷಯವಾಗಿದೆ.
1966ರಲ್ಲಿ ಆನೇಕಲ್ ಪುರಸಭೆ ಸದಸ್ಯರಾಗಿ ಆಯ್ಕೆ. 1997ರಲ್ಲಿ ಪ್ರಥಮ ಬಾರಿಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆ. ಅಲ್ಲಿಂದ 1999, 2004 ಹಾಗೂ 2008ರಲ್ಲಿ ಶಾಸಕರಾಗಿ ಆಯ್ಕೆ. 2010ರಲ್ಲಿ ಸಮಾಜ ಕಲ್ಯಾಣ ಹಾಗೂ ಬಂದೀಖಾನೆ ಸಚಿವ ಸ್ಥಾನ.ಬಿಜೆಪಿ ಎಸ್.ಸಿ ಮೋರ್ಚಾ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆ, 2019ರಲ್ಲಿ ಚಿತ್ರದುರ್ಗ ಸಂಸದರಾಗಿ ಆಯ್ಕೆಯಾಗಿರುತ್ತಾರೆ.
ಕೋಟಿ ನಾಡು ಚಿತ್ರದುರ್ಗ ಲೋಕಸಭಾ ಸದಸ್ಯರರಾದ ಶ್ರೀ ಎ.ನಾರಾಯಣಸ್ವಾಮಿ ಇವರಿಗೆ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಶುಭಾಶಯ ಕೋರಿದ್ದಾರೆ.