ದಾವಣಗೆರೆ ಕ್ರಿಕೆಟ್ ಅಕಾಡೆಮಿ ವತಿಯಿಂದ 22ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ

ದಾವಣಗೆರೆ ಕ್ರಿಕೆಟ್ ಅಕಾಡೆಮಿ ವತಿಯಿಂದ 22ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ

ದಾವಣಗೆರೆ :ದಾವಣಗೆರೆ ಕ್ರಿಕೆಟ್ ಅಕಾಡೆಮಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಾವಣಗೆರೆ ಸಂಯುಕ್ತ ಆಶ್ರಯದಲ್ಲಿ ಸತತ 22ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಏಪ್ರಿಲ್ 2ರಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಹೈಸ್ಕೂಲ್ ಮೈದಾನದಲ್ಲಿ ಪ್ರಾರಂಭವಾಗಿದೆ. ತರಬೇತಿ ಶಿಬಿರದಲ್ಲಿ ಬೇಸಿಕ್ ಹಾಗೂ ಅಡ್ವಾನ್ಸ್ ಸ್ಕಿಲ್ ಗಳನ್ನು ಬಿ ಸಿ ಸಿ ಐ ಹಾಗೂ ಕೆ ಎಸ್ ಸಿ ಎ ತರಬೇತುದಾರರು ಕಲಿಸಿಕೊಡುವರು. ಶಿಬಿರದಲ್ಲಿ ಫಿಟ್ನೆಸ್ ಬಗ್ಗೆಯೂ ಹೇಳಿಕೊಡಲಾಗುವುದು. ಶಿಬಿರದ ಮಧ್ಯದಲ್ಲಿ ಬೇರೆ ಜಿಲ್ಲೆಗಳ ಕ್ರಿಕೆಟ್ ತಂಡದ ವಿರುದ್ಧ ಪಂದ್ಯಗಳನ್ನು ಕೂಡ ಆಯೋಜಿಸಲಾಗಿದೆ.

ದಾವಣಗೆರೆ ಕ್ರಿಕೆಟ್ ಅಕಾಡೆಮಿ ವತಿಯಿಂದ 22ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ

ಎರಡು ತಿಂಗಳ ಕಾಲ ನಡೆಯುವ ಶಿಬಿರಕ್ಕೆ ಇತರೆ ಸ್ಥಳದ ನುರಿತ ತರಬೇತುದಾರರು ಕೂಡ ಆಗಮಿಸಿ ವಿಶೇಷ ತರಬೇತಿ ನೀಡಲಿದ್ದಾರೆ. ಹೆಚ್ಚಿನ ವಿವರಗಳಿಗೆ ತರಬೇತಿ ಶಿಬಿರದ ಆಯೋಜಕರಾದ ಶ್ರೀ ಗುರುದೇವ್ ಅಂಬರ್ಕರ್ 9964599160, ಶ್ರೀ ಗೋಪಾಲಕೃಷ್ಣ 7899610318, ಶ್ರೀ ತಿಮ್ಮೇಶ್ 9880440602 ಅವರನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!