ಪ್ರತಿಷ್ಠಿತ ಶಿವ ಸಹಕಾರಿ ಬ್ಯಾಂಕ್ ಮೇಲೆ ಹುಬ್ಬಳ್ಳಿ ಐಟಿ ಅಧಿಕಾರಿಗಳ ಬೇಟೆ

IMG_20230401_193415 (2)

ದಾವಣಗೆರೆ : ದಾವಣಗೆರೆ ಪಟ್ಟಣದ ಚಾಮರಾಜಪೇಟೆ ಸರ್ಕಲ್ ನಲ್ಲಿರುವ ಪ್ರತಿಷ್ಠಿತ ಶಿವ ಸಹಕಾರಿ ಬ್ಯಾಂಕ್ ಮೇಲೆ ಹುಬ್ಬಳ್ಳಿ ಮೂಲದ ಐಟಿ ಅಧಿಕಾರಿಗಳು ಎರಡು ದಿನದಿಂದ ದಾಳಿ ನಡೆಸಿದ್ದಾರೆ.

ಬೆಣ್ಣೆ ನಗರಿಯಲ್ಲಿ ಈಗ ಚುನಾವಣಾ ಹವಾ ಶುರುವಾಗಿದ್ದು, ಕುರುಡು ಕಾಂಚಾಣ ನಡೆಯುತ್ತಿದೆ. ಈಗ ಎತ್ತ ನೋಡಿದರೂ ಕುಕ್ಕರ್ ಸೀರೆ ಹಂಚಿಕೆ ಸೇರಿದಂತೆ ಇತರೆ ವಸ್ತುಗಳು ಮತದಾರನ ಮನೆಗೆ ಸೇರುತ್ತಿದ್ದು, ಕೋಟಿಗಟ್ಟಲೇ ವ್ಯವಹಾರ ನಡೆಯುತ್ತಿದೆ.

 

ಈ ಬ್ಯಾಂಕ್ ಪ್ರತಿಷ್ಠಿತ ಲಿಂಗಾಯತ ಸಮಾಜಕ್ಕೆ ಸೇರಿದ್ದಾಗಿದ್ದು ಎಂದು ಹೇಳಲಾಗುತ್ತಿದೆ. ಒಟ್ಟು 12 ಜನ ಐಟಿ ಅಧಿಕಾರಿಗಳು ಧಾವಿಸಿದ್ದು, ಬ್ಯಾಂಕ್ ಲಾಕರ್‌ಗಳನ್ನು ಚೆಕ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶುಕ್ರವಾರ ಹಾಗೂ ಶನಿಚಾರ ರಾತ್ರಿ ಹತ್ತು ಗಂಟೆಯವರೆಗೆ ಬ್ಯಾಂಕ್ ನಲ್ಲಿ ತಪಾಸಣೆ ಮಾಡಿದ ಅಧಿಕಾರಿಗಳು ಎಲ್ಲಾ ರಿತಿಯ ದಾಖಲೆಯನ್ನು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಶನಿವಾರ ರಾತ್ರಿ 10:45 ಕ್ಕೆ ದಾಖಲೆಗಳ ಪರೀಶೀಲನೆ ಮುಗಿಸಿ 4 ಇನ್ನೊವಾ ಕಾರಿನಲ್ಲಿ ಬಂದಿದ್ದ ಐಟಿ ಅಧಿಕಾರಿಗಳು ಬ್ಯಾಂಕ್ ನಿಂದ ತೆರಳಿದರು. ಬ್ಯಾಂಕ್ ನಿಂದ ಹೋಗುವಾಗ ಮೂರು ಬ್ರಿಫ್ ಕೇಸ್‌ ಗಳನ್ನ ತೆಗೆದುಕೊಂಡು ಹೋಗಲಾಯಿತು, ಅದರಲ್ಲಿ ಏನಿತ್ತು ಎಂಬುದನ್ನ ಐಟಿ ಇಲಾಖೆ ಅಥವಾ ಬ್ಯಾಂಕ್ ನ ಅಡಳಿತ ಮಂಡಳಿ ಸ್ಪಷ್ಟನೆ ನೀಡಿದ ನಂತರ ನಿಖರವಾದ ಮಾಹಿತಿ ತಿಳಿಯಲಿದೆ ಎಂದು ಹೇಳಲಾಗುತ್ತಿದೆ.

ದಾವಣಗೆರೆಯ ಶಿವ ಸಹಕಾರಿ ಬ್ಯಾಂಕ್ ಸ್ಥಳಕ್ಕೆ ನಾಲ್ಕು ಇನೋವಾ ಕಾರಿನಲ್ಲಿ ಬಂದಿದ್ದ ಹುಬ್ಬಳ್ಳಿ ಮೂಲದ ಐಟಿ ಅಧಿಕಾರಿಗಳು ಸಂಪೂರ್ಣ ತಪಾಸಣೆ ನಡೆಸಿ ಹೊರಟರು. ಪ್ರಸ್ತುತ ದಾಖಲೆಗಳ ಪರಿಶೀಲನೆ ನಡೆಸಿ ತೆರಳಿದ್ದು ಅಕ್ರಮ ಅವ್ಯವಹಾರದ ಬಗ್ಗೆ ಮಾಹಿತಿ ಅಧಿಕೃತವಾಗಿ ಬರಬೇಕಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!