ಹ್ಯೂಮಸ್ (Humus) : ಇದು ಸಿಹಿಯ ವಾಸನೆ ಬೀರುವ – ದಟ್ಟವಾದ ಬಣ್ಣದಲ್ಲಿರುವ – ಚೆನ್ನಾಗಿ ಕಳಿತ ಸಾವಯವ ವಸ್ತು.

ದಾವಣಗೆರೆ :ಸಾವಯವ ಕೃಷಿ ಲೋಕದಲ್ಲಿ ” ಕಪ್ಪು ಚಿನ್ನ ” ವೆಂದೇ ಹೆಸರು ಪಡೆದಿದೆ – ಮಣ್ಣಲ್ಲಿ sponge ನಂತೆ ಕೆಲಸ ಮಾಡುತ್ತದೆ.
ಮಣ್ಣುಜೀವಾಣುಗಳಿಗೆ ಮೂಲ ನೆಲೆಯಾಗಿದೆ ಗಿಡಗಳ ಬೇರುಗಳಿಗೆ ನೀರು – ಆಮ್ಲಜನಕ ಹಾಗೂ ಪೋಷಕಾಂಶಗ:ಳು ಸುಲಭವಾಗಿ ಸಿಗುವಂತೆ ಮಾಡುತ್ತವೆ.
ಮಣ್ಣಿನ ಕಣಗಳು ಪರಸ್ಪರ ಬೆರೆಯಲು ಸಹಾಯಕ ಮಣ್ಣು ಮತ್ತು ಗಿಡದ ನಡುವಿನ ಸಂಬಂಧ ಗಟ್ಟಿಮಾಡುತ್ತದೆ.
ಹ್ಯೂಮಸ್ ನಿರ್ಮಿಸುವುದು ಹೇಗೆ ? ಮಣ್ಣಿಗೆ ಒಂದು ವರ್ಷದಲ್ಲಿ, ಕನಿಷ್ಟ ಒಂದು ಸಾರಿಯಾದರೂ ಕಾಂಪೋಸ್ಟ್ / ತಿಪ್ಪೆಗೊಬ್ಬರ ಹಾಕಬೇಕು.
ಮಣ್ಣು ಹೊದಿಕೆ (mulching) ಸದಾ ಕಾಲ ಇರುವಂತೆ ನೋಡಿಕೊಳ್ಳಬೇಕು.
ಆಹಾರ ಬೆಳೆಗಳನ್ನೊಳಗೊಂಡಂತೆ ವಿವಿಧ ಬಗೆಯ ಬೆಳೆಗಳನ್ನು ಬೆಳೆಸಬೇಕು.
ಉಳುಮೆ ಮಾಡಕೂಡದು.
ಮಣ್ಣಲ್ಲಿ ಹ್ಯೂಮಸ್ ಅಂಶ ಹೆಚ್ಚಿದಷ್ಟೂ, ಮಣ್ಣು ಜೀವಿಗಳ ರಕ್ಷಣೆ – ಪಾಲನೆ – ಪೋಷಣೆ ಮಾಡಿದಂತಾಗುತ್ತದೆ. ಮಣ್ಣು ಜೀವಿಗಳಿಗೆ ಭದ್ರತೆ ಒದಗಿಸಿದಂತಾಗುತ್ತದೆ. ಇಂತಹ ಮಣ್ಣಲ್ಲಿ ಬೆಳೆಯುವ ಆಹಾರ ಬೆಳೆಗಳಲ್ಲಿನ ಪೌಶ್ಟಿಕತೆ ಉತ್ಕೃಷ್ಟ ಗುಣಮಟ್ಟದ್ದಾಗಿರುತ್ತದೆ. ಇದು ಪ್ರಕೃತಿಗೂ – ಸುತ್ತಮುತ್ತಲಿನ ಪರಿಸರಕ್ಕೂ – ಆ ಪರಿಧಿಯಲ್ಲಿ ವಾಸಿಸುವ ಸಕಲ ಜೀವಜಂತುಗಳಿಗೂ ಸಹ ಉಪಯುಕ್ತ.