ರೇಣುಕಾಚಾರ್ಯ ಸಿಪಿ ಯೋಗೆಶ್ವರ್ ವಿರುದ್ದ ಪುನಃ ಗರಂ: ನೀನು ಮರಿಯಾನೆಯಲ್ಲ ಓರ್ವ ಪಕ್ಷಾಂತರಿ

ದಾವಣಗೆರೆ: ನೀನು ಮರಿಯಾನೆಯೂ ಅಲ್ಲಾ, ಏನೂ ಅಲ್ಲಾ. ನೀನೊಬ್ಬ ಪಕ್ಷಾಂತರಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸಚಿವ ಸಿ.ಪಿ.ಯೋಗೇಶ್ವರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಇಂದಿನ ರಾಜಕೀಯದ ಬಗ್ಗೆ ಮಾತನಾಡಲು ಅಸಹ್ಯ ಎನ್ನಿಸುತ್ತದೆ. ಯಡಿಯೂರಪ್ಪ ಕುಟುಂಬ ಎಂದಿಗೂ ರಾಜಕಾರಣ ಮಾಡಿಲ್ಲ. ಸಿಎಂ ಭ್ರಷ್ಟಾಚಾರ ಮಾಡಿದ್ದರೇ ಅದನ್ನು ಬಹಿರಂಗ ಪಡಿಸಲಿ, ಅರಿವೇ ಹಾವಿದೆ ಎಂದು ಹೇಳುವುದನ್ನು ಬಿಟ್ಟು ಬುಟ್ಟಿಯಿಂದ ತೆಗೆದು ಹೊರಗೆ ಬಿಡಲಿ, ಅದನ್ನು ಬಿಟ್ಟು ಅನವಶ್ಯಕ ಟೀಕೆ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಸಚಿವ ಸಿ.ಪಿ. ಯೋಗಿಶ್ವರ್ ಗೆ ಸಿಎಂ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಅವನೊಬ್ಬ ಪಕ್ಷಾಂತರಿ. ಅವರ ನಾಲಿಗೆಗೂ ಮೆದುಳಿಗೂ ಸಂಬಂಧ ಇಲ್ಲ. ಬುದ್ದಿ ಸ್ಥಿಮಿತ ಇಲ್ಲಾ ಎಂದು ಕಿಡಿಕಾರಿದ್ದಾರೆ.
ಯಡಿಯೂರಪ್ಪ ನವರ ಬಗ್ಗೆ ಮಾತನಾಡಿದರೆ ದೊಡ್ಡವರಾಗ್ತೀವಿ ಎಂದು ಕೆಲವರು ಅಂದು ಕೊಂಡಿದ್ದಾರೆ. ಅವರ ಬಗ್ಗೆ ಮಾತನಾಡಿದರೆ ನಾನು ಸಹಿಸೋಲ್ಲ. ಅವರ ಬಗ್ಗೆ ಮಾತನಾಡಿದರೆ ಬಿಜೆಪಿ ಬಗ್ಗೆ ಮಾತನಾಡಿದಂತೆ ಎಂದು ಹರಿಹಾಯ್ದರು.
ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೂ ಯಡಿಯೂರಪ್ಪ ಸಿಎಂ ಹಾಗೀ ಮುಂದುವರೆಯುವುದು ಅಷ್ಟೇ ಸತ್ಯ. ನಾಯಕತ್ವದ ವಿರುದ್ದ ಮಾತನಾಡುವವರ ವಿರುದ್ದ ವರಿಷ್ಟರು ತುರ್ತಾಗಿ ಕ್ರಮ ಕೈಗೊಳ್ಳ ಬೇಕು. ಈ ಬಗ್ಗೆ ನಾಳೆ ಬೆಂಗಳೂರಿನಲ್ಲಿ ಸಿಎಂ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡುತ್ತೇನೆ ಎಂದರು.