105 ಕೆಜಿ ಅಕ್ಕಿ ಹೊತ್ತು ಅಂಜನಾದ್ರಿ ಬೆಟ್ಟ ಏರಿದ 34ರ ಯುವಕ

105 ಕೆಜಿ ಅಕ್ಕಿ ಹೊತ್ತು ಅಂಜನಾದ್ರಿ ಬೆಟ್ಟ ಏರಿದ 34ರ ಯುವಕ

ಕೊಪ್ಪಳ: 34 ವರ್ಷದ ಹನುಮಂತಪ್ಪ ಪೂಜಾರ ಎಂಬ ಯುವಕ ಬರೋಬ್ಬರಿ 105 ಕೆ.ಜಿ. ತೂಕದ ಅಕ್ಕಿ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ್ದಾನೆ.

ಬೆಳಿಗ್ಗೆ 6 ಗಂಟೆಗೆ ಬೆಟ್ಟ ಏರುವುದನ್ನು ಆರಂಭಿಸಿ 50 ನಿಮಿಷಗಳಲ್ಲಿ 575 ಮೆಟ್ಟಿಲುಗಳನ್ನು ಹತ್ತಿ ಎಲ್ಲರ ಗಮನ ಸೆಳೆದ ಈತ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಗ್ರಾಮದವನು.

ಕುರಿಗಾಹಿಯಾಗಿರುವ ಹನುಮಂತಪ್ಪ ಪೂಜಾರ ಆಂಜನೇಯನ ದರ್ಶನ ಪಡೆಯಬೇಕು ಎಂದು ಹಲವು ವರ್ಷಗಳಿಂದ ಕಾಯುತ್ತಿದ್ದರು. ಮೊದಲ ಬಾರಿಗೆ ಬೆಟ್ಟ ಹತ್ತಿದ‌ ನೆನಪನ್ನು ಸ್ಮರಣೀಯವಾಗಿರಿಸಬೇಕು ಎನ್ನುವ ಕಾರಣಕ್ಕೆ ಅಕ್ಕಿ‌ಚೀಲ ಹೊತ್ತು ಹತ್ತಲು ನಿರ್ಧರಿಸಿದ್ದರು.

ಚೀಲ ಹೊತ್ತು ಬೆಟ್ಟ ಹತ್ತಬೇಕು ಎನ್ನುವ ಬಹಳ ದಿನಗಳ ಕನಸು ಈಗ ಈಡೇರಿದೆ. ನನ್ನ ಆಸೆಗೆ ಊರಿನ ಸ್ನೇಹಿತರು ನೆರವಾದರು. ಬಿಸಿಲು ಹೆಚ್ಚಾಗುವ ಮೊದಲೇ ಬೆಟ್ಟ ಹತ್ತಿ ಇಳಿಯಬೇಕು ಎಂದು ನಿರ್ಧರಿಸಿದ್ದೆ. ಅಂದುಕೊಂಡಂತೆ ಮಾಡಿದ್ದಕ್ಕೆ ಖುಷಿಯಾಗಿದೆ ಎಂದು ಹನುಮಂತಪ್ಪ ಪತ್ರಕರ್ತರ ಜೊತೆ ಅನಿಸಿಕೆ ಹಂಚಿಕೊಂಡರು.

ಕಳೆದ ವಾರ ಜಮಖಂಡಿ ತಾಲ್ಲೂಕಿನ ಹುನ್ನೂರು ಗ್ರಾಮದ ರಾಯಪ್ಪ ದಫೇದಾರ ಎಂಬುವರು 101 ಕೆ.ಜಿ. ತೂಕದ ಜೋಳದ ಚೀಲ ಹೊತ್ತು ಬೆಟ್ಟ ಹತ್ತಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!