ಪತ್ರಕರ್ತ ಪುರಂದರ್ ಲೋಕಿಕೆರೆ ಮಾತೃಶ್ರೀ ಮಾಗೀದ ಹಿರಿಯ ಜೀವ….ಶತಕ ದಾಟಿದ ಸಂಭ್ರಮ.. ಶತಾಯುಷಿ ತಿಮ್ಮಮ್ಮ..

ಪತ್ರಕರ್ತ ಪುರಂದರ್ ಲೋಕಿಕೆರೆ ಮಾತೃಶ್ರೀ ಮಾಗೀದ ಹಿರಿಯ ಜೀವ....ಶತಕ ದಾಟಿದ ಸಂಭ್ರಮ.... ಶತಾಯುಷಿ ತಿಮ್ಮಮ್ಮ....

ದಾವಣಗೆರೆ :ಲೋಕಿ ಕೆರೆ ಗ್ರಾಮದ ಇಲ್ಲಿನ ಸಣ್ಣಪ್ಳ ಮನೆತನದ ತಿಮ್ಮಮ್ಮ ನವರ ನೂರೈದನೇಯ( 105) ವರ್ಷಗಳು ಪೂರೈಸಿದ ಹಿರಿಯ ಮಾಗೀದ ಜೀವಕೇ  ಶತಾಯುಷ್ಯ ಸಂಭ್ರಮ ಗೌರವಾರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಹುಟ್ಟಿದ ದಿನ ಲೆಕ್ಕಿಸದೆ…..ಸದಾ ಮನೆ.ಹೊಲ ದನ ಕರುಗಳೆಂದು… ಮಾಗಿ ಹೊಲಕೇ ಬುತ್ತಿ ಹೊತ್ತು ತುತ್ತು ನೀಡಿದ,ದುಡಿವ ನೂರಾರು ಕಷ್ಟ ಜೀವಿಗಳಿಗೆ. ದುಡಿದ ಈ ಜೀವಕ್ಕೆ ಹುಟ್ಟಿದ ಹಬ್ಬದ ಕಲ್ಪನೆಯೇ ಇಲ್ಲ.

ಇಷ್ಟು ವರ್ಷ ಗಳ ಸಣ್ಣಪ್ಳ ಮನೆತನದ ಎರಡನೇ ಹಿರಿಯ ಬಸಪ್ಪ ನವರ ಪತ್ನಿ ಸೊಸೆಯಾಗಿ.. ಮಕ್ಕಳಿಗೆಲ್ಲ ಅವ್ವನಾಗಿ…. ಮೊಮ್ಮಕ್ಕಳಿಗೇ ತಿಮ್ಮಜ್ಜಿಯಾಗಿ….. ಸಣ್ಣಪ್ಳ ಸಹೋದರಿಗೆ ತಿಮ್ಮಸಣ್ಣವ್ವ…. ತಿಮ್ಮ ದೊಡವ್ವ….. ಸೊಸೆಯಂದಿರಿಗೇ ತಿಮ್ಮತ್ತೆ…. ಅತ್ತೆ ಯಾಗಿ… ಅಳಿಯಂದಿರ ತಿಮ್ಮಕ್ಕ…ಹಟ್ಟೀಯ ವಾರಿಗೇಯರಿಗೇ ತಿಮ್ಮಕ್ಕ ನಾಗಿ ತನ್ನ ಜವಾಬ್ದಾರಿ ನಿಭಾಯಿಸುತ್ತಲೇ….ಕೊಟ್ಟು ಮನೆ ಹಿರಿಯರು ಬಾಳಿ ಬದುಕಿದ ಮನೆಯೋ ನನ್ನ ಅರಮನೆ….ಇಲ್ಲೆ ಕೊನೆಯೂಸಿರೆಳೆಯಲಲಿ…ಎಂಬ ಹಪಾಹಪಿಸುತ್ತಲೇ ಸರಿ ಸುಮಾರು 105 ವರ್ಷ ಗಳ ಸವೇಸಿದ….

ಶತಾಯುಷಿ ತಿಮ್ಮಮ್ಮ

ಈ ವಯಸ್ಸಿನಲ್ಲಿಯೂ ಶಿಸ್ತು ಬದ್ಧ ಎರಡೋತ್ತಿನ ಊಟ …ಯಾವುದೇ ಕಿರಿಕಿರಿ ಇಲ್ಲದ ಆರೋಗ್ಯ…. ಕೊಂಚ ಹಣವಿದ್ದರೂ ಬಚ್ಚಿಟ್ಟ ಅಷ್ಟೀಷ್ಟು ಕೈ ಕಾಸು ಮೊಮ್ಮಕ್ಕಳಿಗೇ ಹಂಚಿ….ಬಚ್ಚುಬಾಯಲೀ ಸಂತಸದ ನಗೆ ಬೀರುವ ತಿಮ್ಮವ್ವ…ಶತಾಯುಷಿ…ಆದರೂ ವಯಸ್ಸು ಆಕೆಗೇ….ಭಾದಿಸಿಲ್ಲ ಈಗೀನ ನಾವು ಈಗೀನ ಆಹಾರ ಪದ್ಧತಿ,ಜೀವನ ಶೈಲಿ ಅರವತ್ತು ಎಪ್ಪತ್ತು ವರ್ಷಗಳ ಬಾಳಿ,ಬದುಕಿದರೇ ಹೆಚ್ಚು. ಈ ಹಿನ್ನೆಲೆಯಲ್ಲಿ ಅವರ ಮಕ್ಕಳು, ಮೊಮ್ಮಕ್ಕಳ ಒತ್ತಾಸೇ …. ಆಕೆಗೊಂದು ನೂರಾರ ಸಂಭ್ರಮ ದಿನ ಆಚರಿಸಿ ಆಕೆಗೊಂದು ಗೌರವ ಸಲ್ಲಿಸುವ ಸಲುವಾಗಿ…..

ಯುಗಾದಿ ಈ ಬಾರಿ ಚಂದ್ರನ ದರ್ಶನ ಪಡೆದು… ಹೊಸ ವರ್ಷದ ಆರಂಭ ಹೊನ್ನಾರು ಸಿಂಗಾರಗೊಂಡ   ತಮ್ಮ ಬದುಕಲೀ…..

ಶತಾಯುಷಿ ತಿಮ್ಮಮ್ಮ

ನೂರಾಚೇಯ ಯುಗಾದಿ ಹಬ್ಬದ ಚಂದ್ರನ  ನಂತರದ ಊರು ಲೋಕಿ ಕೆರೆ ಹನುಮಪ್ಪನ ತೇರಿಗೆ ರಾಗಿ ದ್ವಾಸಿ ಒಯ್ದು ದ್ವಾಸಿಗೇ ಮೇಲೆ ಕಾಯ್ಹಾಲು ಬಿಟ್ಟು… ಬಂದು ಬಳಗ ಸಂತೈಸಿದ ಈ ಜೀವಕ್ಕೇ ತೆರೀನ ದಿನವೇ ಗೋದಾಳಿ ಸಂಜೆ..ದಿನ..ಅಕೆ ನೂರೆಂಟು ವಸಂತಗಳ ಕಂಡ ಆ ಮೂಲಕ ನಮ್ಮದಲ್ಲದೇ ಕೇಕ್ ಕತ್ತರಿಸುವ ಪದ್ದತಿ ಸಾಂಕೇತಿಕವಾಗಿ ಮನೆತನ ಮಕ್ಕಳು, ಮೊಮ್ಮಕ್ಕಳು,…ಗಿರಿ ಮೊಮ್ಮಕ್ಕಳು. ಕಿರಿ ಮೊಮ್ಮಕ್ಕಳು, ಸೊಸೆ ಯಂದಿರು.. ಸೇರಿದಂತೆ ಬಂದು ಬಳಗ ಆತ್ಮೀಯ ರೆಲ್ಲಾ ಸೇರಿ.ತೇರಿನ ನೆಪದಲ್ಲಿ ಆದರೂ ಇರುವಾಗಲೇ   ಆಕೆಗೇ ಸಂತಸ ತೃಪ್ತಿ ಪಡಿಸುವ ಸಣ್ಣ ಸಂಭ್ರಮ ಗೌರವಾರ್ಪಣೆ ಕಾರ್ಯ ಕ್ರಮ ದಿಲ್ಲಿ ಗ್ರಾಮದ   ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ನಾ ಪಿಟಿ ಹನುಮಂತಪ್ಪ, ತಾಳೇದರ ಭೂಮೇಶಪ್ಪ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮುಖಂಡ ರವಿಕುಮಾರ್, ರಾಜಪ್ಪ ಅಶೋಕ್ ಯೋಗೇಶ್ ವಿರೇಶ್, ಭೀಮಪ್ಪ, ನಲ್ಕುಂದ ಬಸಪ್ಪ,ಬಲ್ಲೂರ ಚಿಕ್ಕಪ್ಪ,ಕನಗನಹಳ್ಳಿ ಆನಂದ್, ಪರಸಪ್ಪ, ಹನುಮಂತಪ್ಪ, ಶಿಕ್ಷಕ ಮಾಂಬಾಡಿ ಚಿಕ್ಕಪ್ಪ, ಸೇರಿದಂತೆ ಹಲವಾರು ಗಣ್ಯರು, ಬಂಧುಗಳು ಶತಾಯುಷಿ ತಿಮ್ಮಮ್ಮ ನವರಿಗೆ ಗೌರವಿಸುವ ಮೂಲಕ ಸತ್ಕರಿಸಿದರು.

ಕೊನೆಯಲ್ಲಿ ಪುರಂದರ್ ಲೋಕಿ ಕೆರೆ ಸಣ್ಣಪ್ಳ ಮನೆತನದ ಪರವಾಗಿ ಹರಸಿ,ಹಾರೈಸಿದ ಗ್ರಾಮಸ್ಥರು, ಹಿತೈಷಿಗಳಿಗೇ ಕೃತಜ್ಞತೆ ಅರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!