ಸಹಕಾರ ಸಂಘಗಳಿಗೆ ನೆರವು ಸ್ವಾಗತಾರ್ಹ; ಜಿ.ನಂಜನಗೌಡ

ದಾವಣಗೆರೆ,ಜು.೯; ಕೇಂದ್ರದ ಕೃಷಿ ಮಂತ್ರಾಲಯದ ಅಡಿಯಲ್ಲಿ ಇದ್ದ ಸಹಕಾರ ಇಲಾಖೆಯನ್ನು ಪ್ರತ್ಯೇಕಿಸಿ ಅದಕ್ಕಾಗಿಯೇ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಹಕಾರ ಮಂತ್ರಾಲಯ ನಿರ್ಮಿಸಿದ್ದು, ಅದಷ್ಟು ಬೇಗ ರಾಷ್ಟ್ರ, ರಾಜ್ಯದಲ್ಲಿನ ಸಹಕಾರ ಇಲಾಖೆಯ ಸಮಸ್ಯೆಗಳು ಬಗೆಹರಿದು ಉತ್ಕಷ್ಠ ಮಟ್ಟದಲ್ಲಿ ಸಹಕಾರ ಸಂಘಗಳು ಬೆಳಯಲಿವೆ ಎಂದು ಕರ್ನಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರೂ, ರಾಜ್ಯ ಬಿಜೆಪಿ ಪ್ರಕೋಷ್ಠದ ಸಹ ಸಂಚಾಲಕ ಜಿ.ನಂಜನಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ಆರಂಭಗೊಂಡಿರುವ ನೂತನ ಸಚಿವಾಲಯಕ್ಕೆ ಅಮಿತ್‌ಷಾರವರೇ ಮೊದಲ ಸಚಿವರಾಗಿದ್ದು, ದಕ್ಷತೆಯಿಂದ ಕಾರ್ಯನಿರ್ವಹಿಸಲಿದ್ದಾರೆ. ಸಹಕಾರ ರಂಗದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎನ್ನುವ ಭರವಸೆ ಇದೆ. ಎಲ್ಲಾ ರಂಗಗಳಲ್ಲೂ ಸಹಕಾರ ಕ್ಷೇತ್ರ ಇರುವ ಕಾರಣ ಈಗಾಗಲೇ ಸಾಕಷ್ಟು ಸಹಕಾರ ರಂಗ ಬೆಳೆದಿದೆ. ಇನ್ನೂ ಬೆಳೆಯಬೇಕಿದೆ ಎಂದರು.
ಪ್ರತ್ಯೇಕ ಸಹಕಾರ ಮಂತ್ರಾಲಯ ಅಗಿರುವ ಕಾರಣ ಸಹಕಾರ ಇಲಾಖೆಯಲ್ಲಿ ಹಲವಾರು ಮಹತ್ತರ ಬದಲಾವಣೆಗಳು ಆಗಲಿವೆ. ಸಹಕಾರ ಸಂಘಗಳಲ್ಲಿ ಯಾವುದೋ ಕಾರಣಕ್ಕೆ ಸೂಪರ್‌ಸೀಡ್ ಸೇರಿದಂತೆ ಇನ್ನಿತರೆ ಕಾರಣಗಳಿಗೆ ರಾಜಕೀಯ ಹಸ್ತಕ್ಷೇಪ ನಡೆಯುತ್ತಿತ್ತು. ಇದರಿಂದಾಗಿ ಅಂತಹ ಹಸ್ತಕ್ಷೇಪ ಕಡಿಮೆ ಆಗಲಿದೆ. ಇದಲ್ಲದೇ ರೈತರದ್ದೇ ಅದಂತಹ ಸಹಕಾರ ಸಂಘಗಳನ್ನು ರಚಿಸಿ, ಅವರನ್ನೇ ನಿರ್ದೇಶಕರನ್ನಾಗಿ ಮಾಡಿ, ವ್ಯವಸ್ಯಾಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ತರಲು ಅವಕಾಶಗಳಿವೆ ಎಂದರು.
ದೇಶದ ಸಹಕಾರಿ ಚಳುವಳಿಗೆ 117ವರ್ಷಗಳ ಇತಿಹಾಸ ಇದೆ. ಸ್ವಾತಂತ್ರö್ಯಪೂರ್ವ, ಸ್ವಾತಂತ್ರö್ಯದ ನಂತರ ಹೊಸ ಆರ್ಥಿಕ ನೀತಿ ಜಾರಿ, ತಿದ್ದುಪಡಿಗಳನ್ನು ಒಳಗೊಂಡAತೆ ಸಹಕಾರಿ ಕ್ಷೇತ್ರ ಅನೇಕ ಏಳುಬೀಳು ಅನುಭವಿಸಿ ಸಾಧನೆ ಮಾಡಿದೆ. ಹಲವಾರು ಸಹಕಾರ ಸಂಘಗಳು ರಾಷ್ಟçಮಟ್ಟಕ್ಕೆ ಬೆಳೆದಿವೆ. ರಾಜ್ಯ ಮತ್ತು ಅಂತರರಾಜ್ಯ ವ್ಯಾಪ್ತಿಗಳನ್ನು ಅನೇಕ ಪಟ್ಟಣ ಸಹಕಾರ ಬ್ಯಾಂಕುಗಳು, ಕ್ರೆಡಿಟ್ ಸಹಕಾರ ಸಂಘಗಳು ಇವೆ ಎಂದು ಹೇಳಿದರು.ದೇಶದಲ್ಲಿ 8.5 ಲಕ್ಷ ವಿವಿಧ ರೀತಿಯ ಸಹಕಾರ ಸಂಸ್ಥೆಗಳು ಇದ್ದು, 30 ಕೋಟಿಗಿಂತಲೂ ಅಧಿಕ ಸದಸ್ಯರು ಇದ್ದಾರೆ. ಅವುಗಳಲ್ಲಿ 1255 ಬಹು ರಾಜ್ಯ ಸಹಕಾರಿ ಸಂಸ್ಥೆಗಳು, 1560 ಪಟ್ಟಣ ಸಹಕಾರ ಬ್ಯಾಂಕುಗಳು, 91000 ಕೃಷಿ ಪತ್ತಿನ ಸಹಕಾರ ಸಂಘಗಳು ಇವೆ. ಒಟ್ಟು 4ಲಕ್ಷ ಮಿಲಿಯನ್‌ನಷ್ಟು ಷೇರು ಬಂಡವಾಳ ಹೊಂದಿದೆ. ದೇಶದ ಶೇ.95ರಷ್ಟು ಗ್ರಾಮಗಳಲ್ಲಿ ಸಹಕಾರ ಕ್ಷೇತ್ರ ವ್ಯಾಪಿಸಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್.ಎಂ.ನಾಗರಾಜ್, ಮಲ್ಲಪ್ಪ, ನಾಗರಾಜ್‌ಮೂರ್ತಿ, ಓಂಕಾರಗೌಡ, ನಟರಾಜ ಇದ್ದರು.