ವಿಸ್ಟಾಡೋಮ ಬೋಗಿಗಳ ರೈಲಿಗೆ ಸಂಸದರಿಂದ ಹಸಿರು ನಿಶಾನೆ

ಮಂಗಳೂರು; ಯಶವಂತಪುರ- ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ವಿಸ್ಟಾಡೋಮ್ ಬೋಗಿಗಳ ರೈಲಿಗೆ ಹಸಿರು ನಿಶಾನೆ ತೋರುವ ಕಾರ್ಯಕ್ರಮವನ್ನು 11ರ ಭಾನುವಾರ ಬೆಳಗ್ಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು ಹಾಗೂ ಬೆಂಗಳೂರು ರೈಲಿಗೆ ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಮೇಯರ್ ಪ್ರೇಮಾನಂದ ಶೆಟ್ಟಿ, ಡಿಆರ್ ಎಂ ಕೊಠಾರಿ, ಕಾರ್ಪೋರೆಟ್ ಗಳಾದ ಸುಧೀರ್, ಶೋಭಾ, ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ಪ್ರಾರಂಭವಾದ
ವಿಸ್ಟಾಡೋಮ್ ಕೋಚ್ ಬೋಗಿ ರೈಲು: ಏನಿದು ವಿಸ್ಟಾಡೋಮ್ ಬೋಗಿ?
ವಿಸ್ಟಾಡೋಮ್ ಎಂದರೆ ಪಾರದರ್ಶಕ ಬೋಗಿಗಳು. ಸಾಮಾನ್ಯವಾಗಿ ರೈಲು
ಬೋಗಿಗಳಿಗೆ ಕಿಟಕಿ ಬಿಟ್ಟರೆ ಬಾಗಿಲುಗಳಲ್ಲಿ ಮಾತ್ರ ಹೊರಭಾಗ ವೀಕ್ಷಿಸಬಹುದು. ಆದರೆ
ವಿಸ್ಟ್ರಾಡಾಮ್ ಬೋಗಿಯ ಒಳಗೆ ಕೂತಲ್ಲೇ ಹೊರಗಿನ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ ಬೋಗಿಯ ಮೇಲ್ಬಾಗ ಹಾಗೂ ಕಿಟಕಿಯ ಭಾಗಗಳು ಬೃಹತ್ ಗಾತ್ರದ
ಗಾಜುಗಳನ್ನು ಹೊಂದಿರುತ್ತದೆ.