ಸ್ವಯಂ ಪ್ರೇರಿತವಾಗಿ ಬಂದು ಬಿಜೆಪಿಗೆ ಬೆಂಬಲ: ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು: ಶ್ಯಾಮನೂರು ಹರೀಶ್

ಸ್ವಯಂ ಪ್ರೇರಿತವಾಗಿ ಬಂದು ಬಿಜೆಪಿಗೆ ಬೆಂಬಲ: ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು: ಶ್ಯಾಮನೂರು ಹರೀಶ್

ದಾವಣಗೆರೆ : 2023ರ ವಿಧಾನಸಭಾ ಚುನಾವಣೆ ದಾವಣಗೆರೆ ಬಿಜೆಪಿಯಲ್ಲಿ ಇತಿಹಾಸ ಸೃಷ್ಟಿಸುತ್ತಿದೆ ಎಂದು ಬಿಜೆಪಿ ಯುವ ಮೋರ್ಚ ಉತ್ತರ ವಲಯ ಉಪಾಧ್ಯಕ್ಷ ಶ್ಯಾಮನೂರು ಹರೀಶ್ ತಿಳಿಸಿದ್ದಾರೆ. ಉತ್ತರ ವಲಯದ ಪ್ರತಿ ವಾರ್ಡಗಳಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಸ್ವಯಂ ಪ್ರೇರಿತವಾಗಿ ಬಂದು ಪ್ರಚಾರ ನಡೆಸುತ್ತಿದ್ದಾರೆ. ಉತ್ತರ ಕ್ಷೇತ್ರದ ಅಭ್ಯರ್ಥಿಯಾದ ನಾಗರಾಜ್ ಲೋಕಿಕೆರೆ ಅವರ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ. ಕಾರ್ಯಕರ್ತರೇ ಸ್ಟಾರ್ ಪ್ರಚಾರಕರಾಗಿದ್ದು ಪ್ರತಿಯೊಂದು ಮನೆಗೂ ಭೇಟಿ ನೀಡಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ ಚುನಾವಣೆಗೆ ಕಡಿಮೆ ದಿನಗಳು ಇರುವ ಕಾರಣ ಕಾರ್ಯಕರ್ತರು ಬಿಸಿಲನ್ನೂ ಲೆಕ್ಕಿಸದೇ ಪ್ರಚಾರ ಮಾಡುತ್ತಿದ್ದಾರೆ. ಕಾರ್ಯಕರ್ತರ ಉತ್ಸಾಹ ನೋಡಿದರೆ ಬಿಜೆಪಿ ಅಭ್ಯರ್ಥಿಗಳು 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶ್ಯಾಮನೂರು ಹರೀಶ್ ತಿಳಿಸಿದರು. ಮತ್ತೊಂದೆಡೆ ಜಿಲ್ಲೆಯ ಜೋಡೆತ್ತುಗಳಾದ ಸಂಸದರಾದ ಜಿ.ಎಂ ಸಿದ್ದೇಶ್ವರ ಹಾಗೂ ಶಾಸಕರಾದ ರವೀಂದ್ರನಾಥ್ ಅವರು ಸಹ ತಮ್ಮ ಅನುಭವದಂತೆ ಪ್ರಚಾರ ನಡೆಸುತ್ತಿರುವುದು ಅಭ್ಯರ್ಥಿಗಳಿಗೆ ಆನೆ ಬಲ ಬಂದಂತಾಗಿದೆ. ಉಳಿದಂತೆ ಬಿಜೆಪಿ ಜಿಲ್ಲಾ ಮುಖಂಡರುಗಳು ಸಹ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಪ್ರಾಮಾಣಿಕ ಕಾರ್ಯಕರ್ತರು ಹಾಗೂ ಮುಖಂಡರು ಇರುವವರೆಗೂ ಬಿಜೆಪಿ ಪಕ್ಷವನ್ನ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶ್ಯಾಮನೂರು ಹರೀಶ್ ತಿಳಿಸಿದರುತಿಳಿಸಿದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!