ಸಂಸದ ಜಿಎಂ ಸಿದ್ದೇಶ್ವರ ಪೆಟ್ರೋಲ್ ಬದಲು ಸೈಕಲ್ ಬಳಸಿ ಹೇಳಿಕೆಗೆ ಕಿಸಾನ್ ಕಾಂಗ್ರೆಸ್ ಸಲಹೆ

IMG-20210711-WA0016

 

ದಾವಣಗೆರೆ: ಇತ್ತೀಚೆಗೆ ಸೈಕಲ್ ಉಪಯೋಗಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿಕೆ ನೀಡಿ ಪರೋಕ್ಷವಾಗಿ ತೈಲ ಬೆಲೆಯೇರಿಕೆಯನ್ನು ಸಮರ್ಥಿಸಿಕೊಂಡಿರುವ ಸಂಸರು, ಮೊದಲು ತಾವೆ ಸೈಕಲ್ ಉಪಯೋಗಿಸಿ ಸಾರ್ವಜನಿಕರಿಗೆ ಮಾದರಿಯಾಗಲಿ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಂಚಾಲಕ ಸುರೇಶ್.ಎಂ.ಜಾಧವ್ ಸಲಹೆ ನೀಡಿದ್ದಾರೆ.

ಜನರ ಕಷ್ಟಗಳಿಗೆ ಸ್ಪಂದಿಸದೇ ಉಡಾಫೆಯಾಗಿ ಮಾತನಾಡುವುದು ಸಂಸದರಿಗೆ ಹೊಸದೇನಲ್ಲ, ಆದರೂ ಮುಂದಿನ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಸೈಕಲ್ ನಲ್ಲಿ ಸಂಚರಿಸುವುದರ ಮೂಲಕ ಎಲ್ಲಾ ವರ್ಗದ ಜನರಿಗೆ ಮಾದರಿಯಾಗಿ, ಆಗ ಸಾಮಾನ್ಯ ಜನರ ಕಷ್ಟ ಏನೆಂಬುದು ಅರ್ಥವಾಗುತ್ತದೆ ಕೇವಲ ಐಷಾರಾಮಿ ಎ ಸಿ ಕಾರಲ್ಲಿ ಕೂತು ಜನರಿಗೆ ಸೈಕಲ್ ನಲ್ಲಿ ಸಂಚರಿಸಿ ಎಂದು ಹೇಳುವುದು ಸುಲಭವಲ್ಲ‌ ಮೊದಲು ನೀವು ಹಾಗೂ ನಿಮ್ಮ ಪಕ್ಷದ ಚುನಾಯಿತ ಜನಪ್ರತಿನಿಧಿಗಳೆಲ್ಲರು ಸೈಕಲ್ ನಲ್ಲಿಯೇ ದಿನನಿತ್ಯದ ಕಾರ್ಯಕ್ರಮಗಳಿಗೆ ಹಾಜರಾಗಿ ಎಂದಿದ್ದಾರೆ.

ಸಂಸದರು ಮೊದಲು ಉಡಾಫೆಯಾಗಿ ಮಾತನಾಡುವುದನ್ನು ನಿಲ್ಲಿಸಿ, ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಇವೆ ಅದರ ಬಗ್ಗೆ ಗಮನ ಹರಿಸಲಿ, ಇದೆ ರೀತಿ ಅವರ ಉದ್ಧಟತನ ಮುಂದುವರೆದರೆ ಮುಂದಿನ ದಿನಗಳಲ್ಲಿ ಇದಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಸಿದ್ದಾರೆ.

ಸಾರ್ವಜನಿಕರ ತೆರಿಗೆ ಹಣದಲ್ಲಿ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆದು ಸಾರ್ವಜನಿಕರು ಕಷ್ಟ ಹೇಳಿಕೊಳ್ಳಲು ಬಂದರೆ ಅವರನ್ನು ಕೀಳಾಗಿ ಕಾಣದೆ, ಅವರ ಕಷ್ಟಗಳಿಗೆ ಸ್ಪಂದಿಸುವುದನ್ನು ಮೊದಲು ರೂಢಿಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!