ಹೊನ್ನಾಳಿ ಮುಸ್ಲಿಂ ಮುಖಂಡ ರಿಂದ ಶಹಬ್ಬಾಸ್ ಗಿರಿ ಪಡೆದ ಶಾಸಕ ರೇಣುಕಾಚಾರ್ಯ

ದಾವಣಗೆರೆ: ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷ, ಆ ಪಕ್ಷದ ಪ್ರತಿನಿಧಿ ಚುನಾಯಿತಗೊಂಡರೆ ಅಲ್ಲೋಲ ಕಲ್ಲೋಲ ಎಂಬ ತಪ್ಪು ಕಲ್ಪನೆ ನಮ್ಮಲ್ಲಿತ್ತು. ಆದರೆ, ಶಾಸಕ ಎಂ.ಪಿ. ರೇಣುಕಾಚಾರ್ಯ ಅದನ್ನು ಹುಸಿಗೊಳಿಸಿದ್ದಾರೆ ಮುಸ್ಲಿಂ ಮುಖಂಡರು ಪ್ರಶಂಸಿಸಿದ್ದಾರೆ.
ಬಿಜೆಪಿ ಮುಸ್ಲಿಂರನ್ನು ವಿರೋಧಿಸುತ್ತದೆ ಎಂಬ ತಪ್ಪು ಕಲ್ಪನೆ ನಮಗಿತ್ತು. ಆದರೆ, ಬಿಜೆಪಿಯ ಶಾಸಕರಾಗಿರುವ ರೇಣುಕಾಚಾರ್ಯ ಅವರು ಅದನ್ನು ಹೋಗಲಾಡಿಸಿ, ಜಾತಿ, ಮತ, ಧರ್ಮವನ್ನು ಮೀರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮದ ಜಾಮೀಯ ಮಸೀದಿ ಕಾರ್ಯದರ್ಶಿ ಸನಾವುಲ್ಲಾರಿಂದ ಶ್ಲಾಘಿಸಿದ್ದಾರೆ.
ಕರೋನಾ ಸಂದರ್ಭದಲ್ಲಿ ಪ್ರಾಣದ ಹಂಗುತೊರೆದು ಸೋಂಕಿತರೊಂದಿಗೆ ಬೆರೆತು ಜಾತ್ಯಾತೀತವಾಗಿ ಕೆಲಸ ಮಾಡುವ ಮೂಲಕ ಎಲ್ಲರಲ್ಲೂ ಹೊಸ ಚೈತನ್ಯವನ್ನು ರೇಣುಕಾಚಾರ್ಯ ಅವರು ಮೂಡಿಸಿದ್ದಾರೆ ಎಂದು ಕೊಂಡಾಡಿದ್ದಾರೆ.
ಬಿಜೆಪಿ ಎಂದರೆ ಎಲ್ಲರನ್ನೂ ಪ್ರೀತಿಸುವ ಪಕ್ಷವೇ ಹೊರತು, ಯಾರನ್ನೂ ವಿರೋಧಿಸುವ ಪಕ್ಷವಲ್ಲ ಎಂದು ಪ್ರಶಂಸಿಸಿದ್ದಾರೆ.