ಬಾಗಲಕೋಟೆ ಮುಧೋಳ: ವಿಶ್ವಾದ್ಯಂತ ಸಕ್ಕರೆ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಮ್ಮ ದೇಶ ಸಕ್ಕರೆ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದ್ದು, ಮುಧೋಳ ತಾಲೂಕು ಉತ್ತುರ ಗ್ರಾಮದಲ್ಲಿರುವ ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮಾಲೀಕತ್ವದ ಇಂಡಿಯನ್ ಕೇನ್ ಪವರ್ ಲಿ. 19.90 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 2.21 ಲಕ್ಷ ಟನ್ ಸಕ್ಕರೆ ಉತ್ಪಾದಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ.
ಶಾಸಕರು ಹಾಗೂ ಹಿರಿಯರಾದ ಡಾ. ಶಾಮನೂರು ಶಿವಶಂಕರಪ್ಪನವರು ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಲಾಗಿದ್ದು, ಆಡು ಮುಟ್ಟದ ಸೊಪ್ಪಿಲ್ಲ ಶಾಮನೂರು ಶಿವಶಂಕರಪ್ಪನವರು ಮಾಡದ ಉದ್ಯಮ ಇಲ್ಲ ಎಂದರೆ ತಪ್ಪಾಗಲಾರದು.
ದೇಶ ವಿದೇಶಗಳನ್ನು ಸುತ್ತಿ ಸದಾ ಹೊಸ ಆವಿಷ್ಕಾರ, ವಿಶಿಷ್ಟ ರೀತಿಯ ಯೋಜನೆಗಳನ್ನು ರೂಪಿಸುವ ಎಸ್.ಎಸ್. ಮಲ್ಲಿಕಾರ್ಜುನ್ ರವರ ಈ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ರಾಜ್ಯ ಸರ್ಕಾರವು ಯಶಸ್ವಿ ಉದ್ದಿಮೆದಾರರುಗಳಿಗೆ ಗೌರವಿಸಿ ಪ್ರಶಸ್ತಿ ನೀಡುವ ಮೂಲಕ ಉತ್ತೇಜಿಸಬೇಕು ಎಂದು ಕೇಳಿಕೊಳ್ಳಲಾಯಿತು ಅಂತಾರೆ ಸಾಮಾಜಿಕ ಜಾಲತಾಣದ ಹರೀಶ್
ಶಿಕ್ಷಣ,ವಾಣಿಜ್ಯೋದ್ಯಮ, ಸಮಾಜಸೇವೆ ಮುಖಾಂತರ ಎಸ್.ಎಸ್. ಕುಟುಂಬ ದಾವಣಗೆರೆ ಅಲ್ಲದೆ ರಾಜ್ಯದ್ಯಂತ ಸೇವೆ ಸಲ್ಲಿಸುತ್ತಾ ಬಂದಿದ್ದು ಈ ಯಶಸ್ವಿ ನಾಯಕರುಗಳು ನಮ್ಮ ನಗರದವರೇ ಎಂಬುದೇ ನಮಗೆ ಹೆಮ್ಮೆ.