ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜನ್ಮದಿನ ಆಚರಿಸಿದ ಡಾ. ರಾಜ್ ಸಂಘದ ಪದಾಧಿಕಾರಿಗಳು

ದಾವಣಗೆರೆ: ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ 59ನೇ ಜನ್ಮದಿನವನ್ನು ನಗರದಲ್ಲೂ ಅಭಿಮಾನಿಗಳಿಂದ ಸಂಭ್ರಮಿಸಲಾಯಿತು.
ನಿಟುವಳ್ಳಿಯಲ್ಲಿ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಶಿವರಾಜ್ ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಾಚರಣೆ ಜೊತೆಗೆ ಕೇಕ್ ಕತ್ತರಿಸಿ ಸಿಹಿ ಹಂಚಿ ಸರಳವಾಗಿಯೇ ಸಂಭ್ರಮದಿಂದ ಆಚರಿಸಿ ಶುಭಾಶಯದೊಂದಿಗೆ ಅಭಿಮಾನ ಮೆರೆದರು.
ಮಹಿಳೆಯರು ಹಾಗೂ ಮಕ್ಕಳೂ ಸಹ ಶಿವಣ್ಣನ ಜನ್ಮದಿನವನ್ನಾಚರಿಸಿ ಅಭಿಮಾನ ಅಭಿವ್ಯಕ್ತಪಡಿಸಿದರು.
ನಿಟುವಳ್ಳಿಯ ಏರಿಯಾದ ತುಂಬಾ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶಿವಣ್ಣನಿಗೆ ಆರೋಗ್ಯ ಮತ್ತು ಆಯಸ್ಸು ಹೆಚ್ಚಾಗಲೆಂದು ಪ್ರಾರ್ಥಿಸಿ ನಿಟ್ಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಸರಳವಾಗಿ ಕೋವಿಡ್ ಮಾರ್ಗಸೂಚಿ ಪಾಲನೆ ಮುಖೇನ ಆಚರಿಸುವಂತೆ ನಟ ಶಿವರಾಜ್ ಕುಮಾರ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುವುದು ಬೇಡ ಎಂದು ಹೇಳಿದ್ದು, ತಮ್ಮ ಕುಟುಂಬ, ಆಪ್ತರೊಂದೊಗೆ ಸಿಂಪಲ್ ಆಗಿ ಶಿವಣ್ಣ ಇಂದು ಹುಟ್ಟುಹಬ್ಬ ಆಚರಿಸಿಕೊಂಡರು.