ಜು.15ಕ್ಕೆ ಸೂರಗೊಂಡನಕೊಪ್ಪದಲ್ಲಿ ಲಂಬಾಣಿ ಸಮಾಜ ಬಾಂಧವರ ಸಂವಾದ

ದಾವಣಗೆರೆ.ಜು.೧೨; ನ್ಯಾಮತಿ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ
ಸೂರಗೊಂಡನಕೊಪ್ಪದಲ್ಲಿ ಜು.೧೫ ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ನೀಡಲಿದ್ದಾರೆ ಎಂದು ಮಾಜಿ ಸಚಿವ ಬಾಬುರಾವ್ ಚವಾಣ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಜು.೧೫ ರಂದು ೧೦.೩೦ ಕ್ಕೆ ಲಂಬಾಣಿ ಸಮಾಜದ ಧರ್ಮಗುರುಗಳು ಹಾಗೂ ಮುಖಂಡರ ಜೊತೆ ಸಂವಾದ ನಡೆಸಲಿದ್ದಾರೆ.
ಧರ್ಮಗುರುಗಳ ಭೇಟಿ ನಂತರ ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿ ಕೆಪಿಸಿಸಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರು ಸಾಂತ್ವನ ಹೇಳಲಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಬೇಕು. ಇದು ರಾಜಕೀಯೇತರ ಕಾರ್ಯಕ್ರಮ ಎಂದು ಮನವಿ ಮಾಡಿದರು.
ಲಂಬಾಣಿ ತಾಂಡಾಗಳು ಇನ್ನು ಕಂದಾಯ ಗ್ರಾಮಗಳನ್ನಾಗಿ ಸಂಪೂರ್ಣ ಪ್ರಮಾಣದಲ್ಲಿ ಮಾಡಿಲ್ಲ. ಇದರಿಂದಾಗಿ ಲಂಬಾಣಿ ಜನರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಜನರು ಗುಳೆ ಹೋಗುತ್ತಿದ್ದಾರೆ. ಈ ಬಗ್ಗೆ ನಾವು ಹೋರಾಟ ಮಾಡಿದ್ದೇವೆ. ಸರ್ಕಾರ ಆದಷ್ಟು ಬೇಗ ಎಲ್ಲಾ ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸಬೇಕು ಎಂದು ಬಾಬುರಾವ್ ಚೌವ್ಹಾಣ್ ಆಗ್ರಹಿಸಿದ್ದಾರೆ.
ಸದಾಶಿವ ಆಯೋಗ ವರದಿ ಜಾರಿಗೆ ನಮ್ಮ ವಿರೋಧ ಇದೆ. ನಮ್ಮ ಸಮಾಜದವರಿಗೆ ಮೀಸಲಾತಿ ಸಿಗುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಸದಾಶಿವ ಆಯೋಗ ವರದಿಯಿಂದ ಸಮಸ್ಯೆಯಾಗುತ್ತದೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ವಿರೋಧ ಇದೆ ಎಂದು ಹೇಳಿದರು.ಗೋಷ್ಠಿ
ಯಲ್ಲಿ ಮಾಜಿ ಸಚಿವ ಮನೋಹರ ಐನಾಪುರ,ನಂಜಾನಾಯ್ಕ್ ಎಸ್,ಕಾಶಿನಾಥ್ ನಾಯ್ಕ್,ದೀಪಕ್ ಬಿ.ವಿ,ವೆಂಕಟನಾಯ್ಕ್,ಕುಬೇರ ನಾಯ್ಕ್,ನಾಗರಾಜ್ ನಾಯ್ಕ್ ಇದ್ದರು.