ಸಿದ್ದರಾಮಯ್ಯಗೆ ಬ್ರೇಕ್ ಹಾಕಿ ಬಸವರಾಜ ನಾಯ್ಕ ಅವರನ್ನು ವಿಧಾನಸಭೆಗೆ ಕಳುಹಿಸಿ – ಜೆಪಿ ನಡ್ಡಾ

ದಾವಣಗೆರೆ: ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಸಿದ್ಧರಾಮಯ್ಯ ಅವರಿಗಿಲ್ಲ. ಅರ್ಕಾವತಿ ಹಗರಣ, ಬಿಪಿಎಂಪಿ ಯಲ್ಲಿ ಯಂತ್ರಗಳ ಖರೀದಿ ಹಗರಣ, ಶಿಕ್ಷಕರು ಹಾಗೂ ಪೊಲೀಸ್ ನೇಮಕಾತಿ ಹಗರಣಗಳು ನಡೆದಿದ್ದೇ ಸಿದ್ಧರಾಮಯ್ಯ ಅವರ ಸರ್ಕಾರವಿದ್ದಾಗ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹರಿಹಾಯ್ದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಎಂ.ಬಸವರಾಜ ನಾಯ್ಕ ಅವರ ಪರ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
ಈ ಚುನಾವಣೆಯಲ್ಲಿ ಬಸವರಾಜ ನಾಯ್ಕ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದ ಅವರು, ಈ ನಿಮ್ಮ ಕೇಕೆ, ಶಿಳ್ಳೆ, ಸಂಭ್ರಮ ಬಸವರಾಜ್ ಅವರನ್ನು ವಿಧಾನಸಭಾಗೆ ಕಳುಹಿಸುವದನ್ನು ನಿರ್ಧರಿಸಿದಂತಿದೆ ಎಂದರು.
ಮೋದಿ ಪ್ರಧಾನಿ ಆಗುವ ಮೊದಲ ಭಾರತ ಭ್ರಷ್ಟಾಚಾದ ಆರೋಪ ಇತ್ತೇ ಇಲ್ಲವೋ? ಎಂದು ಪ್ರಶ್ನಿಸಿದ ಅವರು, ಮೋದಿ ಬಂದ ಮೇಲೆ ಪ್ರಪಂಚದಲ್ಲಿಯೇ ಭಾರತ ಬಲಿಷ್ಟ ದೇಶವವಾಗಿ ರೂಪುಗೊಂಡಿತು. ಇದಕ್ಕಾಗಿ ಇದು ಕೇವಲ ಡಬಲ್ ಇಂಜಿನಲ್ ಅಲ್ಲ. ಪವರ್ ಫುಲ್ ಇಂಜಿನ್ ಸರ್ಕಾರ ಎಂದು ಬಣ್ಣಿಸಿದು.