ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಪರ ಗೋಪಾನಾಳ್ ವ್ಯಾಪ್ತಿ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ

ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಪರ ಗೋಪಾನಾಳ್ ವ್ಯಾಪ್ತಿ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ

ದಾವಣಗೆರೆ  : ಮಾಯಾಕೊಂಡ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಪರ ಗೋಪಾನಾಳ್ ವ್ಯಾಪ್ತಿ ಹಲವಾರು ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ಹಮ್ಮಿಕೊಳ್ಳಲಾಗಿತ್ತು.

ಗೋಪಾನಾಳ್ ಪಂಚಾಯಿತಿ ಯ ಹೀರೆ ತೋಗಲೇರಿ, ಚಿಕ್ಕ ತೋಗಲೇರಿ,ಯರವನಾಗತಿಹಳ್ಳಿ, ಕ್ಯಾಂಪ್, ಕೈದಾಳ್ ಪಂಚಾಯಿತಿಯ ಕೊಲ್ಕಂಟೆ, ಕಲ್ಕೆರೆ, ಕಲ್ಕೆರೆ ಕ್ಯಾಂಪ್, ಕುಂಟಪಾಲನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಪರ ಮುಖಂಡರು, ಕಾರ್ಯಕರ್ತರು ಪ್ರಚಾರ ನಡೆಸಿದರು.

ಬಸವಂತಪ್ಪ ಕಳೆದ ಬಾರಿ ಕೆಲವೇ ಮತಗಳ ಅಂತರದಿಂದ ಸೋಲುಂಡರೂ ನಿರಂತರ ಜನ ಸಂಪರ್ಕ ದಲ್ಲಿರುವ ಸರಳ ಸಜ್ಜನಿಕೆ ವ್ಯಕ್ತಿ, ಆಸ್ಪತ್ರೆಗೆ ದಾಖಲು ಬಡವರ ಮರಣೋತ್ತರ ಪರೀಕ್ಷೆ ಮಾಡಿಸಿ ಹಗಲಿರುಳು ಪೋನ್ ಮಾಡಿದರೂ ಸೀಗುವಂತಹ ಸಮಾಜ ಸೇವಕ, 108ಅಂಬ್ಯಲೇನ್ಸ್ ಅಂತೆಯೇ ಕ್ಷೇತ್ರ ಕಾರ್ಯ ಮಾಡಿದ ಬಡವರ, ಶೋಷಿತರ ಪರ ಸೇವೆ ಸಲ್ಲಿಸಿದ ಸಾಮಾನ್ಯ ರಿಗೂ ಸಿಗುವ, ಹಿರಿಯರಿಗೆ ತಮ್ಮನಾಗಿ ಕಿರಿಯರಿಗೆ ಪ್ರೀತಿ ಸಹನೆ ಅಕ್ಕರೆ ಯು ವ್ಯಕ್ತಿತ್ವ ಹೊಂದಿರುವ ಬಸವಂತಪ್ಪ ಈ ಬಾರಿ ಕ್ಷೇತ್ರದಲ್ಲಿ ಸೇವೆ ಮಾಡುವ ಅವಕಾಶ ಕಲ್ಪಿಸುವ ಮೂಲಕ ಹೆಚ್ಚಿನ ಬಹುಮತದ ಮೂಲಕ ಆಯ್ಕೆ ಮಾಡಬೇಕೆಂದು ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕುಕ್ಕುವಾಡ ಮಂಜಣ್ಣನವರು  ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಪರ ಗೋಪಾನಾಳ್ ವ್ಯಾಪ್ತಿ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ

ಪ್ರಚಾರ ಸಭೆ ಯಲ್ಲಿ ಅತ್ತಿಗೆರೆ ರವಿ,ಗೋಪಾನಾಳ್ ಕುಮಾರ್ ಸ್ವಾಮಿ, ನೂರುಲ್ಲಾ, ಲಿಂಗರಾಜ್, ಶೇಖರಪ್ಪ, ಕೊಲ್ಕಂಟೆ ಬಸವರಾಜ್, ಓಂಕಾರಪ್ಪ, ಅಣ್ಣಪ್ಪ, ಲೋಕೇಶ್, ಲೋಕಿಕೆರೆ ಅಭಿಷೇಕ್, ಬೇಕರಿ ಹನುಮಂತಪ್ಪ,ಪೆನ್ನಜ್ಜರ ಅಂಜಿನಪ್ಪ, ಪಂಚಾಯಿತಿ ಸದಸ್ಯ ರಾದ ಮೂರ್ತಿ ಪ್ಪ, ಉಮೇಶ್,ಪಿ.ಟಿ.ಹನುಮಂತಪ್ಪ, ಮೃತ್ಯುಂಜಯ,ತಾಳಿಕಟ್ಟೆ ನಾಗರಾಜ್, ರವಿಕುಮಾರ್, ಶ್ಯಾಗಲೆ ಸತೀಶ್, ರುದ್ರಪ್ಪ, ಮಲ್ಲಿಕಾರ್ಜುನ,ಯರನಾಯಕನಹಳ್ಳಿ ಕ್ಯಾಂಪ್ ಬಾಬಣ್ಣ, ಲೋಕಿಕೆರೆ ತಿಪ್ಪಣ್ಣ, ಓಬಳೇಶ್, ಸೇರಿದಂತೆ ಹಲವು ಕಲ್ಕೆರೆ,ಕಲ್ಲುಬಂಡೆ, ಮುಖಂಡರು, ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡು ಬಸವಂತಪ್ಪ ಪರ ಮತ ಯಾಚಿಸಿದರು.

 

Leave a Reply

Your email address will not be published. Required fields are marked *

error: Content is protected !!