ಜಿಲ್ಲೆಯ ಪ್ರಮುಖ ಸರ್ಕಾರಿ ಕಚೇರಿಗೆ ಮರದ ಬಾಗಿಲ ಕೊರತೆ.! ಮರದ ಬಾಗಿಲು ಹಾಕಿಸಲು ಹಣದ ಕೊರತೆಯಾ..?

IMG-20210713-WA0008

Exclusive

ದಾವಣಗೆರೆ: ಜಿಲ್ಲಾ ಪಂಚಾಯತ್ ನಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೋಟ್ಯಾಂತರ ರೂಪಾಯಿ ಸರ್ಕಾರದಿಂದ ಹಣ ಹರಿದು ಬರುತ್ತೆ ಅದರೂ ಜಿಪಂ ಮುಖ್ಯಲನ್ನೇ ಭದ್ರವಾಗಿ ಮಾಡಿಸುವಲ್ಲಿ ಜಿಪಂ ಮರೆತಂತಿದೆ.!

ಬರೋಬ್ಬರಿ 22 ವರ್ಷಗಳ ಹಿಂದೆ ಅಂದರೆ 1999 ರಲ್ಲಿಯೇ ಜಿಪಂ ಕಚೇರಿ ನಿರ್ಮಾಣದ ಶಂಕುಸ್ಥಾಪನೆ ಮಾಡಲಾಗಿದೆ. ಅಂದಿನಿಂದ ಇಂದಿನವರೆಗೂ ಅಲ್ಯೂಮಿನಿಯಂ ಬಾಗಿಲೇ ಅದಕ್ಕೆ ಖಾಯಂ ಆಗಿದೆ.

ಕೊಟ್ಯಾಂತರ ಹಣ ಸರ್ಕಾರದಿಂದ ಬರುತ್ತದೆ. ಆದರೆ, ಕನಿಷ್ಟ ಮುಖ್ಯದ್ವಾರವನ್ನು ಭದ್ರ ಪಡಿಸುವ ಇರಾದೆ ಯಾವೊಬ್ಬ ಅಧಿಕಾರಿಗೂ ಇದ್ದಂತೆ ಕಾಣುತ್ತಿಲ್ಲ.‌ ಕಚೇರಿಯಲ್ಲಿ ಮುಖ್ಯವಾದ ಕಡತಗಳು‌ ಇರುತ್ತವೆ. ಹಾಗೊಂದು ವೇಳೆ ಅವುಗಳು ಕಳ್ಳತನವಾದರೆ ಅದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಅಧಿಕಾರಿಗಳಿಗೆ ಇದುವರೆಗೂ ಮೂಡಿಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ.

ಜಿಪಂ ಆವರಣದಲ್ಲಿ ಫೆವರ್ಸ್ ಹಾಕಿಸಲು, ಆವರಣದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲು ಹಣವಿದೆ. ಆದರೆ, ಜಿಲ್ಲಾ ಪಂಚಾಯತ ಮುಖ್ಯ ದ್ವಾರದಲ್ಲಿ ಜಿಪಂ ನಿರ್ಮಾಣವಾದ ಸಂದರ್ಭದಿಂದ ಅಲ್ಯುಮಿನಿಯಮ್ ಬಾಗಿಲೆ ಇದ್ದು, ಮರದ ಬಾಗಿಲು ಹಾಕಿಸಲು ಇವರಿಗೆ ಹಣವಿಲ್ಲವಾ ಅಥವಾ ಉದ್ದೇಶ ಪೂರ್ವಕವಾಗಿಯೇ ಹಾಗೆಯೇ ಬಿಟ್ಟಿದ್ದಾರಾ ಅದನ್ನು ಅಧಿಕಾರಿಗಳೇ ಸ್ಪಷ್ಟ ಪಡಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!