ಬಿಜೆಪಿಗೆ ಮತ ನೀಡಿ ಎಂದ ಚುನಾವಣಾ ಸಿಬ್ಬಂದಿ: ಸಿಬ್ಬಂದಿ ಅಮಾನತಿಗೆ ಹೆಚ್ ಎಸ್ ಶಿವಶಂಕರ್ ಆಗ್ರಹ

ದಾವಣಗೆರೆ: ಹರಿಹರ ನಗರದಲ್ಲಿ ಚುನಾವಣಾ ಬೂತ್ ಒಂದರಲ್ಲಿನ ಸಿಬ್ಬಂದಿ ಮತದಾರರಿಗೆ ಬಿಜೆಪಿಗೆ ಮತ ನೀಡಿ ಎಂದು ಹೇಳಿದ್ದರಿಂದ ಕೆಲ ಪ್ರಕ್ಷುಬ್ಧ ವಾತಾವಣ ಉಂಟಾಗಿತ್ತು.
ಹರಿಹರ ನಗರದ ಬೂತ್ ನಂಬರ್ 32 ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ರೂಂ ನಂಬರ್ 2ರಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ಮತದಾನಕ್ಕೆ ಬಂದ ಮತದಾರನಿಗೆ ಬಿಜೆಪಿಗೆ ಮತ ನೀಡಲು ಹೇಳಿದ್ದರು.
ಈ ವಿಷಯ ತಿಳಿದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹಾಗೂ ಬೆಂಬಲಿಗರು ಮತಗಟ್ಟೆ ಬಳಿ ಬಂದು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೆ, ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕೆಲ ಹೊತ್ತು ಮತದಾನ ಸ್ಥಗಿತವಾಗಿತ್ತು.