ಡಿ ಆರ್ ಆರ್ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಆಹ್ವಾನ

ಡಿ ಆರ್ ಆರ್ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಆಹ್ವಾನ

ದಾವಣಗೆರೆ : ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ಡಿ.ಆರ್.ಆರ್. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲಭ್ಯವಿರುವ ಹಾಗೂ ರಾಜ್ಯದ ಆಯ್ದ 26 ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಲಭ್ಯವಿರುವ ಪ್ರಥಮ ಸೆಮಿಸ್ಟರ್ ಡಿಪ್ಲೊಮಾ ಪ್ರವೇಶ ಸ್ಥಾನಗಳನ್ನು ಮೆರಿಟ್ ಕಮ್ ರೋಸ್ಟರ್ ಪ್ರಕಾರ ರಾಜ್ಯ ಮಟ್ಟದಲ್ಲಿ ನಾನ್ ಇಂಟರ್ ಆಕ್ಟಿವ್ ಕೌನ್ಸಿಲಿಂಗ್ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಮೇ.18 ರಂದು ಸಂಜೆ 5 ಗಂಟೆ ಒಳಗೆ ಪೂರಕ ದಾಖಲೆಗಳೊಂದಿಗೆ ಸಂಸ್ಥೆಯ ಕಚೇರಿಯ ಪ್ರವೇಶ ವಿಭಾಗದಲ್ಲಿ ಸಲ್ಲಿಸಿ, ಆನ್‌ಲೈನ್ ಮೂಲಕ ದಾಖಲಿಸಿಕೊಂಡು, ಕೋರ್ಸುಗಳ ಆದ್ಯತಾ ಪಟ್ಟಿಯನ್ನು ದಾಖಲಿಸಿ ಸ್ವೀಕೃತಿ ಪಡೆಯಬೇಕು. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ.35 ಅಂಕಗಳನ್ನು ಪಡೆದು ಉತ್ತೀರ್ಣರಾಗಬೇಕು. ಮೇ 18 ರಂದು ಸಂಜೆ 6 ಗಂಟೆಯ ನಂತರ ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಪ್ರಕಟಣೆ ಮಾಡಲಾಗುತ್ತದೆ.

ಮೇ 19 ರಂದು ಮೆರಿಟ್ ಪಟ್ಟಿಗೆ ಆಕ್ಷೇಪಣೆ ಮತ್ತು ತಿದ್ದುಪಡಿ ನಡೆಸಲಾಗುವುದು. ಮೇ 19 ಸಂಜೆ 5 ಗಂಟೆಯ ನಂತರ ಅಂತಿಮ ಮೆರಿಟ್ ಪಟ್ಟಿ ಪ್ರಕಠಣೆ ಮಾಡಲಾಗುವುದು. ಮೇ 20 ರಂದು ಸಂಜೆ 5 ಗಂಟೆಯ ನಂತರ ಸೀಟು ಹಂಚಿಕೆ ಮಾಡಲಾಗುವುದು. ಮೇ 21 ರಿಂದ 23 ರವರೆಗೆ ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ನಿಗದಿತ ಶುಲ್ಕದೊಂದಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುವುದು ಎಂದು ಡಿಆರ್‌ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡಾ|| ಎ.ಎಂ ರವಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!