ತುರ್ತು ಪರಿಸ್ಥಿತಿಯಲ್ಲಿ ಸುರಕ್ಷತಾ ಕ್ರಮ: ರೈಲು ಗಾಡಿ ಅಪಘಾತದ ಕಿರುನಾಟಕ ಪ್ರದರ್ಶನ

emergency, situation, safety, action, train, carriage, accident, skit, show,

ದಾವಣಗೆರೆ: ರೈಲುಗಾಡಿ ಅಪಘಾತದ ಸಂದರ್ಭದ ತುರ್ತು ಪರಿಸ್ಥಿತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳವ ಕುರಿತು ಕಿರುನಾಟಕ ಪ್ರದರ್ಶನವನ್ನು ಹರಿಹರ ರೈಲ್ವೆ ನಿಲ್ದಾಣದಲ್ಲಿ ನಾಟಕ ಪ್ರದರ್ಶನವನ್ನುಯ ಹಮ್ಮಿಕೊಳ್ಳಲಾಯಿತು ಅಭ್ಯಾಸ ಮಾಡಲು ರೈಲುಗಾಡಿ ಅಪಘಾತದಸಂಕಿರುನಾಟಕ ಆಯೋಜಿಸಲಾಯಿತು.

ಶುಕ್ರವಾರ ಮೈಸೂರು ವಿಭಾಗ ರೈಲ್ವೆ ವತಿಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳ ಸಹಯೋಗದೊಂದಿಗೆ ಹರಿಹರ ರೈಲ್ವೆ ನಿಲ್ದಾಣದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಆಪತ್ಕಾಲದಲ್ಲಿ ಸಕ್ರಿಯಗೊಳಿಸಲು ಹಲವಾರು ಚಟುವಟಿಕೆಗಳನ್ನು ಒಳಗೊಂಡಿರುವ ವಿಪತ್ತು ನಿರ್ವಹಣಾ ಯೋಜನೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಪೂರ್ಣ ಪ್ರಮಾಣದ ಅಣಕು ಕವಾಯತು ಆಯೋಜಿಸಲಾಗಿತ್ತು. ವಿಪತ್ತು ನಿರ್ವಹಣೆಯೆಂದರೆ, ಒಂದು ಅರ್ಥದಲ್ಲಿ, ಸಾಧ್ಯವಾದಷ್ಟು ವೇಗವಾಗಿ ಸೂಕ್ತವಾದ ಸಹಾಯವನ್ನು ನೀಡುವ ಮೂಲಕ ಅಮೂಲ್ಯ ಮಾನವ ಜೀವ ಮತ್ತು ಸಂಭಾವ್ಯ ಆಸ್ತಿ ನಷ್ಟಗಳನ್ನು ಕಡಿಮೆ ಮಾಡುವ ಅಥವಾ ಸಂಪೂರ್ಣವಾಗಿ ತಪ್ಪಿಸುವ ಗುರಿಯನ್ನು ಹೊಂದಿದೆ.

ತುರ್ತು, ಪರಿಸ್ಥಿತಿ, ಸುರಕ್ಷತಾ, ಕ್ರಮ, ರೈಲು, ಗಾಡಿ, ಅಪಘಾತ, ಕಿರುನಾಟಕ, ಪ್ರದರ್ಶನ,
                                              ತುರ್ತು, ಪರಿಸ್ಥಿತಿ, ಸುರಕ್ಷತಾ, ಕ್ರಮ, ರೈಲು, ಗಾಡಿ, ಅಪಘಾತ, ಕಿರುನಾಟಕ, ಪ್ರದರ್ಶನ,

ಅಣಕು ಕವಾಯತ್ತಿನ ಬಗ್ಗೆ: ಅರಸಿಕೆರೆಯಿಂದ ಹಾವೇರಿಗೆ ಹೋಗುತ್ತಿದ್ದ ವಿಶೇಷ ರೈಲಿನ SWಖ 01435 ಮತ್ತು SWಖ 14242 – ಎರಡು ಸಾಮಾನ್ಯ ದರ್ಜೆಯ ಪ್ಯಾಸೆಂಜರ್ ಬೋಗಿಗಳು ಹರಿಹರ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಏಒ 337/5-8 ನಲ್ಲಿ ಇಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ಹಳಿತಪ್ಪಿ ಮಗುಚಿ ಬಿದ್ದಿರುವ ಸನ್ನಿವೇಶ ಸೃಷ್ಟಿ ಮಾಡಲಾಗಿತ್ತು. ಘಟನೆಯ ಸಂದೇಶವನ್ನು ಸ್ವೀಕರಿಸಿದ ತಕ್ಷಣವೇ ರೈಲ್ವೆ ಅಧಿಕಾರಿಗಳು ನಿಗದಿತ ಮಾರ್ಗಸೂಚಿಗಳ ಪ್ರಕಾರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅಪಘಾತ ಸ್ಥಳಕ್ಕೆ ಧಾವಿಸಿದರು. ಎನ್‍ಡಿಆರ್‍ಎಫ್ ತಂಡವು ಅಸಿಸ್ಟೆಂಟ್ ಕಮಾಂಡೆಂಟ್ ಸೆಂಥಿಲ್ ಕುಮಾರ್ ನೇತೃತ್ವದಲ್ಲಿ  23 ಸಿಬ್ಬಂದಿಯನ್ನು ಒಳಗೊಂಡಿತ್ತು. ಎಸ್.ಎನ್. ಕಿರಣ್ ಕುಮಾರ್ ನೇತೃತ್ವದ ಎಸ್‍ಡಿಆರ್‍ಎಫ್ ತಂಡ ಮತ್ತು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್ ಅವರ ನೇತೃತ್ವದ ಜಿಲ್ಲಾ ಅಗ್ನಿಶಾಮಕ ದಳದ ತಂಡಗಳು ಅವರಿಗೆ ವಿಷಯ ತಿಳಿಸಿದ 20 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದವು. ರೈಲ್ವೆ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂμÁ ಸಿಬ್ಬಂದಿ ಸ್ಥಳದಲ್ಲಿಯೆ ಪ್ರಥಮ ಚಿಕಿತ್ಸೆ ನೀಡಿ ಎರಡು ಬೋಗಿಗಳಲ್ಲಿ ಸಿಲುಕಿಗೊಂಡಿದ್ದ ಸುಮಾರು 22 ಪ್ರಯಾಣಿಕರನ್ನು ಆಂಬ್ಯುಲೆನ್ಸ್ ನೊಳಗೆ ಕರೆದುಕೊಳ್ಳಲು ಸಹಕರಿಸಿದರು. ಅಣಕು ಕವಾಯತ್ತಿನಲ್ಲಿ 2 ಬೋಗಿಗಳಲ್ಲಿ 22 ಪ್ರಯಾಣಿಕರು ಸಿಕ್ಕಿಬಿದ್ದಿದ್ದು, ಇಬ್ಬರ ಸಾವು ಮತ್ತು 8-10 ಜನರಿಗೆ ಗಂಭೀರ ಗಾಯಗಳ ಬಗ್ಗೆ ವರದಿ ಬಂದಿರುವುದಾಗಿ ತಿಳಿಸಿದರು.

ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ರವರು ಮತ್ತು ಇತರ ಹಿರಿಯ ಅಧಿಕಾರಿಗಳು ಮೈಸೂರಿನ ಕಂಟ್ರೋಲ್ ಆಫೀಸ್‍ನಿಂದ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಸುಮಾರು 110 ನಿಮಿಷಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆದು, 11.50ಕ್ಕೆ ಪೂರ್ಣಗೊಂಡಿತು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಇ.ವಿಜಯರವರು ಮತ್ತು ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ನೀರಜ್ ಬಫ್ನಾ ಅವರೊಂದಿಗೆ  ಆ ಭಾಗದಲ್ಲಿ ಲಭ್ಯವಿದ್ದ ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸ್ಥಳದಲ್ಲಿನ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡಿದರು.

ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು ಇಂತಹ ನಿಯತಕಾಲಿಕ ಕಸರತ್ತಿನ ಮಹತ್ವವನ್ನು ವಿವರಿಸಿದರು ಮತ್ತು ಡಿಸೆಂಬರ್ 2022 ರಲ್ಲಿ ಇದೇ ರೀತಿಯ ಕವಾಯತ್ತನ್ನು ನಡೆಸಲಾಯಿತು ಎಂದು ಹೇಳಿ ಅಣಕು ವ್ಯಾಯಾಮಗಳು ಸನ್ನದ್ಧತೆಯನ್ನು ಸುಧಾರಿಸುವಲ್ಲಿ ಮತ್ತು ಮಾನವ ಅಂಶದಿಂದ ಉಂಟಾಗುವ ವಿಪತ್ತುಗಳನ್ನು ತಡೆಗಟ್ಟುವಲ್ಲಿ ಸರಿಯಾದ ವಿಧಾನಗಳನ್ನು ತೋರಿಸುತ್ತವೆ ಎಂದು ಪ್ರತಿಪಾದಿಸಿ ಒತ್ತಿ ಹೇಳಿದರು. ಅಮೂಲ್ಯವಾದ ಮಾನವ ಜೀವಗಳ ನಷ್ಟವಾಗಲಿ ಅಥವಾ ಮೂಲಸೌಕರ್ಯಕ್ಕೆ ಹಾನಿಯಾಗಲಿ, ಅವುಗಳ ಪ್ರಭಾವವನ್ನು ಕಡಿಮೆ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ರೈಲ್ವೆ ಸಚಿವಾಲಯದ (ರೈಲ್ವೆ ಮಂಡಳಿ) ಆದೇಶದಂತೆ ಸಂತ್ರಸ್ತರ ಸಂಕಷ್ಟಗಳನ್ನು ತಗ್ಗಿಸಲು ಇಂತಹ ಕಸರತ್ತುಗಳ ಸಮಯದಲ್ಲಿ ಆಪತ್ತು ತಡೆಗಟ್ಟುವ ಕ್ರಮಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

ವಿಪತ್ತುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಮಗ್ರ ವಿಪತ್ತು ನಿರ್ವಹಣಾ ಯೋಜನೆ ಜಾರಿಯಲ್ಲಿದೆ ಎಂದು ಶ್ರೀಮತಿ ಅಗರ್ವಾಲ್ ರವರು ತಿಳಿಸಿದರು. ವಿವಿಧ ನಾಗರಿಕ ಅಧಿಕಾರಿಗಳೊಂದಿಗೆ ಸಮನ್ವಯವನ್ನು ಸಾಧಿಸಲು ದೃಢವಾದ ಕಾರ್ಯವಿಧಾನವು ಅದರ ಬಹು ಮುಖ್ಯ ಭಾಗವಾಗಿದೆ. ಈ ರೀತಿಯ ಅಣಕು ಕವಾಯತುಗಳು ಯಾವಾಗಲೂ ಯಾವುದೇ ಘಟನೆಯ ವಿರುದ್ಧದ ಸನ್ನದ್ಧತೆಯನ್ನು ಪರೀಕ್ಷಿಸಲು ಸರಿಯಾದ ಸಾಧನವೆಂದು ಸಾಬೀತುಪಡಿಸಿವೆ ಮತ್ತು ಸನ್ನದ್ಧತೆಯನ್ನು ಸುಧಾರಿಸಲು ಕಲಿಕೆಯ ಪ್ರಕ್ರಿಯೆ ಸಹ ಆಗಿದೆ ಎಂದು ಅವರು ತಿಳಿಸಿದರು.

ರಕ್ಷಣಾ ತಂಡಗಳಲ್ಲದೆ ಆಂಬ್ಯುಲೆನ್ಸ್‍ಗಳೊಂದಿಗೆ ವೈದ್ಯಕೀಯ ವಿಭಾಗದ ಸಿಬ್ಬಂದಿಗಳು, ರೈಲ್ವೆ ರಕ್ಷಣಾ ಪಡೆ, ಅಗ್ನಿಶಾಮಕ ದಳ, ನಾಗರಿಕ ಆಡಳಿತದ ಪ್ರತಿನಿಧಿಗಳು, ಸರ್ಕಾರಿ ರೈಲ್ವೆ ಪೆÇಲೀಸ್ ಮತ್ತು ಸಿವಿಲ್ ಪೆÇಲೀಸರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

 

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!