ಮುಸ್ಲೀಂ ಯುವಕನೊಂದಿಗೆ ಬಿಜೆಪಿ ನಾಯಕನ ಮಗಳ ವಿವಾಹ ಮದುವೆ ಕಾರ್ಡ್ ವೈರಲ್ -ಹಿಂದುತ್ವವಾದಿಗಳು ಕಿಡಿ

ಉತ್ತರಾಖಂಡ್: ಮುಸ್ಲಿಂ ಯುವಕನೊಂದಿಗೆ ಬಿಜೆಪಿ ಮುಖಂಡರ ಮಗಳೊಬ್ಬಳ ವಿವಾಹ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಭಾರೀ ಸದ್ದು ಮಾಡ್ತಿದೆ.
ಹೌದು.. ಉತ್ತರಾಖಂಡ್ ರಾಜ್ಯದ ಪೌರಿ ಪ್ರದೇಶದ ಬಿಜೆಪಿ ಮುಖಂಡ, ಮಾಜಿ ಶಾಸಕ ಯಶ್ ಪಾಲ್ ಬೇನಾಮ್ ಅವರ ಪುತ್ರಿ ಮುಸ್ಲಿಂ ಯುವಕನ ಜೊತೆಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇವರಿಬ್ಬರ ವಿವಾಹ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಂಘ ಪರಿವಾರದ ಕಾರ್ಯಕರ್ತರು ಮತ್ತು ಹಿಂದುತ್ವವಾದಿಗಳು ಮಾಜಿ ಶಾಸಕನ ಇಬ್ಬಗೆ ನೀತಿಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದು, ಕಾರ್ಯಕರ್ತರಿಗೆ ಲವ್ ಜಿಹಾದ್ ಬಗ್ಗೆ ಬೋಧಿಸುವ ನೀವು, ತಮ್ಮ ಫ್ಯಾಮಿಲಿ ವಿಚಾರದಲ್ಲಿ ಮಾಡ್ತಿರೋದೇನು ಎಂದು ಪ್ರಶ್ನಿಸಿದ್ದಾರೆ.