ಗಂಡನ ಹೆಸರು ಹಣೆಯ ಮೇಲೆ ಅಚ್ಚೆ ಹಾಕಿಸಿಕೊಂಡ ಯುವತಿ ಕೆಲವರಿಂದ ಶ್ಲ್ಯಾಘನೆ, ಕೆಲವರಿಂದ ಆಕ್ರೋಶ

ಬೆಂಗಳೂರು : ಬೆಂಗಳೂರಿನ ಮಹಿಳೆಯೊಬ್ಬಳು ತನ್ನ ಹಣೆಯ ಮೇಲೆ ತನ್ನ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾಳೆ.
ಸದ್ಯ ಅಚ್ಚೆ ಹಾಕಿಸಿಕೊಂಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಲವಾರು ಇಂಟರ್ನೆಟ್ ಬಳಕೆದಾರರು ಇದಕ್ಕೆ ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ಬೆಂಗಳೂರಿನ ಟ್ಯಾಟೂ ಪಾರ್ಲರ್ ಕಿಂಗ್ ಮೇಕರ್ ಟ್ಯಾಟೂ ಸ್ಟುಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದೆ.
ಕ್ಲಿಪ್‌ನಲ್ಲಿರುವ ಮಹಿಳೆ ತನ್ನ ಪತಿಯ ಹೆಸರನ್ನು ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದನ್ನು ಕಾಣಬಹುದು. ಈಕೆಯ ಪತಿಯ ಹೆಸರು ಸತೀಶ್ ಎಂದೂ ತಿಳಿದುಬಂದಿದೆ. ಇನ್ನು, ಅಂತಿಮ ಫಾಂಟ್ ಸೈಜ್ ನಿರ್ಧರಿಸುವ ಮೊದಲು ಆ ಹೆಸರಿನಲ್ಲಿ ಬರೆದು ಮೊದಲು ಪೇಪರ್ ಪೀಸ್ ಅನ್ನು ಮಹಿಳೆಯ ಹಣೆಯ ಮೇಲೆ ಅಂಟಿಸಿ ಪರಿಶೀಲನೆ ಮಾಡಲಾಗಿದೆ. ಮಹಿಳೆ ಈ ಬಗ್ಗೆ ಅತ್ಯಂತ ಸಂತೋಷದಿಂದ ಮತ್ತು ಪ್ರೀತಿಯನ್ನು ಈ ರೀತಿ ವ್ಯಕ್ತಪಡಿಸುವುದರ ಬಗ್ಗೆ ಉತ್ಸುಕಳಾಗಿದ್ದಾಳೆ.
ಮಾರ್ಚ್ 18 ರಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಾಗಿನಿಂದ, ಈ ವಿಡಿಯೋ 2.6 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು 12.5 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಇನ್ನು, ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದು, ಕೆಲವರು ಆ ಮಹಿಳೆಯ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಾಗೂ, ಇದು ಮೂರ್ಖತನವಲ್ಲದೆ ಬೇರೇನೂ ಅಲ್ಲ. ನಿಜವಾದ ಪ್ರೀತಿಯನ್ನು ಸಾಬೀತುಪಡಿಸುವ ಅಗತ್ಯವಿಲ್ಲ, ಅದನ್ನು ನಿಮ್ಮ ಕಾಳಜಿ, ಪ್ರೀತಿ, ಆದ್ಯತೆಯಿಂದ ಅನುಭವಿಸಬೇಕು, ಯಾವುದಾದರೂ ಪರವಾಗಿಲ್ಲ, ಬೆಂಬಲಿಸುವುದು, ಉನ್ನತೀಕರಿಸುವುದು, ಅರ್ಥಮಾಡಿಕೊಳ್ಳುವುದು,” ಎಂದೂ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.