ಲಚುಮಿ ಕಿರುಚಿತ್ರಕ್ಕೆ ಭರದ ಚಿತ್ರೀಕರಣ

IMG-20210714-WA0041

 

ದಾವಣಗೆರೆ.ಜು.೧೪: ಲಚುಮಿ ಕಿರುಚಿತ್ರಕ್ಕೆ ಹರಿಹರದ ಬಳಿಯಿರುವ ಬೆಳ್ಳೂಡಿ ಗ್ರಾಮದಲ್ಲಿ ಭರದಿಂದ ಚಿತ್ರೀಕರಣ ನಡೆಯಿತು. ಈ ಕಿರುಚಿತ್ರದ ಪ್ರಮುಖ ಪಾತ್ರದಲ್ಲಿ ಜ್ಞಾನೇಶ್ವರ್ ಜವಳಿ, ಆಶಾ ಜಗದೀಶ್, ಬಾಲ ನಟಿ ಶ್ರೀಸನ್ನಿಧಿ, ಮಹಾಂತೇಶ್ ಹುಗ್ಗಿ, ಕೃಷ್ಣಸಾ ರಾಜೋಳಿ, ಮಂಜುನಾಥ್ ರಾಜೋಳಿ, ರಮೇಶ್ ಬಸವರಾಜ್, ತಿಪ್ಪೇಸ್ವಾಮಿ, ಮಂಜುನಾಥ್ ಪಿ ಎನ್, ಜಗದೀಶ್ ಮುಂತಾದವರು ನಟಿಸುತ್ತಿದ್ದು, ಗೋಲ್ಡನ್ ಮೀಡಿಯಾದವರು ಮೀಡಿಯಾ ನೆಕ್ಸ್÷್ಟ ಸಹಯೋಗದೊಂದಿಗೆ ನಿರ್ಮಿಸುತ್ತಿದ್ದಾರೆ. ಸಂಕೇತ್ ಚಿತ್ರಕತೆ-ನಿರ್ದೇಶನದ ಈ ಕಿರುಚಿತ್ರಕ್ಕೆ ದೀಪಾಕಾಂತಿ ಮತ್ತು ರುದ್ರಮುನಿ ಜೆ ಟಿ ಯವರ ನಿರ್ಮಾಣ ನಿರ್ವಹಣೆ ಇದೆ. ಸಂಗೀತ ಜೋಡಣೆ ಮತ್ತು ಸಂಕಲನವನ್ನು ಜ್ಞಾನೇಶ್ವರ್ ಜವಳಿ ಮಾಡುತ್ತಿದ್ದಾರೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಉದ್ದೇಶದಿಂದ ಈ ಕಿರುಚಿತ್ರವನ್ನು ನಿರ್ಮಿಸುತ್ತಿದ್ದು, ಶೀಘ್ರದಲ್ಲೇ ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ದೇಶಕರು ತಿಳಿಸಿದರು.

 

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!